ತಾಳಿಕೋಟೆ: ೨ಎ ಮೀಸಲಾತಿ ಒದಗಿಸಬೇಕೆಂದು ಸಮಾಜದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಹಮ್ಮಿಕೊಂಡ ಹೋರಾಟದಲ್ಲಿ ಕಾಂಗ್ರೆಸ್ ಸರ್ಕಾರವು ಪೊಲೀಸರಿಂದ ಲಾಠಿ ಚಾರ್ಜ್ ಮಾಡಿಸಿ ಶಾಂತಿಯುತ ಹೋರಾಟಕ್ಕೆ ಭಂಗ ತಂದಿರುವುದನ್ನು ಖಂಡಿಸಿ ತಾಲೂಕು ಪಂಚಮಸಾಲಿ ಸಮಾಜ ಹಾಗೂ ನಗರ ಘಟಕದ ನೇತೃತ್ವದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿ ರಸ್ತೆ ತಡೆ ಚಳವಳಿಯನ್ನು ನಡೆಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಸಮಾಜದ ಅಧ್ಯಕ್ಷ ಡಾ.ವಿ.ಎಸ್.ಕಾರ್ಚಿ, ಕಾಶಿನಾಥ ಮುರಾಳ, ಆರ್.ವೈ.ಜಾಲವಾದಿ, ಡಿ.ವಿ.ಪಾಟೀಲ, ಪ್ರಕಾಶ ಸಾಸಾಬಾಳ, ಬಸ್ಸು ಕಶೆಟ್ಟಿ, ಕುಮಾರಗೌಡ ಪಾಟೀಲ, ಪ್ರಭು ಬಿಳೇಭಾವಿ, ಅಶೋಕ ಚಿನಗುಡಿ, ಜಗದೀಶ ಬಿಳೇಭಾವಿ, ನಾಗಪ್ಪ ಚಿನಗುಡಿ, ಈಶ್ವರಪ್ಪ ಬಿಳೇಭಾವಿ, ಚನಬಸು ದೇಸಾಯಿ, ನಿಂಗು ಕುಂಟೋಜಿ, ಸಂಗನಗೌಡ ಪಾಟೀಲ, ಸಿದ್ದಲಿಂಗ ಸರೂರ, ಬಸನಗೌಡ ಪಾಟೀಲ, ಮುತ್ತುಗೌಡ ಪಾಟೀಲ, ಎಂ.ಎಂ.ಪಾಟೀಲ, ವಿಶ್ವನಾಥ ಪಾಟೀಲ, ಮಯೂರ ಪಾಟೀಲ, ವಿರೇಶ ಬಾಗೇವಾಡಿ, ರಾಮನಗೌಡ ಬಾಗೇವಾಡಿ, ಅಪ್ಪು ಆನೇಸೂರ, ವಿಶ್ವನಾಥ ಬಿದರಕುಂದಿ, ಕಲ್ಲನಗೌಡ ಪಾಟೀಲ, ಮುತ್ತು ಕಶೆಟ್ಟಿ, ಡಾ.ಶ್ರೀಶೈಲ ಹುಕ್ಕೇರಿ, ಗುರುಸಂಗ ಕಶೆಟ್ಟಿ, ಕಾಶಿನಾಥ ಪರಂಪೂರ, ಮೊದಲಾದವರು ಇದ್ದರು.