ಗ್ರಾಮೀಣ ಅಂಚಿ ನೌಕರರನ್ನು ಖಾಯಂಗೊಳಿಸಬೇಕು. ದಿನದ 8 ಗಂಟೆಗೆ ಕೆಲಸ ನೀಡಬೇಕು. ಹಾಗೂ ನಿವೃತ್ತಿ ನಂತರ ಪಿಂಚಣಿ ಕೊಡಬೇಕು ಎಂದು ಒದಗಿಸಬೇಕು ಚಿಕ್ಕೋಡಿ ವಿಭಾಗದ ಗ್ರಾಮೀಣ ಅಂಚೆ ನೌಕರರ ಸಂಘದ ಕಾರ್ಯದರ್ಶಿ ಎಸ್ ಎಮ್ ಮಂಟೂರ ಒತ್ತಾಯಿಸಿದರು.ಪಟ್ಟಣದ ಬಸವೇಶ್ವರ ವೃತ್ತದಲ್ಲಿರುವ ಪ್ರಧಾನ ಅಂಚೆ ಕಚೇರಿ ಆವರಣದಲ್ಲಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘ ಹಾಗೂ ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರ ಸಂಘ ಚಿಕ್ಕೋಡಿ ವಿಭಾಗದ ಗ್ರಾಮೀಣ ಅಂಚೆ ನೌಕರರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಳೆದ 3 ದಿನಗಳಿಂದ ನಡೆಸುತ್ತಿರುವ ಮುಷ್ಕರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಮಲೇಶ್ ಚಂದ್ರ ಸಮಿತಿ ವರದಿಯಂತೆ ವೇತನ ಪರಿಷ್ಕರಣೆ ಮಾಡಬೇಕು. ಸೇವಾ ಹಿರಿತನದ ಆಧಾರದ ಮೇಲೆ ಹೆಚ್ಚುವರಿ ಇಂಕ್ರಿಮೆಂಟ್ ಕೊಡಬೇಕು. ಗ್ರೂಪ್ ಇನ್ಸೂರೆನ್ಸ್ ಕವರೇಜ್ ₹5 ಲಕ್ಷ ವರೆಗೆ ಹೆಚ್ಚಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಸುವಂತೆ ದೇಶಾದ್ಯಂತ ಗ್ರಾಮೀಣ ಅಂಚೆ ನೌಕರರ ಸಂಘಗಳಿಂದ ಮುಷ್ಕರ ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರ ನಮ್ಮ ಬೇಡಿಕೆಗಳನ್ನ ಈಡೇರಿಸುವವರೆಗೆ ಈ ಮುಷ್ಕರ ಮುಂದುವರಿಸಲಾಗುವುದು ಎಂದು ಹೇಳಿದರು.
ನಿವೃತ್ತ ಅಂಚೆ ನೌಕರ ಹಾಗೂ ಮುಖಂಡ ಸಂಗನಗೌಡ ಪಾಟೀಲ ಮಾತನಾಡಿ, ಗ್ರಾಮೀಣ ಮಟ್ಟದ ನೌಕರರಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು. ಹೊನವಾಡದ ಬಾಬುರಾವ ಮಹಾರಾಜರು ಮಾತನಾಡಿ ಸಂಘಟನೆಯಲ್ಲಿ ಶಕ್ತಿ ಇದೆ. ತಾವು ನಡೆಸುತ್ತಿರುವ ಹೋರಾಟಕ್ಕೆ ಕೇಂದ್ರ ಸರ್ಕಾರ ತ್ವರಿತವಾಗಿ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.ಈ ವೇಳೆ ನಿವೃತ್ತ ಅಂಚೆ ನೌಕರ ಕೆ.ಎಸ್ ಹಿರೇಮಠ, ಗ್ರಾಮೀಣ ನೌಕರ ಪರಗೊಂಡ ಮಗದುಮ್ಮ, ಪ್ರಕಾಶ ಪೂಜಾರಿ, ಗೀರಿಶ ಕುಲಕರ್ಣಿ, ಶ್ರೀಶೈಲ ಭುಸಾನಿ, ಲಕ್ಷ್ಮೀ ಗಾಯಕವಾಡ, ಮಂಗಲ ಪಾಟೀಲ, ಮಹೇಶ್ ಕುಲಕರ್ಣಿ, ಸುವರ್ಣಾ ಹೂರಣಗಿ. ಬಿ.ವಿ.ಶಿಂಧೆ, ಆರ್. ವಿ ಕಮಲಾಕರ ಸೇರಿದಂತೆ ಇನ್ನಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.