ಹರಪನಹಳ್ಳಿ: ಜಾರ್ಖಂಡ್‌ನ ರಾಂಚಿಯಲ್ಲಿ ಅಖಿಲ ಭಾರತ ವಿದ್ಯಾರ್ಥಿ ಸಂಘದ (ಎಐಎಸ್ಎ) ರಾಷ್ಟ್ರೀಯ ಅಧ್ಯಕ್ಷೆ ನೇಹಾ ಅವರ ಮೇಲೆ ನಡೆದ ದಾಳಿಯನ್ನು ಖಂಡಿಸಿ ಎಐಎಸ್ಎ ಕಾರ್ಯಕರ್ತರು ಭಾನುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಬೆಂಗಳೂರಿನಿಂದ ದೆಹಲಿ-ಮುಂಬೈನಿಂದ ಪಾಟ್ನಾವರೆಗೆ ದೇಶವನ್ನೇ ವ್ಯಾಪಿಸಿದ ಇತ್ತೀಚಿನ ಯುವಜನರ ಹೋರಾಟದ ಮುಂಚೂಣಿಯಲ್ಲಿ ನಿಂತಿದ್ದು ಯುವತಿಯರು. ಇದನ್ನು ಸಹಿಸಿಕೊಳ್ಳದ ಆರ್ ಎಸ್ ಎಸ್ ಸಂಘ ಪರಿವಾರದವರು ಈ ರೀತಿಯ ಕೃತ್ಯ ನಡೆಸಿದ್ದಾರೆ ಎಂದು ಆರೋಪಿಸಿದರು.
ಮಹಿಳೆಯರನ್ನು ಕೇವಲ ಸಂಸ್ಕೃತಿಯ ಸಂಕೇತಗಳಾಗಿ, ಕುಟುಂಬದ ಗೌರವದ ಹೊರೆ ಹೊರುವವರಾಗಿ, ಪುರುಷಾಧಿಪತ್ಯದ ಆದೇಶ ಪಾಲಿಸುವ ಕಾಲಾಳುಗಳಾಗಿ ಮಾತ್ರ ನೋಡಲು ಬಯಸುವ ಸಂಘ ಪರಿವಾರದ ಸೈದ್ಧಾಂತಿಕ ಯೋಜನೆಗೆ ಮಹಿಳೆಯರು ರಾಜಕೀಯ ನಾಯಕತ್ವವನ್ನು ವಹಿಸುವ ಈ ದೃಶ್ಯವೇ ಅವರಿಗೆ ಅಸಹನೀಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಾರ್ಖಂಡನಲ್ಲಿ ನೇಹಾ ಮತ್ತು ಇತರ ಮಹಿಳಾ ಪ್ರತಿಭಟನಾಕಾರರ ಮೇಲೆ ನಡೆಸಿದ ದಾಳಿಕೊರರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.ಗುಳ್ಳೆದಹಟ್ಟಿ ಸಂತೋಷ್, ಹುಲಿಕಟ್ಟಿ ಮೈಲಪ್ಪ, ಬಾಗಳಿ ರೇಣುಕಮ್ಮ ಮೊಮ್ಮದ್ ರಫೀಕ್, ನಾರಾಯಣಪುರ ಮಂಗಳಕ್ಕ, ರೂಪ, ವಿದ್ಯರ್ಥಿ ಸಂಘಟನೆ ಮುಖಂಡರಾದ ವಿನಯ್ ಕುಮಾರ್, ಮೋಹನ್, ಕಲೀಮ್ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.