ಸಂಡೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಪ್ರತಿಭಟನೆ

KannadaprabhaNewsNetwork |  
Published : May 03, 2024, 01:00 AM IST
್ | Kannada Prabha

ಸಾರಾಂಶ

ಸಚಿವ ಸಂತೋಷ್ ಲಾಡ್ ಮರಾಠ ಸಮಾಜಕ್ಕೆ ಆಸ್ತಿಯಾಗಿದ್ದಾರೆ. ಇವರು ಕೈಗೊಂಡ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಧಾರ್ಮಿಕ ಹಾಗೂ ರೈತರ ಪರ ಕಾರ್ಯಗಳು ಜನರ ನರನಾಡಿಗಳಲ್ಲಿ ತುಂಬಿಕೊಂಡಿವೆ.

ಸಂಡೂರು: ಮರಾಠ ಸಮುದಾಯದ ನಾಯಕ, ಸಚಿವ ಸಂತೋಷ್ ಲಾಡ್ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಪಟ್ಟಣದಲ್ಲಿ ಗುರುವಾರ ಮರಾಠ ಸಮಾಜ ಸೇರಿದಂತೆ ವಿವಿಧ ಸಮಾಜದ ಮುಖಂಡರು ಪ್ರತಿಭಟನೆ ನಡೆಸಿದರು.

ಮುಖಂಡರು ತಮ್ಮ ಮನವಿಯನ್ನು ಶಿರಸ್ತೇದಾರ ಕೆ.ಎಂ. ಶಿವಕುಮಾರ್ ಅವರಿಗೆ ಸಲ್ಲಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ಮರಾಠ ಸಮಾಜದ ಅಧ್ಯಕ್ಷ ಮಾರುತಿರಾವ್ ಭೋಸ್ಲೆ, ಸಚಿವ ಸಂತೋಷ್ ಲಾಡ್ ಮರಾಠ ಸಮಾಜಕ್ಕೆ ಆಸ್ತಿಯಾಗಿದ್ದಾರೆ. ಇವರು ಕೈಗೊಂಡ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಧಾರ್ಮಿಕ ಹಾಗೂ ರೈತರ ಪರ ಕಾರ್ಯಗಳು ಜನರ ನರನಾಡಿಗಳಲ್ಲಿ ತುಂಬಿಕೊಂಡಿವೆ. ಇಂತಹ ವ್ಯಕ್ತಿಗೆ ನಾಲಾಯಕ್ ಎಂಬ ಪದ ಬಳಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವಮಾನಿಸಿದ್ದಾರೆ. ಇದನ್ನು ಮರಾಠ ಸಮಾಜ ಖಂಡಿಸುತ್ತದೆ. ಬಿಜೆಪಿ ರಾಜ್ಯಾಧ್ಯಕ್ಷರು ಸಂತೋಷ್ ಲಾಡ್ ಅವರಲ್ಲಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಈರೇಶ್ ಶಿಂಧೆ, ಸಂತೋಷ್, ಸಾಧನಾ ಬೋಯಿಟೆ, ಚಿತ್ರಿಕಿ ಸತೀಶಕುಮಾರ್, ಚಿತ್ರಿಕಿ ಮಹಾಬಲೇಶ್ವರ, ಎಲ್.ಎಚ್. ಶಿವಕುಮಾರ್, ಕೆ.ವಿ. ಸುರೇಶ್, ಹನುಮೇಶ್, ವೆಂಕಟೇಶ್, ಆರ್.ಕೆ. ಹೆಗಡೆ, ಜಯರಾಂ, ರಮೇಶ್ ಗಡಾದ್, ಪರಶುರಾಮ್, ಜೆಬಿಟಿ ಬಸವರಾಜ್, ಕೆ. ಮಲ್ಲಿಕಾರ್ಜುನ, ಸತ್ಯನಾರಾಯಣ ಮಾಸ್ತಿ, ಸತ್ಯನಾರಾಯಣ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್‌ನಿಂದ ಗೆದ್ದಿದ್ದ ಸುಬ್ಬಾರೆಡ್ಡಿ ಶಾಸಕತ್ವಕ್ಕೆ ‘ಸುಪ್ರೀಂ’ ರಕ್ಷಣೆ
ಯೋಗೇಶ್ ಗೌಡ ಹತ್ಯೆ ಕೇಸ್: ವಿನಯ್‌ ಕುಲಕರ್ಣಿಗೆ ಬೇಲ್‌