ವಿದ್ಯಾರ್ಥಿನಿಯ ಅತ್ಯಾಚಾರ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : Aug 27, 2024, 01:34 AM IST
ಪೋಟೊ26ಕೆಎಸಟಿ8: ಕುಷ್ಟಗಿಯ ತಹಸೀಲ್ದಾರ ಅಶೋಕ ಶಿಗ್ಗಾಂವಿ ಅವರ ಮೂಲಕ ಕೊಲ್ಕತ್ತಾದ ಮೆಡಿಕಲ್ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರವನ್ನು ಖಂಡಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಎಬಿವಿಪಿ ಹಾಗೂ ಸ್ಥಳೀಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಕೋಲ್ಕತ್ತಾದಲ್ಲಿ ನಡೆದ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಖಂಡಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಎಬಿವಿಪಿ ನೇತೃತ್ವದಲ್ಲಿ ಸ್ಥಳೀಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪಟ್ಟಣದ ಕಾರ್ಗಿಲ್ ಮಲ್ಲಯ್ಯ ವೃತ್ತದಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಕುಷ್ಟಗಿ

ಕೋಲ್ಕತ್ತಾದಲ್ಲಿ ನಡೆದ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಖಂಡಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಎಬಿವಿಪಿ ನೇತೃತ್ವದಲ್ಲಿ ಸ್ಥಳೀಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪಟ್ಟಣದ ಕಾರ್ಗಿಲ್ ಮಲ್ಲಯ್ಯ ವೃತ್ತದಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಜಿಲ್ಲಾ ಸಂಚಾಲಕ ಶಶಾಂಕ ಪಾಟೀಲ ಮಾತನಾಡಿ, ಅತ್ಯಾಚಾರ, ಕೊಲೆ ಪ್ರಕರಣದಿಂದ ಮಾನವ ಸಮಾಜ ತಲೆತಗ್ಗಿಸುವಂತೆ ಆಗಿದೆ. ಆರೋಪಿಗಳ ಬೆನ್ನಿಗೆ ಮಮತಾ ಬ್ಯಾನರ್ಜಿ ಸರ್ಕಾರ ನಿಂತಿರುವುದು ಹಲವು ಪ್ರಕರಣಗಳಲ್ಲಿ ಕಂಡು ಬಂದಿದೆ. ಸರ್ಕಾರಗಳ ಇಂತಹ ನಡೆಯಿಂದ ಮತ್ತೆ ಮತ್ತೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ. ಸರ್ಕಾರ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ತಕ್ಷಣ ಅವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ನಗರ ಕಾರ್ಯದರ್ಶಿ ವಿನೋದ ಸಿಂಗ್, ಪ್ರಮುಖರಾದ ಹನುಮೇಶ್, ಕೇದಾರ್, ಮೋಹನ್, ಶರಣು, ದೊಡ್ಡಬಸುವ, ಅರವಿಂದ್ ಜಿ,ರಾಚೋಟಯ್ಯ, ಶಿವುಕುಮಾರ್, ಮುದುಕಯ್ಯ, ಮಹೇಶ್, ಮಂಜುನಾಥ್ ಹಾಗೂ ಬಿ.ಜಿ.ಎಸ್ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು, ಅನ್ನದಾನೇಶ್ವರ ಪಿಯು ಕಾಲೇಜು, ಎಸ್‌ವಿಎಂ ಕಾಲೇಜು, ಶ್ರೀ ವಿಜಯ ಚಂದ್ರಶೇಖರ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇದ್ದರು.

ಸಾರ್ವಜನಿಕ ಶೌಚಾಲಯ ನಿರ್ಮಿಸಲು ಆಗ್ರಹಿಸಿ ಪ್ರತಿಭಟನೆ:

ಹನುಮಸಾಗರದ ಏಳು ಮತ್ತು ಎಂಟನೇ ವಾರ್ಡ್‌ನ ಮಹಿಳೆಯರು ಸೋಮವಾರ ಗ್ರಾಮ ಪಂಚಾಯಿತಿಯ ಮುಂದೆ ಸಾರ್ವಜನಿಕ ಶೌಚಾಲಯ ನಿರ್ಮಿಸುವಂತೆ ಆಗ್ರಹಿಸಿ ಪ್ರತಿಭಟಿಸಿದರು.ಈಗಾಗಲೇ ಇರುವ ಶೌಚಾಲಯದ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ. ಸ್ವಚ್ಛತೆ ಇಲ್ಲ, ನೀರಿನ ವ್ಯವಸ್ಥೆಯೂ ಇಲ್ಲವಾಗಿದೆ. ಸ್ವಂತಕ್ಕಾಗಿ ಶೌಚಾಲಯ ಕಟ್ಟಿಸಿಕೊಳ್ಳಲು ನಮಗೆ ಸರಿಯಾದ ಅನುಕೂಲ ಇಲ್ಲ. ಶೌಚಾಲಯ ಕಟ್ಟಿಸಿದರು ಶೌಚಾಲಯಕ್ಕೆ ನೀರು ಬೇಕು. ಆದರೆ, ವಾರ್ಡ್‌ಗಳಲ್ಲಿ ನೀರು 8-10 ದಿನಕ್ಕೊಮ್ಮೆ ನೀರು ಬಿಡಲಾಗುತ್ತದೆ. ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಪಿಡಿಒ, ಅಧ್ಯಕ್ಷರ ಗಮನಕ್ಕೆ ಸಾಕಷ್ಟು ಬಾರಿ ಈ ವಿಷಯ ತರಲಾಗಿದೆ. ಆದರೆ, ಏನು ಪ್ರಯೋಜನ ಆಗಿಲ್ಲ. ಸಂಬಂಧಿಸಿದ ಅಕಾರಿಗಳು ಇದನ್ನು ಗಮನಿಸಿ ನಮಗೆ ಆದಷ್ಟು ಬೇಗ ನೀರಿನ ವ್ಯವಸ್ಥೆ, ಶೌಚಾಲಯ ಒದಗಿಸಿಕೊಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದು ಮಹಿಳೆಯರು ಎಚ್ಚರಿಸಿದರು.

ನೀಲವ್ವ ಸಿಂಹಾಸನ, ಚಂದ್ರವ್ವ ಸಿಂಹಾಸನ, ರೂಪಾ ಯರಗಲ್ಲ, ಕೆಂಚಮ್ಮ ಕಬ್ಬರಗಿ, ಗಂಗಮ್ಮ ಕಬ್ಬರಗಿ, ಗೀತಾ ನಾಗಲೀಕ, ಕೈತುನಬೇಗಂ ಮದ್ನಾಳ, ಸಂಗಮ್ಮ ಸೊಪ್ಪಿಮಠ, ಶೇಖಮ್ಮ ಎತ್ತಿನಮನಿ, ನೀಲಮ್ಮ ಸೊಪ್ಪಮಠ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ