ಹಾನಗಲ್ಲ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ಘಟನೆಯನ್ನು ಖಂಡಿಸಿ ಸೋಮವಾರ ತಾಲೂಕು ದಲಿತ ಒಕ್ಕೂಟಗಳ ಸಮೂಹದಿಂದ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ವಿವಿಧ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.ಇಲ್ಲಿನ ಪ್ರವಾಸಿ ಮಂದಿರದಿಂದ ಆರಂಭಗೊಂಡ ಮೆರವಣಿಗೆ ಮುಖ್ಯ ರಸ್ತೆಯ ಮೂಲಕ ಗಾಂಧಿ ವೃತ್ತದಲ್ಲಿ ಕೆಲಹೊತ್ತು ಮಾನವ ಸರಪಳಿ ನಿರ್ಮಿಸಿ ಘೋಷಣೆ ಕೂಗಲಾಯಿತು. ಬಳಿಕ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು. ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಪೀಠಕ್ಕೆ ಶೂ ಎಸೆದ ವ್ಯಕ್ತಿಯ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು. ಈ ಘಟನೆ ಆಘಾತಕಾರಿ ಮತ್ತು ಶೋಚನೀಯ. ಕೋಮುವಾದಿ ಶಕ್ತಿಗಳು ಸಮಾಜದ ಒಳಗೆ ಮನುವಾದಿ ಮತ್ತು ಕೋಮು ವಿಷವನ್ನು ಚುಚ್ಚುವ ಮತ್ತೊಂದು ಉದಾಹರಣೆಯಾಗಿದೆ.ಅಸಹಿಷ್ಣುತೆಯನ್ನು ಹರಡುವ ವ್ಯಕ್ತಿಗಳ ಮತ್ತು ಸಂಘಟನೆಗಳ ವಿರುದ್ಧ ಸರಕಾರ ದೃಢ ಕ್ರಮಗಳನ್ನು ಕೈಗೊಳ್ಳಬೇಕು. ಆರೋಪಿ ವಕೀಲನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಪುಟ್ಟಪ್ಪ ನರೇಗಲ್, ಮಂಜುನಾಥ ಕರ್ಜಗಿ, ಚಂದ್ರಪ್ಪ ಹರಿಜನ, ಮಾರುತಿ ಪುರ್ಲಿ, ಉಮೇಶ ಮಾಳಗಿ, ರಾಮಚಂದ್ರ ಕಲ್ಲೇರ, ನೀಲಪ್ಪ ದೊಡ್ಡಮನಿ, ಜಯರಾಂ ಮಾಳಾಪೂರ, ರಾಜೇಶ ಲಮಾಣಿ, ಶಿವಾನಂದ ಕನ್ನಕ್ಕನವರ, ಮಾರುತಿ ಹಂಚಗಿ, ಅನಿತಾ ಡೊಸೋಜಾ, ಎನ್.ಎಂ.ಪೂಜಾರ, ಫೈರೋಜ್ ಶಿರಬಡಗಿ, ಉಮೇಶ ದೊಡ್ಡಮನಿ, ಶಿವು ಭದ್ರಾವತಿ, ಸಭಾಸ ತಳವಾರ, ಶಿವಪುತ್ರಪ್ಪ ಗಾಮನಗಟ್ಟಿ, ನಿಂಗಪ್ಪ ಹಾನಗಲ್ಲ, ಬಸಣ್ಣ ಎಸ್‌ಟಿಡಿ, ಟಾಕನಗೌಡ ಪಾಟೀಲ, ಸಿದ್ಧನಗೌಡ ಪಾಟೀಲ, ರಾಮನಗೌಡ ಪಾಟೀಲ, ಶಂಭು ಕಳಸದ, ರಾಜಕುಮಾರ ಶಿರಪಂತಿ, ಹನುಮಂತಪ್ಪ ಯಳ್ಳೂರ, ಮಂಜು ಯಳ್ಳೂರ, ರಮೇಶ ತಳವಾರ, ಅಣ್ಣಪ್ಪ ಚಿಕ್ಕಣ್ಣನವರ, ಗನಿ ಪಾಳಾ, ರೇಖಾ ಕರಿಭೀಮಣ್ಣನವರ, ರವಿ ಜಾಲಗೇರಿ, ಮಂಜುನಾಥ ಗೂರಣ್ಣನವರ, ಕುಮಾರ ಲಮಾಣಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.