ಬಸವಕಲ್ಯಾಣ: ಕೇಂದ್ರದ ಬಿಜೆಪಿ ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನ್ರೇಗಾ) ಹೆಸರನ್ನು ಬದಲಾಯಿಸಿದನ್ನು ಖಂಡಿಸಿ ಬಸವಕಲ್ಯಾಣ ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕ್ರತರು ಪ್ರತಿಭಟನೆ ನಡೆಸಿ ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿದರು.
ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಗಾಂಧೀಜಿಯವರ ಬಗ್ಗೆ ಯಾವುದೇ ಅಭಿಮಾನವಿಲ್ಲ. ಅದಕ್ಕಾಗಿಯೇ ಒಂದೊಂದೇ ಯೋಜನೆಗಳಿಂದ ಅವರ ಹೆಸರನ್ನು ತೆಗೆದು ಹಾಕುವ ಹುನ್ನಾರ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಅಜರಲಿ ನವರಂಗ್ ಆರೋಪಿಸಿದರು.
ಮನ್ರೇಗಾ ಯೋಜನೆಯಡಿ ಗ್ರಾಮೀಣ ಭಾಗದ ಲಕ್ಷಾಂತರ ಕಾರ್ಮಿಕರಿಗೆ ಉದ್ಯೋಗ ದೊರಕುತ್ತಿದ್ದು, ಯೋಜನೆಯ ಹೆಸರನ್ನು ಬದಲಿಸುವುದು ಕಾರ್ಮಿಕರ ಭಾವನೆಗಳಿಗೆ ಧಕ್ಕೆ ತರುವಂತದ್ದು, ತಕ್ಷಣವೇ ಕೇಂದ್ರ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಆಗ್ರಹಿಸಿದರು.ಪ್ರತಿಭಟನೆಯ ಹಿನ್ನಲೆಯಲ್ಲಿ ಕೆಲ ಕಾಲ ಡಾ.ಅಂಬೇಡ್ಕರ್ ವೃತ್ತದಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಡಿಕೆ ದಾವೂದ್, ಸಂತೋಷ್ ಗುತ್ತೇದಾರ್, ಸಂಜಯ್ ಸಿಂಗ್ ಹಜಾರಿ, ಮನೋಜ್ ಮಾಶೆಟ್ಟಿ, ಮೇಘನಾಥ್ ಕಾರಬರಿ, ರಾಮ್ ಭಾಕನಳ, ಜಿತೇಂದ್ರ ನಾರಾಯಣಪುರ ನಗರಸಭೆ ಅಧ್ಯಕ್ಷ ಸಗೀರೋದ್ದಿನ್, ಸದಸ್ಯರಾದ ರವೀಂದ್ರ ಬೋರಳೆ, ರಾಮ್ ಜಾಧವ್, ಕರೀಮ್ ಸಾಬ್, ಮೂಸಾ ಕೆ.ಬಿ.ಎನ್, ಭೀಮಶಾ ಫುಲೆ, ಮಲ್ಲಿಕಾರ್ಜುನ್ ಬೊಕ್ಕೆ, ಮೋಯಿನ್ ಪಾಶಾ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸವಿತಾ ಕಾಂಬಳೆ, ಅನುಷಯಾ ಮಂಠಾಳಕರ, ಆರತಿ ಬಾಯಿ, ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.