ಆನ್‌ಲೈನ್ ವ್ಯಾಪಾರ ನಿಷೇಧಕ್ಕೆ ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork |  
Published : May 21, 2026, 01:15 AM IST
ಮೋದಿ | Kannada Prabha

ಸಾರಾಂಶ

ಕೋಲಾರದಲ್ಲಿ ಎರಡು ಪ್ರತ್ಯೇಕ ಸಂಘಗಳು ಹಿನ್ನೆಲೆಯಲ್ಲಿ ಮೆಡಿಕಲ್ ಶಾಪ್ ಗಳು ತೆಗಿಯುವ ವಿಚಾರಕ್ಕೆ ಗೊಂದಲ ಉಂಟಾಗಿ ಕೋಲಾರ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದವರಿಂದ ಮೆಡಿಕಲ್ ಶಾಪ್‌ಗಳು ಕಾರ್ಯನಿರ್ವಹಣೆ ಮಾಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಕೋಲಾರಕೋಲಾರ ಜಿಲ್ಲೆಯಲ್ಲಿ ೧೨೦೦ಕ್ಕೂ ಅಧಿಕ ಮೆಡಿಕಲ್ ಶಾಪ್‌ಗಳು ಎಂದಿನಂತೆ ಶೇ.೮೦ರಷ್ಟು ಮೆಡಿಕಲ್ ಶಾಪ್‌ಗಳ ಮಾಲೀಕರು ಕಪ್ಪು ಪಟ್ಟಿ ಧರಿಸಿ ಮೆಡಿಕಲ್ ಶಾಪ್ ಓಪನ್ ಮಾಡಿ ಕಾರ್ಯನಿರ್ವಹಣೆ ಪ್ರಾರಂಭಿಸಿದ್ದಾರೆ.ಕೋಲಾರದಲ್ಲಿ ಎರಡು ಪ್ರತ್ಯೇಕ ಸಂಘಗಳು ಹಿನ್ನೆಲೆಯಲ್ಲಿ ಮೆಡಿಕಲ್ ಶಾಪ್ ಗಳು ತೆಗಿಯುವ ವಿಚಾರಕ್ಕೆ ಗೊಂದಲ ಉಂಟಾಗಿ ಕೋಲಾರ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದವರಿಂದ ಮೆಡಿಕಲ್ ಶಾಪ್‌ಗಳು ಕಾರ್ಯನಿರ್ವಹಣೆ ಮಾಡಲಾಗುತ್ತಿದೆ.ದಿ ಕೋಲಾರ ಡಿಸ್ಟಿಕ್ಸ್ ಕೆಮಿಸ್ಟ್ ವೆಲ್ಫೇರ್ ಅಸೋಸಿಯೇಷನ್ ನಿಂದ ಬಂದ್‌ಗೆ ಬೆಂಬಲ ನೀಡಲಾಗುತ್ತಿದೆ, ಕನ್ನಡಪ್ರಭದೊಂದಿಗೆ ಅಧ್ಯಕ್ಷ ವೆಂಕಟೇಶ್ ಗೌಡ ಮಾತನಾಡಿ ಕೇಂದ್ರ ಸರ್ಕಾರ ಭರವಸೆ ಮೇರೆಗೆ ನಾವು ಮೆಡಿಕಲ್ ಸ್ಟೋರ್ ಓಪನ್ ಮಾಡಿದ್ದೇವೆ, ಆದರೆ ಬಂದ್‌ಗೆ ನಮ್ಮದು ನೈತಿಕ ಬೆಂಬಲ ಇದೆ, ಈಗಾಗಿ ಕಪ್ಪು ಪಟ್ಟಿ ಧರಿಸಿ ಸೇವೆ ನೀಡುತ್ತಿದ್ದೇವೆ ಎಂದು ತಿಳಿಸಿದರು.ಜಿಲ್ಲೆಯಲ್ಲಿ ಶೇ.೮೦ರಷ್ಟು ಮೆಡಿಕಲ್ ಶಾಪ್‌ಗಳು ಓಪನ್ ಇರಲಿದೆ, ಜನಸಾಮಾನ್ಯರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗಬಾರದು, ಕೊರೊನಾ ಕಾಲದಲ್ಲೂ ನಾವು ಭಯ ಪಡದೇ ಕೆಲಸ ಮಾಡಿದ್ದೇವೆ, ಕೆಲವರು ಸರಿಯಾದ ಮಾಹಿತಿ ಇಲ್ಲದೆ ಬಂದ್ ಮಾಡುತ್ತಿದ್ದಾರೆ ಎಂದು ಹೇಳಿದರು.ಕೇಂದ್ರ ಸರ್ಕಾರ ಆನ್‌ಲೈನ್ ವ್ಯಾಪಾರ ನಿಷೇಧಿಸುವ ನಂಬಿಕೆ ಇದೆ ಎಂದು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ವೆಂಕಟೇಶ್ ಗೌಡ ವಿವರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತುಮಕೂರು ವಿವಿ ಕಲಾ ಕಾಲೇಜು ಚಾಂಪಿಯನ್
ಸಾಣೇಹಳ್ಳಿ ಕೆರೆ ಹೂಳೆತ್ತುವ ಕಾರ್ಯ ಒಂದು ವಾರದಲ್ಲಿ ಮುಕ್ತಾಯ