ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಈ ಸಂದರ್ಭದಲ್ಲಿ ಕನಕ ಯುವಸೇನೆಯ ಅಧ್ಯಕ್ಷರಾದ ಸುರೇಶ್ ಮಾತನಾಡಿ, ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯನವರ ರಾಜೀನಾಮೆಯನ್ನು ಅಂಗೀಕರಿಸಬಾರದು, ಅವರು 5 ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲು ಬಿಡಬೇಕು. 2013 ಮತ್ತು 2022ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಅಹಿಂದಾ ನಾಯಕ ಸಿದ್ಧರಾಮಯ್ಯನವರೇ ಕಾರಣ. 5 ಗ್ಯಾರಂಟಿಗಳನ್ನು ನೀಡಿ, ರಾಜ್ಯದ ಹಿಂದುಳಿದ ವರ್ಗಕ್ಕೆ ಮತ್ತು ಕಡುಬಡವರಿಗೆ ಅನ್ನರಾಮಯ್ಯ ಎಂದೇ ಹೆಸರು ಪಡೆದಿದ್ದಾರೆ. ಕಳಂಕರಹಿತ ಆಡಳಿತ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬಾರದು, ಒತ್ತಡ ಹೇರಿ ಅವರಿಂದ ರಾಜೀನಾಮೆ ಕೊಡಿಸಿದರೆ ರಾಜ್ಯದಾದ್ಯಂತ ಹೈಕಮಾಂಡ್ ವಿರುದ್ದವೇ ದೊಡ್ಡಮಟ್ಟದ ಹೋರಾಟ ಹಮ್ಮಿಕೊಳ್ಳಲಾಗುವುದು. ಇಂದಿನ ಹೋರಾಟ ಕೇವಲ ಸಾಂಕೇತಿಕ ಅಷ್ಟೇ ಎಂದು ಎಚ್ಚರಿಕೆ ನೀಡಿದರು.
ವಾಟಾಳ್ ಮಂಜುನಾಥ್ ಮಾತನಾಡಿ, ರಾಜ್ಯದಲ್ಲಿ ಅಹಿಂದಾ ವರ್ಗಕ್ಕೆ ಸಿದ್ದರಾಮಯ್ಯನವರೇ ನಾಯಕರು. ಅವರನ್ನು ಹೈಕಮಾಂಡ್ ಕೆಳಗಿಳಿಸಿದರೆ ಅದು ಅಹಿಂದಾ ವರ್ಗಕ್ಕೆ ಮಾಡಿದ ಅನ್ಯಾಯವಾಗುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸರ್ವನಾಶವಾಗಲಿದೆ. 5 ವರ್ಷಗಳ ಆಡಳಿತದಲ್ಲಿ ಮುಖ್ಯಮಂತ್ರಿಯಾಗಿರಲು ಪಕ್ಷದ ಹೈಕಮಾಂಡ್ ಅವಕಾಶ ನೀಡಲೇಬೇಕು. ಐದು ಗ್ಯಾರೆಂಟಿಗಳ ಮೂಲಕ ಮನೆ ಮನೆಗೆ ತಲುಪಿದ್ದಾರೆ. ಹೆಣ್ಣು ಮಕ್ಕಳಿಗೆ 2000 ರು. ಗೃಹಲಕ್ಷ್ಮೀ ಯೋಜನೆ, ಶಕ್ತಿ ಯೋಜನೆ, ಯುವನಿಧಿ, ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತಂದು ರಾಜ್ಯದ ಜನತೆಗೆ ನೆರವು ನೀಡಿದ್ದಾರೆ. ಅಭೂತಪೂರ್ವ ಆಡಳಿತ ನೀಡಿದ್ದಾರೆ. ಹಿಂದುಳಿದ ವರ್ಗದ ಕಣ್ಮಣಿಯಾಗಿದ್ದಾರೆ. ಯಾವುದೇ ಕಾರಣಕ್ಕೂ ರಾಜ್ಯಪಾಲರು ಅವರ ರಾಜೀನಾಮೆ ಅಂಗೀಕರಿಸಬಾರದು. ಒಂದು ವೇಳೆ ಒತ್ತಡದಿಂದ ರಾಜೀನಾಮೆ ಕೊಡಿಸಿದರೆ ರಾಜ್ಯಾದ್ಯಂತ ಬೃಹತ್ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಎರಡು ಟಗರುಗಳನ್ನು ಕರೆತರಲಾಗಿತ್ತು. ಈ ಸಂದರ್ಭದಲ್ಲಿ ಪ್ರಮುಖರಾದ ಕೇಶವ, ನಾಗೇಶ್, ನವೀನ್, ರಾಘವೇಂದ್ರ, ದಿವಾಕರ, ಎಚ್.ಆರ್.ದೊಡ್ಡಪ್ಪ ಮತ್ತಿತರರಿದ್ದರು.