ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ಜೈ ಭೀಮ್ ಹಾಸ್ಟೆಲ್ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಮೊದಲು ಡಾ.ಬಿ.ಆರ್.ಅಂಭೇಡ್ಕರ್ ರವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಮೆರವಣಿಗೆ ಮೂಲಕ ಎಂಜಿ ರಸ್ತೆ, ಅಬೇಡ್ಕರ್ ವೃತ್ತ ನಂತರ ನಗರ ಹೊರವಲಯದ ಜಿಲ್ಲಾ ಪ್ರಜಾಸೌಧದ ಮುಂಭಾದಲ್ಲಿ ಧರಣಿ ನಡೆಸಿದರು.
ದಲಿತ ಸಿಎಂ ಮಾಡುವ ಗುರಿಈ ವೇಳೆ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಮಾತನಾಡಿ, ರಾಜ್ಯದಲ್ಲಿ ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವೀಕ್ ಆಗಿದ್ದಾರೆ. ಕಾಂಗ್ರೆಸ್- ಬಿಜೆಪಿ- ಜೆಡಿಎಸ್ ಸೋಲಿಸಿ ದಲಿತ ಪರ ಹುಟ್ಟಿಕೊಳ್ಳುವ ಪರ್ಯಾಯ ಪಕ್ಷವನ್ನು ಈ ಬಾರಿ ಗೆಲ್ಲಿಸಿ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಮಾಡುವುದೆ ತಮ್ಮ ಗುರಿಯಾಗಿದ್ದು, ಅದಕ್ಕಾಗಿಯೇ ರಾಜ್ಯಾದ್ಯಂತ ಪ್ರವಾಸ ಮಾಡುತಿದ್ದೇನೆ ಎಂದು ಹೇಳಿದರು.
ಚಿಂತಾಮಣಿಯಲ್ಲಿ ಮೂರು ತಲೆಮಾರಿನ ರಾಜಕೀಯದ ನಂಟಿರುವ ಮನೆ ಈಗಿನ ಉಸ್ತುವಾರಿ ಮಂತ್ರಿ ಡಾ.ಎಂ.ಸಿ.ಸುಧಾಕರ್ ಅವರ ತಾತ ಆಂಜನೇಯರೆಡ್ಡಿ, ಅವರ ತಂದೆ ಚೌಡರೆಡ್ಡಿ ಕಾಲದಿಂದಲೂ ರಾಜಕೀಯ ಮಾಡಿಕೊಂಡು ಬಂದಿರುವ ತಾವು ಅವರ ರಾಜಕೀಯ ಚೆನ್ನಾಗಿ ಅರಿತಿದ್ದೇನೆ ಸುಧಾಕರ್ ದಲಿತ ವಿರೋಧಿ ದೋರಣೆ ತೋರುತ್ತಿರುವುದು ಗೊತ್ತು. ಅವರ ಮಾತು ಕೇಳಿಕೊಂಡು ಡಿಸಿ ರವೀಂದ್ರ ಚಿಂತಾಮಣಿ ನಗರದಲ್ಲಿನ ಅಂಬೇಡ್ಕರ್ ಪ್ರತಿಮೆ ತೆರವು ಮಾಡಿಸಿದ್ದಾರೆ ಎಂದು ಆರೋಪಿಸಿದರು.
2028ಕ್ಕೆ ಹೊಸ ಪಕ್ಷ ಅಧಿಕಾರಕ್ಕೆ
ಮನವಿ ಸ್ವೀಕರಿಸಲು ಪ್ರತಿಭಟನಾ ವೇದಿಕೆಗೆ ಆಗಮಿಸಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರನ್ನು ಸ್ವಾಗತಿಸಿದ ಸಿಎಂ ಇಬ್ರಾಹಿಂ, ಇವರು ಕುರುಬ ಸಮುದಾಯದವರು, ಸಿಎಂ ಸಿದ್ದರಾಮಯ್ಯಗೆ ಆಪ್ತರು ಎಂದು ಪರಿಚಯಿಸಿ, ನೀವು ನಿವೃತ್ತಿಯಾಗುತಿದ್ದಂತೆ ನಮ್ಮ ಪಕ್ಷಕ್ಕೆ ಬಂದು ಬಿಡಿ ಎಂದು ಆಹ್ವಾನ ನೀಡುತಿದ್ದಂತೆ ಎಲ್ಲರೂ ನಗೆಗಡಲಲ್ಲಿ ತೇಲಾಡಿದರು.