- ಪುರಸಭಾ ಮಹಿಳಾ ಸದಸ್ಯರ ಪತಿ ವಿರುದ್ಧ ಆರೋಪ । ಸಮಸ್ಯೆ ಈಡೇರಿಸದಿದ್ದರೆ ಉಗ್ರ ಹೋರಾಟಕನ್ನಡಪ್ರಭ ವಾರ್ತೆ, ಬೀರೂರು.
ಪಟ್ಟಣದ ಪುರಸಭೆಯಲ್ಲಿ ಹಲವು ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ನೀರು ಗಂಟಿಗಳಾಗಿ ನಿಷ್ಟೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ ನಮಗೆ ಪುರಸಭೆ ಮಹಿಳಾ ಸದಸ್ಯರೊಬ್ಬರ ಪತಿ ಕಾನೂನು ಬಾಹಿರವಾಗಿ ಕರ್ತವ್ಯ ನಿರ್ವಹಿಸುವಂತೆ ಒತ್ತಡ ಹೇರಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ನಮಗೆ ನ್ಯಾಯ ಒದಗಿಸಿ ಎಂದು ಪುರಸಭೆ ಆವರಣದಲ್ಲಿ ನೀರು ಗಂಟಿ ನೌಕರರ ಸಂಘದವರು ಗುರುವಾರ ಮೌನ ಪ್ರತಿಭಟನೆ ನಡೆಸಿದರು.ಸಂಘದ ಮುಖಂಡ ಚೆಲುವರಾಜ್ ಮಾತನಾಡಿ, ಪುರಸಭೆಯಲ್ಲಿ ಸುಮಾರು 25 ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ 15-20 ಜನ ನೀರು ಗಂಟಿಗಳು ಯಾವುದೇ ಕಳಂಕವಿಲ್ಲದೇ ಕೋವಿಡ್ ನಂತಹ ಸಂದರ್ಭ ದಲ್ಲೂ ಸಹ ಕಾರ್ಯ ನಿರ್ವಹಿಸಿದ್ದೇವೆ. ಜೊತೆಗೆ ಕಚೇರಿ ಸಿಬ್ಬಂದಿ ಮತ್ತು ಆಡಳಿತಾಧಿಕಾರಿ ವರ್ಗ ಉತ್ತಮ ಕೆಲಸ ನಿರ್ವಹಿಸಲು ಸಹಕರಿ ಸುತ್ತಾರೆ. ಆದರೆ ಪಟ್ಟಣದ ವಾರ್ಡ ನಂ.10ರ ಮಹಿಳಾ ಸದಸ್ಯರ ಪತಿ ವಿನಾಯಕ್ ಎಂಬುವರು ವೈಯುಕ್ತಿಕ ಕಾರಣಗಳಿಂದ ನೀರು ಗಂಟಿ ನೌಕರರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಇದನ್ನು ನಿರಾಕರಿಸಿದ ನೀರು ಗಂಟಿ ನೌಕರರ ವಿರುದ್ಧ ಕಚೇರಿಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ನಿಮ್ಮನ್ನು ಇಲ್ಲಿ ಕೆಲಸ ಮಾಡಲು ನಾನು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಇದರಿಂದ ನೀರುಗಂಟಿಗಳು ಮನನೊಂದು ನ್ಯಾಯಕೇಳಲು ಇಂದು ಪುರಸಭೆ ಮುಂದೆ ಮೌನ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
ನೀರುಗಂಟಿ ಸಿಬ್ಬಂದಿ ಹರೀಶ್ ಮಾತನಾಡಿ, ಎಲ್ಲಾ ಪುರಸಭೆ ಸದಸ್ಯರು ಸಹ ಸೌಜನ್ಯವಾಗಿ ವಾರ್ಡಗಳಲ್ಲಿ ಕೆಲಸ ಮಾಡಿಸಿ ಕೊಳ್ಳುತ್ತಾರೆ ಆದರೆ ಈ ವ್ಯಕ್ತಿ ನಮ್ಮ ಸಹೋದ್ಯೋಗಿಗೆ ನ್ಯಾಯ ಕೇಳಲು ಹೋದರೆ, ಅವರ ಮನೆಯವರಿಗೆ ತೊಂದರೆ ಮಾಡುವ ದುರಹಂಕಾರದ ಬೆದರಿಕೆ ಹಾಕುತ್ತಾರೆ. ದಿನದ 24 ಗಂಟೆ ಕಷ್ಟ ಸುಖವೆನ್ನದೆ ಕಾರ್ಯ ನಿರ್ವಹಿಸುವವರಿಗೆ ಹೀಗಾದರೆ ನಮ್ಮ ಪಾಡೇನು ಎಂದು ಅಳಲು ತೋಡಿಕೊಂಡರು.ನಂತರ ಪುರಸಭಾ ವ್ಯವಸ್ಥಾಪಕ ಪ್ರಕಾಶ್‌ಗೆ ಮನವಿ ನೀಡಿ , ಮುಂದಿನ ದಿನಗಳಿಂದ ಈಗಾದರೇ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ವಿಷಯ ಶಾಸಕರ ಗಮನಕ್ಕೆ ತಂದು ನಮಗೆ ಸಮಸ್ಯೆ ಬಗೆಹರಿಸಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ವ್ಯವಸ್ಥಾಪಕ ಪ್ರಕಾಶ್, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಮುಖ್ಯಾಧಿಕಾರಿ ಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುತ್ತದೆ. ಪುರಸಭೆಗೆ ಪೌರಕಾರ್ಮಿಕರು ಮತ್ತು ನೀರುಗಂಟಿಗಳು ನಾಣ್ಯದ ಎರಡು ಮುಖಗಳಿದ್ದಂತೆ ಎಂದರು.ಸಂದರ್ಭದಲ್ಲಿ ನೀರು ಗಂಟಿಗಳಾದ ಬೀರೇಶ್, ಮಂಜುನಾಥ, ದು ಗ್ಗೇಶ್, ಕೇಶವ ಕುಮಾರ್, ಧನಂಜಯ, ಪ್ರಹ್ಲಾದ್, ಕಾಳಯ್ಯ, ಸ್ವಾಮಿ, ಪಾರ್ಥರಾಜ್, ಮಲ್ಲಿಕಾರ್ಜುನ್, ಪ್ರಭಾಕರ್, ಮಹೇಶ್ ಸೇರಿದಂತೆ ಮತ್ತಿತರರು ಇದ್ದರು.21 ಬೀರೂರು 1
ರೂರು ಪುರಸಭಾ ಮುಂಭಾಗದಲ್ಲಿ ಮಹಿಳಾ ಸದಸ್ಯರೊಬ್ಬರ ಪತಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ನಮಗೆ ನ್ಯಾಯ ಒದಗಿಸಿ ಎಂದು ಪುರಸಭೆ ನೀರು ಗಂಟಿ ನೌಕರರ ಸಂಘದವರು ಪುರಸಭೆ ಎದುರು ಗುರುವಾರ ಮೌನಪ್ರತಿಭಟನೆ ಮಾಡಿ ವ್ಯವಸ್ಥಾಪಕ ಪ್ರಕಾಶ್‌ಗೆ ಮನವಿ ಸಲ್ಲಿಸಿದರು.