ಮುಳಗುಂದ: ಕಳೆದ ಐದಾರು ತಿಂಗಳಿಂದ ನಮ್ಮ ಮನೆಗೆ ನೀರು ಬಂದಿಲ್ಲ, ಈ ಕುರಿತು ಮುಖ್ಯಾಧಿಕಾರಿಗಳಿಗೆ ಹಲವಾರು ಬಾರಿ ಮೌಖಿಕವಾಗಿ ತಿಳಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಚಿಂದಿಪೇಟ ಓಣಿಯ ಮಹಿಳೆಯರು ಪಪಂ ಕಾರ್ಯಾಲಯದ ಎದುರು ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ನೀರಿನ ಸಮಸ್ಯೆ ಬಗೆಹರಿಸುವಂತೆ ಮುಖ್ಯಾಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳಿಗೆ ಸಾಕಷ್ಟು ಬಾರಿ ತಿಳಿಸಲಾಗಿದೆ. ಅಲ್ಲದೆ ಸಮರ್ಪಕ ನೀರು ವಿತರಣೆಗೆ ಬೇರೆ ಪೈಪಲೈನ್ ಅಳವಡಿಸಲು ಮನವರಿಕೆ ಮಾಡಿದರೂ ಜನರ ಸಮಸ್ಯೆ ಕುರಿತು ಯಾರೊಬ್ಬರು ಕೆಲಸ ಮಾಡುತ್ತಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ನಮ್ಮ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಹಾಂತೇಶ ಕಣವಿ, ಸುಶೀಲಾ ಕಳ್ಳಿಮನಿ, ಪಾರವ್ವ ಕಳ್ಳಿಮನಿ, ಪುಷ್ಪಾ ಅಳ್ಳಣ್ಣವರ, ಲಲಿತಾ ಕಳ್ಳಿಮನಿ, ಯಲ್ಲಪ್ಪ ಕಳ್ಳಿಮನಿ, ನಿಂಗಪ್ಪ ಕಳ್ಳಿಮನಿ, ಮಲ್ಲಿಕಾರ್ಜುನ ಅಳ್ಳಣ್ಣವರ, ಖಾದರಸಾಬ ಕಲ್ಲಕುಟ್ರ, ರಮೇಶ ಕಳ್ಳಿಮನಿ, ಪ್ರವೀಣ ಕಮಡೊಳ್ಳಿ ಸೇರಿದಂತೆ ಮತ್ತಿತರರು ಇದ್ದರು.