ಕೇಣಿಯಲ್ಲಿ ಪುರಸಭೆಯ ಪೌರ ಕಾರ್ಮಿಕರಿಗೆ ನಿರ್ಮಿಸಲು ಉದ್ದೇಶಿಸಲಾಗಿರುವ ವಸತಿ ಗೃಹ ಡಿಪೋ ಜಾಗದಲ್ಲಿ ನಿರ್ಮಿಸಬಾರದೆಂದು ಆಗ್ರಹಿಸಿ ಕೇಣಿಯ ಬಂಟ ಸಮಾಜದ ನಾಗರಿಕರು ಭಾನುವಾರ ಪ್ರತಿಭಟನೆ ನಡೆಸಿ ಆಗ್ರಹಿಸಿದರು.
ಅಂಕೋಲಾ: ಕೇಣಿಯಲ್ಲಿ ಪುರಸಭೆಯ ಪೌರ ಕಾರ್ಮಿಕರಿಗೆ ನಿರ್ಮಿಸಲು ಉದ್ದೇಶಿಸಲಾಗಿರುವ ವಸತಿ ಗೃಹ ಡಿಪೋ ಜಾಗದಲ್ಲಿ ನಿರ್ಮಿಸಬಾರದೆಂದು ಆಗ್ರಹಿಸಿ ಕೇಣಿಯ ಬಂಟ ಸಮಾಜದ ನಾಗರಿಕರು ಭಾನುವಾರ ಪ್ರತಿಭಟನೆ ನಡೆಸಿ ಆಗ್ರಹಿಸಿದರು.
ಬಂಟ ಸಮಾಜದ ಪ್ರಮುಖ, ನಿವೃತ್ತ ಪ್ರಾಚಾರ್ಯ ರವೀಂದ್ರ ಕೇಣಿ ಮಾತನಾಡಿ, ಉಕ ಜಿಲ್ಲೆಯಲ್ಲಿರುವ ಬಂಟ ಸಮಾಜದಲ್ಲಿ ಶೇ.೭೫ ಜನ ಕೇಣಿಯಲ್ಲೆ ವಾಸವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಂಟ ಸಮಾಜದ ಸಮುದಾಯ ಭವನಕ್ಕಾಗಿ ಅಥವಾ ವಾಚನಾಲಯಕ್ಕಾಗಿ,ಇತರೆ ಸಾಮಾಜಿಕ ಚಟುವಟಿಕೆಗಾಗಿ ಮೂಲಭೂತ ಸೌಕರ್ಯ ಕಲ್ಪಿಸಿಕೊಡಲಿಕ್ಕೆ ಈಗಿರುವ ಕೇಣಿಯ ಡಿಪೋ ಇರುವ ಜಾಗ ಅತ್ಯಂತ ಸೂಕ್ತವಾಗಿದೆ.ಹೀಗಾಗಿ ಈ ಜಾಗವನ್ನು ಯಾವುದೇ ಕಾರಣಕ್ಕೂ ಪೌರ ಕಾರ್ಮಿಕರ ವಸತಿ ಗೃಹ ನಿರ್ಮಿಸಲು ಅವಕಾಶ ನೀಡಬಾರದು. ಪೌರ ಕಾರ್ಮಿಕರ ವಸತಿ ಗೃಹ ನಿರ್ಮಿಸಲು ಉದ್ದೇಶಿಸಿರುವದು ಸ್ವಾಗತಾರ್ಹ. ಈ ಬಗ್ಗೆ ನಮ್ಮ ಯಾವುದೇ ವಿರೋಧ ಇಲ್ಲ. ಆದರೆ ಡಿಪೋ ಜಾಗ ಬಳಸುವದನ್ನು ಕೈ ಬಿಟ್ಟು,ಪುರಸಭೆಯ ಮಾಲಿಕತ್ವದಲ್ಲಿರುವ ಇತರೆ ಜಾಗ ಬಳಸಿಕೊಂಡು ಪೌರ ಕಾರ್ಮಿಕರ ವಸತಿ ಗೃಹ ನಿರ್ಮಿಸುವಂತಾಗಲಿ ಎಂದು ಶಾಸಕರು, ಜಿಲ್ಲಾಧಿಕಾರಿಗಳು, ಮುಖ್ಯಾಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸಲಿ ಎಂದು ಒತ್ತಾಯಿಸಿದರು.
ಸುದೀಪ ಬಂಟ ಮಾತನಾಡಿ, ಜ.೯ ರಂದು ಡಿಪೋ ಜಾಗದಲ್ಲಿ ಪೌರ ಕಾರ್ಮಿಕರ ವಸತಿ ಗೃಹದ ಅಡಿಗಲ್ಲು ಸಮಾರಂಭ ಏರ್ಪಡಿಸಲಾಗಿದೆ. ಇದಕ್ಕೆ ನಾವು ಯಾವುದೇ ಕಾರಣಕ್ಕೂ ಅವಕಾಶ ನೀಡುವದಿಲ್ಲ. ಪುರಸಭೆಯವರು ಹೀಗಿದ್ದರೂ ಅಡಿಗಲ್ಲು ಸಮಾರಂಭ ಏರ್ಪಡಿಸಲು ಮುಂದಾದರೆ ಅಧಿಕಾರಿಗಳನ್ನು ಘೇರಾವ್ ಹಾಕಿ ಪ್ರತಿಭಟಿಸುವದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಹೇಶ ಡಿ.ಬಂಟ, ರವಿ ಎಲ್.ಬಂಟ, ರಾಜು ನೀಳು ಬಂಟ, ಮುರುಳಿಧರ ಬಂಟ, ಪ್ರಸನ್ನ ಬಂಟ, ಸಿ.ಕೆ. ನಾಯ್ಕ, ಸಂತೋಷ ಬಂಟ, ಸೀಮಾ ಬಂಟ, ಚಂದ್ರಕಲಾ ಬಂಟ, ಶೇಷಗಿರಿ ಬಂಟ, ಸಾಯಿಷಕುಮಾರ ಕೇಣಿಕರ, ಪ್ರಕಾಶ ಬಂಟ, ಉಮೇಶ ಬಂಟ, ಗಣೇಶ ಬಂಟ, ವಿಶಾಲ ಬಂಟ, ಮಿಥುನ ಬಂಟ, ಈಶ್ವರ ಬಂಟ, ಗುರು ಬಂಟ, ಸ್ವಪ್ನಾ ಬಂಟ, ಪ್ರಸನ್ನಾ ಕೇಣಿಕರ, ಮಂಜುನಾಥ ಬಂಟ, ಸಂದೇಶ ಬಂಟ, ಮಣಿಕಂಠ ಬಂಟ, ಲಂಭೋಧರ ಬಂಟ, ಗಿರಿಧರ ಬಂಟ, ರಾಜು ಬೇಳಾಬಂದರ, ವಿನಾಯಕ ಬಂಟ, ಮುಕ್ತಾ, ಸುಜಾತಾ ಬಂಟ, ಮಾಲತಿ ಬಂಟ, ಗೀತಾ ಬಂಟ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.