ಶಿವಮೊಗ್ಗ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಕಡು ವಿರೋಧಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀರ್ ಮುನೀರ್ ಗೆ ವೈಟ್‌ಹೌಸ್‌ನಲ್ಲಿ ಔತಣಕೂಟವನ್ನು ಏರ್ಪಡಿಸಿದ್ದನ್ನು ಖಂಡಿಸಿ ಶುಕ್ರವಾರ ನಗರದ ಮಹಾವೀರ ವೃತ್ತದಲ್ಲಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್‌ನ ಮುಖಂಡರು ಕಪ್ಪುಪಟ್ಟಿ ಪ್ರದರ್ಶನ ಮಾಡಿ ಡೊನಾಲ್ಡ್ ಟ್ರಂಪ್‌ರವರ ಪ್ರತಿಕೃತಿಯನ್ನು ದಹಿಸಿ ಪ್ರತಿಭಟಿಸಿದರು.
ಈ ಆಪರೇಷನ್ ಸಿಂದೂರ ಕಾರ್ಯಾಚರಣೆಯಿಂದ ದಿಗಿಲುಗೊಂಡ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀರ್ ಮುನೀರ್ ನಮ್ಮ ದೇಶದ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಿಗೆ ದೂರವಾಣಿ ಕರೆ ಮಾಡಿ, ಅಂಗಲಾಚಿ ಆಪರೇಷನ್ ಸಿಂದೂರ ಕಾರ್ಯಾಚರಣೆ ನಿಲ್ಲಿಸಲು ಗೋಗರೆದಿದ್ದು ಈಗ ಇತಿಹಾಸ.
ಇಂತಹ ಪರಮನೀಚ ಪಾಕಿಸ್ತಾನ ಹಾಗೂ ಪಾಪಿಸ್ತಾನದ ಸೇನಾ ಮುಖ್ಯಸ್ಥ ಅಸೀರ್ ಮುನೀರ್‌ಗೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಔತಣ ಕೂಟವನ್ನು ಏರ್ಪಡಿಸಿ ರಾಜಾತಿಥ್ಯವನ್ನು ನೀಡಿರುವುದನ್ನು ನಮ್ಮ ಸಂಘಟನೆಯು ತೀವ್ರವಾಗಿ ಖಂಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರಮುಖರಾದ ಕಲ್ಲೂರು ಮೇಘರಾಜ, ಹೆಚ್.ಎಂ.ಸಂಗಯ್ಯ, ಮಂಜುನಾಥ ಪಾಟೀಲ್, ಜನಮೇಜರಾವ್, ಶಂಕ್ರಾನಾಯ್ಕ, ವೇದಾನಂದ ಗೌಡ, ಕೂಡ್ಲು ಶ್ರೀಧರ್, ಚಿಕ್ಕಮಟ್ಟಿ ವೆಂಕಟೇಶ್, ಟಿ.ಎಚ್.ಬಾಬು ಮೊದಲಾದವರಿದ್ದರು.