ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಕಲಬುರಗಿ ಜಿಲ್ಲೆಯ ಕೊಟನೂರನಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ. ಆರ್. ಅಂಬೇಡ್ಕರ್ ಪ್ರತಿಮೆಗೆ ಅವಮಾನ ಖಂಡಿಸಿ ತಾಲೂಕಿನ ವಿವಿಧ ತಾಲೂಕು ದಲಿತ ಸಂಘಟನೆಗಳ ಕ್ರೀಯಾ ಸಮೀತಿಯಿಂದ ನಗರದ ಕೋಟೆಯಿಂದ ತಮಟೆ ಭಾರಿಸುತ್ತ ಡಾ.ಅಂಬೇಡ್ಕರ್ ವೃತ್ತದವರೆಗೆ ಜಂಟಿಯಾಗಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಡಾ. ಅಂಬೇಡ್ಕರ್ ಪ್ರತಿಮೆಗೆ ಅವಮಾನ ಮಾಡಿದ ಕಿಡಿಗೇಡಿಗಳಿಗೆ ದೇಶದ್ರೋಹ ಪಟ್ಟ ಕಟ್ಟಿ ಗಡಿಪಾರು ಮಾಡುವಂತೆ ಆಗ್ರಹಿಸಿ ಸಿಎಂಗೆ ಬರೆದ ಮನವಿಯನ್ನು ತಹಸೀಲ್ದಾರ್ ಮುಖಾಂತರ ಸಲ್ಲಿಸಿದರು.ಈ ಸಂದರ್ಭದಲ್ಲಿ ದಲಿತ ಕ್ರೀಯಾ ಹೋರಾಟ ಸಮಿತಿ, ಮಾನವ ಬಂದುತ್ವ ವೇಧಿಕೆ, ಕರ್ನಾಟಕ ದಲಿತ ರಕ್ಷಣಾ ವೇಧಿಕೆ, ವಾಯಿಸ್ ಆಫ್ ಅಂಬೇಡ್ಕರ್, ರಾಜ್ಯ ದಲಿತ ಸಂಘರ್ಷ ಸಮಿತಿ, ಬ್ಲ್ಯೂ ಟೈಗರ್ ಸಮಿತಿ, ಡಿಎಸ್ಎಸ್, ಸಮತಾ ಸೈನಿಕ ದಳ, ಭೀಮ್ ಆರ್ಮಿ ಬಸವಕಲ್ಯಾಣ. ಗ್ರಾಮ ಕ್ರಾಂತಿ ಸೇನೆ, ದಲಿತ ಸಂಘಟನಾ ಸೇವೆ, ಬಿ.ಎಸ್ ಪಿ, ಆದಿ ಜಾಂಬವ ಮಾದಿಗ ದಂಡೋರ ಸಮಿತಿ ಹೀಗೆ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.
ತಹಸೀಲ್ದಾರ್ ಶಾಂತನಗೌಡ ಅವರು ಡಾ. ಅಂಬೇಡ್ಕರ್ ವೃತ್ತಕ್ಕೆ ಆಗಮಿಸಿ ದಲಿತ ಹೋರಾಟ ಕ್ರೀಯಾ ಸಮೀತಿಯಿಂದ ಮನವಿ ಪತ್ರ ಸ್ವೀಕರಿಸಿದರು. ಈ ಸಂಧರ್ಭದಲ್ಲಿ ಸಿಪಿಐ ಅಲಿಸಾಬ ಉಪಸ್ಥಿತರಿದ್ದರು.ಸಸ