ಬಸ್ ಸಂಚಾರಕ್ಕೆ ಆಗ್ರಹಿಸಿ ಗ್ರಾಮಸ್ಥರಿಂದ ಪ್ರತಿಭಟನೆ

KannadaprabhaNewsNetwork |  
Published : Dec 05, 2024, 12:31 AM IST
7 | Kannada Prabha

ಸಾರಾಂಶ

ಈ ಹಿಂದೆ ಬೆಳಗ್ಗೆ 7.30 ಹಾಗೂ ಸಂಜೆ 5.30 ಹಾಗೂ ರಾತ್ರಿ 8 ಗಂಟೆಗೆ ಎಚ್.ಡಿ. ಕೋಟೆ ಪಟ್ಟಣದಿಂದ ಸಂಚರಿಸುವಂತೆ ಬಸ್ ಅನ್ನು ಬಿಡಲು ಕೋರಿ ಎಚ್.ಡಿ. ಕೋಟೆ ಕೆಎಸ್ಸಾರ್ಟಿಸಿ ಡಿಪೋಗೆ ಹಲವು ಬಾರಿ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿಲ್ಲ. ಇದರಿಂದಾಗಿ ಪ್ರತಿನಿತ್ಯ ಶಾಲಾ ಕಾಲೇಜಿಗೆ ಓಡಾಡುವ ವಿದ್ಯಾರ್ಥಿಗಳಿಗೆ, ಕೂಲಿ ಕಾರ್ಮಿಕರಿಗೆ, ರೈತರಿಗೆ ತೊಂದರೆಯಾಗುತ್ತಿದ್ದು. ಈ ಕೂಡಲೇ ಸಮಸ್ಯೆ ಗಂಭೀರತೆಯನ್ನು ಅರಿತು ಬಸ್ ಸಂಚರಿಸಬೇಕು.

ಕನ್ನಡಪ್ರಭ ವಾರ್ತೆ ಮೈಸೂರುಎಚ್.ಡಿ. ಕೋಟೆ- ತಾರಕ ನಡುವೆ ಅಗತ್ಯವಿರುವ ವೇಳೆ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ನೇತೃತ್ವದಲ್ಲಿ ಬುಧವಾರ ಕೆಎಸ್ಸಾರ್ಟಿಸಿ ಗ್ರಾಮಾಂತರ ವಿಭಾಗೀಯ ಕಚೇರಿ ಎದುರು ಪ್ರತಿಭಟಿಸಿದರು.ಎಚ್.ಡಿ. ಕೋಟೆಯಿಂದ ನಾಗನಹಳ್ಳಿ ಮಾರ್ಗವಾಗಿ ತಾರಕ ಗ್ರಾಮದವರೆಗೆ ಬೆಳಗ್ಗೆ 7.30, ಸಂಜೆ 5.30 ಮತ್ತು ರಾತ್ರಿ 8 ಗಂಟೆಗೆ ಬಸ್ ಸಂಚಾರಕ್ಕಾಗಿ ಕೋರಿ ನಗರದ ಎಲ್ಐಸಿ ವೃತ್ತದಿಂದ ಮೆರವಣಿಗೆ ಹೊರಟು ಗ್ರಾಮಾಂತರ ವಿಭಾಗೀಯ ಕಚೇರಿ ತಲುಪಿ ಮನವಿ ಸಲ್ಲಿಸಿದರು.ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಹಿರೇಹಳ್ಳಿ ಬಿ ಗ್ರಾಮದ ಮುಖಂಡ ಪುಟ್ಟೇಗೌಡ, ಎಚ್.ಡಿ. ಕೋಟೆ ತಾಲೂಕಿನ ನಾಗನಹಳ್ಳಿ, ಹಿರೇಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿನ ಹತ್ತಕ್ಕೂ ಹೆಚ್ಚು ಕಾಡಂಚಿನ ಗ್ರಾಮಗಳು ಹಾಗೂ ಆದಿವಾಸಿ ಹಾಡಿಗಳಿಗೆ ಸಂಪರ್ಕ ಕಲ್ಪಿಸುವ ಈ ಮಾರ್ಗದಲ್ಲಿ ಪ್ರತಿನಿತ್ಯ ನೂರಾರು ಜನ ಪ್ರಯಾಣಿಸುತ್ತಾರೆ. ಬೆಳಗ್ಗೆ ಹಾಗೂ ರಾತ್ರಿ ವೇಳೆ ಈ ಭಾಗದಲ್ಲಿ ಕಾಡುಪ್ರಾಣಿಗಳ ಓಡಾಟ ಹೆಚ್ಚಿರುವುದರಿಂದ ಈ ಭಾಗದ ಜನರು ಆತಂಕದಿಂದ ಓಡಾಡುವ ಪರಿಸ್ಥಿತಿ ಇದೆ ಎಂದರು.ಈ ಹಿಂದೆ ಬೆಳಗ್ಗೆ 7.30 ಹಾಗೂ ಸಂಜೆ 5.30 ಹಾಗೂ ರಾತ್ರಿ 8 ಗಂಟೆಗೆ ಎಚ್.ಡಿ. ಕೋಟೆ ಪಟ್ಟಣದಿಂದ ಸಂಚರಿಸುವಂತೆ ಬಸ್ ಅನ್ನು ಬಿಡಲು ಕೋರಿ ಎಚ್.ಡಿ. ಕೋಟೆ ಕೆಎಸ್ಸಾರ್ಟಿಸಿ ಡಿಪೋಗೆ ಹಲವು ಬಾರಿ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿಲ್ಲ. ಇದರಿಂದಾಗಿ ಪ್ರತಿನಿತ್ಯ ಶಾಲಾ ಕಾಲೇಜಿಗೆ ಓಡಾಡುವ ವಿದ್ಯಾರ್ಥಿಗಳಿಗೆ, ಕೂಲಿ ಕಾರ್ಮಿಕರಿಗೆ, ರೈತರಿಗೆ ತೊಂದರೆಯಾಗುತ್ತಿದ್ದು. ಈ ಕೂಡಲೇ ಸಮಸ್ಯೆ ಗಂಭೀರತೆಯನ್ನು ಅರಿತು ಬಸ್ ಸಂಚರಿಸಬೇಕು ಎಂದು ಅವರು ಆಗ್ರಹಿಸಿದರು.ಈ ವೇಳೆ ವಿಭಾಗೀಯ ಅಧಿಕಾರಿ ಚೇತನ್, ಸೋಮವಾರದಿಂದ ಬಸ್ ಕಳುಹಿಸುವುದಾಗಿ ಭರವಸೆ ನೀಡಿದ ಬಳಿಕ ಧರಣಿಯನ್ನು ಕೈ ಬಿಟ್ಟರು. ಈ ವೇಳೆ ಅಧ್ಯಕ್ಷ ಟಿ.ಆರ್. ಸುನಿಲ್, ಜಿಲ್ಲಾ ಕಾರ್ಯದರ್ಶಿ ಸುಮಾ, ಸಿಂಚನ, ಹಿರೇಹಳ್ಳಿ ಗ್ರಾಮದ ಮುಖಂಡರಾದ ಪುಟ್ಟೇಗೌಡ, ರಂಗರಾಜು, ಸ್ವಾಮಿಗೌಡ, ಕೃಷ್ಣೇಗೌಡ, ಯಜಮಾನರಾದ ಮಂಜು ಹಿರೇಹಳ್ಳಿ, ಎ. ವೆಂಕಟಸ್ವಾಮಿ, ಶಂಭುಗೌಡ, ಉದಯ, ಅಂಬಿಕಾ, ಲಕ್ಷ್ಮಮ್ಮ, ಜಯಮ್ಮ, ಮಲ್ಲಿಗಮ್ಮ, ಸುಧಾ, ಪುಟ್ಟಮ್ಮ, ಪದಮ್ಮ ಮೊದಲಾದವರು ಇದ್ದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ