ವಿದ್ಯುತ್ ಕಡಿತ ಮುಂದುವರಿದರೆ ಹೆದ್ದಾರಿ ತಡದು ಪ್ರತಿಭಟನೆ: ಎಚ್ಚರಿಕೆ

KannadaprabhaNewsNetwork |  
Published : Oct 24, 2026, 01:30 AM IST
ಚಿತ್ರ 23ಬಿಡಿಆರ್51 | Kannada Prabha

ಸಾರಾಂಶ

ಕೃಷಿ ಚಟುವಟಿಕೆಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗದ ಕಾರಣ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಇದರಿಂದ ಪಂಪ್‌ಸೆಟ್‌ಗಳು ಸುಟ್ಟು ರೈತರಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಅಧ್ಯಕ್ಷ ಸತೀಷ ನನ್ನೂರೆ ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹುಮನಾಬಾದ್

ಕೃಷಿ ಚಟುವಟಿಕೆಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗದ ಕಾರಣ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಇದರಿಂದ ಪಂಪ್‌ಸೆಟ್‌ಗಳು ಸುಟ್ಟು ರೈತರಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಅಧ್ಯಕ್ಷ ಸತೀಷ ನನ್ನೂರೆ ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಯಲ್ಲಿ ಜೆಸ್ಕಾಂ ಅಧಿಕಾರಿಗಳೊಂದಿಗೆ ರೈತ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಮನವಿ ಸಲ್ಲಿಸಿ, ಜಿಲ್ಲೆಯಲ್ಲಿ ಬರದ ಛಾಯೆ ಮೂಡಿದ್ದು, ಬಾವಿಗಳಲ್ಲಿ ನೀರು ಬತ್ತಿ ಹೊಗುತ್ತಿದೆ. ಅದರಲ್ಲಿ ಪ್ರತಿ ನಿತ್ಯ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಅರ್ಧ ಗಂಟೆಗೊಮ್ಮೆ ವಿದ್ಯುತ್ ಕಡಿತಗೊಳ್ಳುತ್ತಿದೆ. ಇದರಿಂದ ರೈತರಿಗೆ ವಿವಿಧ ರೀತಿಯ ತೊಂದರೆ ಉಂಟಾಗುತ್ತಿದೆ. ಇದನ್ನು ಕೂಡಲೇ ಸರಿಪಡಿಸಿ ಏಳು ಗಂಟೆಗಳ ಕಾಲ ನಿರಂತರ ವಿದ್ಯುತ್ ಪೂರೈಸಲು ಸಾಧ್ಯವಾಗದಿದ್ದರೆ, ಕನಿಷ್ಠ ಆರು ಗಂಟೆಗಳ ಕಾಲವಾದರೂ ಯಾವುದೇ ಅಡಚಣೆಯಿಲ್ಲದೆ ವಿದ್ಯುತ್ ಪೂರೈಸಬೇಕು ಎಂದು ಜಿಲ್ಲಾ ಅಧೀಕ್ಷಕ ಇಂಜಿನಿಯರ್ ವೀರಭದ್ರಪ್ಪ ಇವರಿಗೆ ಮನವಿ ಸಲ್ಲಿಸಿದರು.

ಅಧೀಕ್ಷಕ ಇಂಜಿನಿಯರ್ ವೀರಭದ್ರಪ್ಪ ಅವರು ರೈತರೊಂದಿಗೆ ಮಾತನಾಡಿ, ನನ್ನ ಕೈಯಲ್ಲಿ ಏನು ಇಲ್ಲ, ಮೇಲಾಧಿಕಾರಿಗಳ ಕೈಯಲ್ಲಿದೆ ಎಂದು ತಿಳಿಸಿದರು. ಬಳಿಕ ರೈತರು ಡಿವೈಎಸ್ಪಿ ಮಡೋಳಪ್ಪ ಅವರನ್ನು ಭೇಟಿಯಾಗಿ ಹೊಲಗಳಿಗೆ ಸತತ ವಿದ್ಯುತ್ ಪೂರೈಕೆಯಾಗದ ಕಾರಣ ರೈತರಿಗೆ ತೊಂದರೆಯಾಗುತ್ತಿದೆ. ಪಂಪಸೆಟ್‌ಗಳು ಸುಡುತ್ತಿವೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ವಿದ್ಯುತ್ ಇಲಾಖೆಯ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ರೈತರ ಸಮಸ್ಯೆಗೆ ಸ್ಪಂದಿಸಬೇಕು ಇಲ್ಲದಿದ್ದರೆ ಪ್ರತಿ ಅರ್ಧ ಗಂಟೆಗೊಮ್ಮೆ ವಿದ್ಯುತ್ ಕಡಿತಗೊಳಿಸುವ ಪ್ರವೃತ್ತಿ ಮುಂದುವರಿದರೆ ರೈತರು ಅನಿವಾರ್ಯವಾಗಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಬೇಕಾಗುತ್ತದೆ ಎಂದರು.

ರೈತರ ಮನವಿಗೆ ತಕ್ಷಣ ಸ್ಪಂದಿಸಿದ ಡಿವೈಎಸ್ಪಿ ಮಡೋಳಪ್ಪ ಅವರು, 2-3 ದಿನಗಳಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ದಿಲೀಪ ಕುಲ್ಕರ್ಣಿ, ಜ್ಞಾನೇಶ್ವರ ಭೂಸ್ಲೆ, ಜೀಲಾನಿ ಪಟೇಲ್, ರಾಮಣ್ಣಾ ಚೀನಕೇರಾ, ಸಿದ್ದಣ್ಣಾ ಭೂಶಟ್ಟಿ, ಪಾಂಡುರಂಗ ಪಿರಾಸಿ, ಕಂಟೆಪ್ಪ, ರಾಜಶೇಖರ, ರವಿ, ಸಂಗಪ್ಪ, ದಯಾನಂದ ಸೇರಿದಂತೆ ಅನೇಕರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದಿನಿಂದ ಅಂತಾರಾಷ್ಟ್ರೀಯ ಬೌದ್ದ ಮಹಾಸಮ್ಮೇಳನ
ಬೆಳೆ, ಕೃಷಿ ಸಾಲ ಬಲವಂತ ವಸೂಲಿ ಸಲ್ಲ: ಜಿಲ್ಲಾಧಿಕಾರಿ ಶ್ರೀರೂಪ