ಉಗ್ರಪ್ಪನಿಗೆ ಘೇರಾವ್‌ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : Oct 31, 2026, 02:30 AM IST
ವಿ.ಎಸ್. ಉಗ್ರಪ್ಪನವರಿಗೆ ಘೆರಾವು ಖಂಡಿಸಿ ಭೋವಿ ಸಮಾಜದಿಂದ ನವಲಗುಂದದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಅವರಿಗೆ ಶಿವಮೊಗ್ಗದಲ್ಲಿ ಘೇರಾವು ಹಾಕಿದ ಘಟನೆ ಖಂಡಿಸಿ ಅಖಿಲ ಕರ್ನಾಟಕ ಭೋವಿ ಸಮಾಜ ವಿವಿಧೋದ್ದೇಶ ಕಲ್ಯಾಣ ಸಂಘದ ರಾಜ್ಯ ಸಮಿತಿಯಿಂದ ನವಲಗುಂದದಲ್ಲಿ ಪ್ರತಿಭಟನೆ ನಡೆಸಲಾಯಿತು.

ನವಲಗುಂದ:

ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಅವರಿಗೆ ಶಿವಮೊಗ್ಗದಲ್ಲಿ ಘೇರಾವು ಹಾಕಿದ ಘಟನೆ ಖಂಡಿಸಿ ಅಖಿಲ ಕರ್ನಾಟಕ ಭೋವಿ ಸಮಾಜ ವಿವಿಧೋದ್ದೇಶ ಕಲ್ಯಾಣ ಸಂಘದ ರಾಜ್ಯ ಸಮಿತಿಯಿಂದ ಪಟ್ಟಣದಲ್ಲಿ ಪ್ರತಿಭಟನಾ ಮೆರವಣೆಗೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಭೋವಿ ಸಮಾಜದ ರಾಜ್ಯಾಧ್ಯಕ್ಷ ಹುಚ್ಚಪ್ಪ ಭೋವಿ ಮಾತನಾಡಿ, ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಮೇಣೆ ಡೋಲಿ ಹೊರುವ ಮೂಲ ಭೋವಿ ಜನಾಂಗದವರಿಗೆ ಜಾತಿ ಪ್ರಮಾಣ ಪತ್ರ ಪಡೆಯುವಲ್ಲಿ ಆಗುತ್ತಿರುವ ತೊಂದರೆ ನಿವಾರಣೆ ಕುರಿತಾಗಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸರ್ಕಾರ ವಿ.ಎಸ್. ಉಗ್ರಪ್ಪನವರ ನೇತೃತ್ವದಲ್ಲಿ 11 ಜನರ ವಿಶೇಷ ಸದನ ಸಮಿತಿ ರಚಿಸಿತ್ತು. ಸಮಿತಿ ಭೋವಿ ಹಾಗೂ ವಡ್ಡರ ಎರಡೂ ಜಾತಿಗಳು ಪ್ರತ್ಯೇಕವಾಗಿವೆ ಎಂದು ವರದಿ ನೀಡಿದೆ ಎಂದರು.

1950ರಲ್ಲಿಯೇ ಭೋವಿ ಜಾತಿಯನ್ನು ಎಸ್ಸಿ ಜಾತಿ ಪಟ್ಟಿಗೆ ಸೇರಿಸಿದ್ದರೆ. 2002ರಲ್ಲಿ ವಡ್ಡರ ಹಾಗೂ ಇತರೆ ಜಾತಿಗಳು ಭೋವಿ ಸಮಾನಾಚಿತರ ಪದಗಳಾಗಿ ಎಸ್ಸಿ ಪಟ್ಟಿಗೆ ಸೇರ್ಪಡೆಗೊಂಡಿವೆ ಎಂದ ಅವರು, ಉಗ್ರಪ್ಪನವರು ತಮ್ಮ ವರದಿಯಲ್ಲಿ ವಡ್ಡರ ಜಾತಿಗೂ ಎಸ್ಸಿ ಪ್ರಮಾಣ ಪತ್ರ ನೀಡಬೇಕೆಂದು ಹೇಳಿದ್ದಾರೆಯೇ ಹೊರತು ಯಾರಿಗೂ ಜಾತಿ ಪ್ರಮಾಣ ಪತ್ರ ಕೊಡಬಾರದೆಂದು ಉಲ್ಲೇಖಿಸಿಲ್ಲ ಎಂದು ಹೇಳಿದರು.

ಪ್ರಸ್ತುತ ನೈಜ ಭೋವಿ ಸಮಾಜವನ್ನು ಬೆಂಬಲಿಸುತ್ತಿರುವ ಉಗ್ರಪ್ಪನವರ ಕುರಿತಾಗಿ ವಡ್ಡರ ಸಮಾಜದ ಸಹೋದರರು ಇಲ್ಲ-ಸಲ್ಲದ ಆರೋಪ ಮಾಡುತ್ತಿರುವುದನ್ನು ಭೋವಿ ಸಮಾದ ತೀವ್ರವಾಗಿ ಖಂಡಿಸುತ್ತದೆ ಎಂದರು.

ಮುಖಂಡ ಯಲ್ಲಪ್ಪ ಭೋವಿ ಮಾತನಾಡಿ, 1950ರಲ್ಲಿ ಯಾರು ಭೋವಿಗಳಿದ್ದರು ಹಾಗೂ 1946ರಲ್ಲಿ ಮೈಸೂರು ಮಹಾರಾಜರ ಆದೇಶದಂತೆ ಯಾರು ಜಾತಿ ಬದಲಾವಣೆ ಮಾಡಿಕೊಂಡಿದ್ದಾರೆಂಬುದನ್ನು ವಡ್ಡರ ಸಮಾಜದ ಮುಖಂಡರು ಅಥೈಸಿಕೊಳ್ಳಬೇಕು. ಉಗ್ರಪ್ಪನವರಿಗೆ ಘೇರಾವು ಹಾಕುವುದಾಗಲಿ, ನಿಂದನೆ ಮಾಡುವ ಮೂಲಕ ಸಮಾಜಗಳ ಮಧ್ಯ ಸಂಘರ್ಷ ಉಂಟು ಮಾಡುವ ಪ್ರಯತ್ನ ಮಾಡಿದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಈ ವೇಳೆ ನಾಗಪ್ಪ ಭೋವಿ, ಹುಲಗಪ್ಪ ಭೋವಿ, ಮಹಾಂತೇಶ ಭೋವಿ, ಶ್ರೀಕಾಂತ ಭೋವಿ, ಕೃಷ್ಣಾ ಭೋವಿ, ಹುಚ್ಚಪ್ಪ ಕನಕಪ್ಪನವರ, ಫಕ್ಕೀರಪ್ಪ ಭೋವಿ, ಮುತ್ತಪ್ಪ ಭೋವಿ, ನರಸಪ್ಪ ಭೋವಿ, ರಾಖೇಶ ಭೋವಿ, ರವಿ ಭೋವಿ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಡೆಯಾಜ್ಞೆ ಇದ್ದರೂ ಪೊಲೀಸರಿಂದ ಚಾರ್ಜ್‌ಶೀಟ್‌: ಹೈಕೋರ್ಟ್‌ ಗರಂ
ಪ್ರೀತಿಗೆ ಪೋಷಕರು ವಿರೋಧ: ಪ್ರೇಮಿಗಳಿಂದ ಆತ್ಮಹತ್ಯೆ ಯತ್ನ