-ಟಿಯುಸಿಐ ನೇತೃತ್ವದಲ್ಲಿ ಕಾರ್ಮಿಕರು ಧರಣಿ । ಕಂಪನಿ ಅಧಿಕಾರಿಗಳು ನಡೆಸಿದ ಸಂಧಾನ ವಿಫಲ
ಕನ್ನಡಪ್ರಭ ವಾರ್ತೆ ಲಿಂಗಸುಗೂರು
ಹೆಸರೂರು ಬಳಿ ಇರುವ ಪವನ ವಿದ್ಯುತ್ ಕಂಪನಿ ವಿರುದ್ಧ ಕಾರ್ಮಿಕರ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದ್ದು ಧರಣಿನಿರತರೊಂದಿಗೆ ಕಂಪನಿ ಅಧಿಕಾರಿಗಳು ನಡೆಸಿದ ಸಂಧಾನ ವಿಫಲಗೊಂಡಿದೆ.ಪವನ್ ವಿದ್ಯುತ್ ಉತ್ಪಾದನೆ ಮಾಡುವ ಸ್ಥಳದಲ್ಲಿ ಧರಣಿ ನಡೆಸುತ್ತಿರುವ ಕಾರ್ಮಿಕರು ರಿನ್ಯಿಮ್ ಕಂಪನಿ ಅಧಿಕಾರಿಗಳು ಧರಣಿ ಸ್ಥಳಕ್ಕೆ ಆಗಮಿಸಿ ಕಾರ್ಮಿಕರ ವೇತನ, ಕೆಲಸದ ಭದ್ರತೆ ಸೇರಿದಂತೆ ಬೇಡಿಕೆಗಳ ಈಡೇರಿಕೆ ಸಾಧ್ಯವಿಲ್ಲ. ಕಂಪನಿಯ ಕಾನೂನುನಂತೆ ನೀವು ಕೆಲಸ ಮಾಡಬೇಕು ಎಂದು ಹೇಳಿ, ನೀವು ಧರಣಿ ನಡೆಸಿದರೆ ನಿಮ್ಮನ್ನು ಕೆಲಸದಿಂದ ತೆಗೆದು ಹಾಕಿ ಬೇರೆಯವರನ್ನು ನೇಮಕ ಮಾಡುತ್ತೇವೆಂದು ಹೇಳಿದರು.
ಕಾರ್ಮಿಕರು ಮತ್ತು ಕಂಪನಿ ಅಧಿಕಾರಿಗಳ ಮಾತಿನ ಚಕಮಕಿಯ ಮಧ್ಯ ಪೊಲೀಸರು ಮಧ್ಯೆ ಪ್ರವೇಶಿಸಿ ಪವನ್ ವಿದ್ಯುತ್ ಉತ್ಪಾದನಾ ಕಂಪನಿಯ ಆಡಳಿತ ಮಂಡಳಿ ಸಂಪನ್ಮೂಲ ಅಧಿಕಾರಿ, ಕಾನೂನು ಸಲಹೆಗಾರರು ಆಗಮಿಸಲಿದ್ದಾರೆ. ಅಂದು ಬೇಡಿಕೆಗಳ ಇತ್ಯರ್ಥದ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳ ಬೇಕೆಂದು ಸಲಹೆ ನೀಡಿದರು.