ಬೆಳ್ತಂಗಡಿ: ಸಂವಿಧಾನ ಬದ್ದವಾದ ಕಾರ್ಮಿಕ ವರ್ಗದ, ರೈತ ವರ್ಗದ ಮೂಲಭೂತ ಹಕ್ಕುಗಳ ನಿರಾಕರಿಸುವಂತಹ, ಕಾರ್ಮಿಕರು ತ್ಯಾಗ ಬಲಿದಾನಗಳಿಂದ ಕಾನೂನು ರೂಪವಾಗಿ ಪಡೆದ ಹಕ್ಕು ಸವಲತ್ತುಗಳನ್ನು ರದ್ದುಪಡಿಸಿ ಕಾರ್ಪೋರೇಟರ್ ಕಂಪನಿಗಳ ಪರವಾದ 4 ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಿ ಕೇಂದ್ರದ ಮೋದಿ ಸರಕಾರ ಭಾರತೀಯರಿಗೆ ದ್ರೋಹ ಎಸಗಿದ ಕೇಂದ್ರ ಸರಕಾರದ ಕಾರ್ಮಿಕ ದ್ರೋಹವನ್ನು ಎಂದೂ ಸಹಿಸೆವು ಎಂದು ಸಿಐಟಿಯು ದ.ಕ. ಜಿಲ್ಲಾಧ್ಯಕ್ಷ ನ್ಯಾಯವಾದಿ ಬಿ.ಎಂ. ಭಟ್ ಹೇಳಿದ್ದಾರೆ.
ಭಾರತದ ಇತಿಹಾಸ ಹಸಿವು, ಅವಮಾನ, ಅಸಮಾನತೆ, ಜೀತಗಳ ವಿರುದ್ದ ಮಾನವೀಯ ಮೌಲ್ಯಗಳಿಗಾಗಿ ನಡೆದ ಹೋರಾಟದ ದೀರ್ಘ ಹಾದಿಯ ಕಥೆಯಾಗಿದೆ. ಕಾರ್ಮಿಕ ವಿರೋಧಿ, ರೈತ ವಿರೋದಿ ಮಾತ್ರವಲ್ಲ ಮನುಷ್ಯ ವಿರೋಧಿ ಸರಕಾರವಾಗಿದೆ. ಯುವ ಜನಾಂಗವನ್ನು ತನ್ನ ಭಕ್ತರನ್ನಾಗಿಸಿ ಕಿಡಿಗೇಡಿಗಳನ್ನಾಗಿಸಿ, ಕ್ರಿಮನಲ್ ಗಳನ್ನಾಗಿಸಿದೆ ಎಂದರು.