ರೈಲ್ವೆ ಟ್ರ್ಯಾಕ್ ಮಾರ್ಗ ಬದಲಾಯಿಸಲು ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork |  
Published : Jan 21, 2025, 12:35 AM IST
ಬಳ್ಳಾರಿ ನಗರ ವ್ಯಾಪ್ತಿಗೆ ಬರುವ ಹದ್ದಿನಗುಂಡು ಪ್ರದೇಶದಿಂದ ಹಲಕುಂದಿವರೆಗೆ ನಿರ್ಮಿಸುತ್ತಿರುವ ರೈಲ್ವೆ ಟ್ರ್ಯಾಕ್ ಮಾರ್ಗ ಬದಲಾಯಿಸಬೇಕು ಎಂದಿ ಒತ್ತಾಯಿಸಿ ವಿವಿಧ ಗ್ರಾಮಸ್ಥರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ರೈಲ್ವೆ ಟ್ರ್ಯಾಕ್‌ನಿಂದ ಸಾರ್ವಜನಿಕರಿಗೆ ತೀರಾ ಅನಾನುಕೂಲವಾಗಲಿದೆ.

ಬಳ್ಳಾರಿ: ಬಳ್ಳಾರಿ ನಗರ ವ್ಯಾಪ್ತಿಗೆ ಬರುವ ಹದ್ದಿನಗುಂಡು ಪ್ರದೇಶದಿಂದ ಹಲಕುಂದಿವರೆಗೆ ನಿರ್ಮಿಸುತ್ತಿರುವ ರೈಲ್ವೆ ಟ್ರ್ಯಾಕ್ ನ ಮಾರ್ಗ ಬದಲಾಯಿಸಿ ಬೇರೆಡೆ ನಿರ್ಮಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ವಿವಿಧ ಗ್ರಾಮಸ್ಥರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಜಿಂದಾಲ್ ಕಾರ್ಖಾನೆಯವರಿಗಾಗಿ ನಗರದ ಹದ್ದಿನಗುಂಡು ಪ್ರದೇಶದಿಂದ ಹಲಕುಂದಿವರೆಗೆ ನಿರ್ಮಿಸಲು ಉದ್ದೇಶಿಸುತ್ತಿರುವ ರೈಲ್ವೆ ಟ್ರ್ಯಾಕ್‌ನಿಂದ ಸಾರ್ವಜನಿಕರಿಗೆ ತೀರಾ ಅನಾನುಕೂಲವಾಗಲಿದೆ. ಈ ಭಾಗದಲ್ಲಿ ನೂರಾರು ಮನೆಗಳು, ಸಣ್ಣ ಕಾರ್ಖಾನೆಗಳು, ಕೋಲ್ಡ್ ಸ್ಟೋರೇಜ್, ದೇವಸ್ಥಾನಗಳು, ಕೃಷಿ ಭೂಮಿಗಳು ಇದ್ದು, ಟ್ರ್ಯಾಕ್ ನಿರ್ಮಿಸುವುದರಿಂದ ಮನೆಗಳು, ದೇವಸ್ಥಾನಗಳು ಸೇರಿದಂತೆ ಉಳಿದಂತೆ ಎಲ್ಲ ವಿಭಾಗಗಳು ನೆಲಸಮವಾಗುವ ಸಾಧ್ಯತೆಗಳಿವೆ. ಸಣ್ಣಪುಟ್ಟ ರೈತರು ಜಮೀನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಈಗಾಗಲೇ ಬಳ್ಳಾರಿ ಸುತ್ತಮುತ್ತ ರಿಂಗ್ ರಸ್ತೆ, ಬೈಪಾಸ್ ರಸ್ತೆಗಳ ನಿರ್ಮಾಣಕ್ಕೆ ರೈತರ ಜಮೀನುಗಳನ್ನು ಪಡೆಯಲಾಗಿದ್ದು, ಇದೀಗ ರೈಲ್ವೆ ಟ್ರ್ಯಾಕ್ ನಿರ್ಮಾಣಕ್ಕೆ ಭೂಮಿ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಹೀಗಾಗಿ ಸದರಿ ಯೋಜನೆಯಿಂದ ದೂರ ಸರಿಯಬೇಕು. ಹಲಕುಂದಿ ಗ್ರಾಮ ವ್ಯಾಪ್ತಿಯ 5 ಕಿ.ಮೀ ದೂರದಲ್ಲಿ ಟ್ರ್ಯಾಕ್‌ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ತಲುಪಿದ ಪ್ರತಿಭಟನಾಕಾರರು, ಸರ್ಕಾರ ರೈತರ ಹಿತ ಕಾಯಬೇಕು. ಬಡಜನರ ನೆರವಿಗೆ ಬರಬೇಕು. ಯಾವುದೇ ಕಾರಣಕ್ಕೂ ನಗರ ವ್ಯಾಪ್ತಿಯಲ್ಲಿ ರೈಲ್ವೆ ಟ್ರ್ಯಾಕ್ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

ಶಶಿಕಲಾ ಮೋಹನ್, ಕೆರಕೋಡಪ್ಪ, ಎಚ್‌.ಚಂದ್ರಶೇಖರಗೌಡ, ಕೃಷ್ಣಮೋಹನ್, ನಾಗರಾಜ್, ಭೀಮರೆಡ್ಡಿ, ತಿಮ್ಮಾರೆಡ್ಡಿ, ಎರಿಸ್ವಾಮಿ, ಪ್ರಭುದೇವ ಅವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಹಲಕುಂದಿ, ಬೆಳಗಲ್, ಮುಂಡ್ರಿಗಿ, ಗೋನಾಳ್, ಅಂದ್ರಾಳು, ಮಂಗಳಮ್ಮ ಕ್ಯಾಂಪ್, ಮಾರುತಿ ಕ್ಯಾಂಪ್‌, ಬಿಸಿಲಹಳ್ಳಿ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬಳ್ಳಾರಿ ನಗರ ವ್ಯಾಪ್ತಿಗೆ ಬರುವ ಹದ್ದಿನಗುಂಡು ಪ್ರದೇಶದಿಂದ ಹಲಕುಂದಿವರೆಗೆ ನಿರ್ಮಿಸುತ್ತಿರುವ ರೈಲ್ವೆ ಟ್ರ್ಯಾಕ್ ಮಾರ್ಗ ಬದಲಾಯಿಸಬೇಕು ಎಂದಿ ಒತ್ತಾಯಿಸಿ ವಿವಿಧ ಗ್ರಾಮಸ್ಥರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

PREV

Recommended Stories

ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ
ಧರ್ಮಸ್ಥಳ ಕಾಡಲ್ಲಿ ಅಸ್ಥಿಪಂಜರ: ಇದು ದೂರುದಾರ ತೋರಿಸಿದ್ದಲ್ಲ