ಖಾಸಗಿ ಫೈನಾನ್ಸ್‌ನಲ್ಲಿನ ಸಾಲಮನ್ನಾ ಮಾಡಲು ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork |  
Published : Sep 21, 2025, 02:02 AM IST
19ಎಚ್‌ವಿಆರ್3- | Kannada Prabha

ಸಾರಾಂಶ

ರೈತ ಸಂಘದ ರಾಣಿಬೆನ್ನೂರು ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ಬಡವರನ್ನು ಟಾರ್ಗೆಟ್ ಮಾಡಿ ಸುಲಭ ರೀತಿಯಾಗಿ ಸಾಲ ನೀಡುವುದಾಗಿ ಹೇಳಿ ಸಾಲ ನೀಡಿದ ಮೇಲೆ ಅವರ ಮನೆಯವರೆಗೆ ಹೋಗಿ ವಿಪರೀತ ಕಿರುಕುಳ ನೀಡುತ್ತಿರುವ ಖಾಸಗಿ ಮೈಕ್ರೋ ಫೈನಾನ್ಸ್‌ಗಳ ಮೇಲೆ ಕಠಿಣ ಕಾನೂನು ಕ್ರಮ ಆಗಬೇಕು. ಬಡವರಿಗೆ ನೀಡಿರುವ ಎಲ್ಲ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಹಾವೇರಿ: ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್‌ಗಳ ಹಾವಳಿ ಮಿತಿಮೀರಿದ್ದು, ಇದರಿಂದ ಸಾಲ ಪಡೆದ ಬಡ ಹೆಣ್ಣುಮಕ್ಕಳು ಬೀದಿಗೆ ಬಂದಿದ್ದಾರೆ. ಕೂಡಲೇ ಖಾಸಗಿ ಫೈನಾನ್ಸ್‌ನಿಂದ ಪಡೆದ ಎಲ್ಲ ಸಾಲವನ್ನು ಮನ್ನಾ ಮಾಡಬೇಕು ಎಂದು ಜಿಲ್ಲಾ ರೈತ ಸಂಘಗಳ ಒಕ್ಕೂಟದ ಪದಾಧಿಕಾರಿಗಳು, ಮಹಿಳೆಯರು ಆಗ್ರಹಿಸಿದರು.ನಗರದ ತಾಪಂ ಕಚೇರಿ ಆವರಣದಲ್ಲಿರುವ ಸಂಸದ ಬಸವರಾಜ ಬೊಮ್ಮಾಯಿ ಅವರ ಕಚೇರಿ ಎದುರು ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.ರೈತ ಸಂಘದ ರಾಣಿಬೆನ್ನೂರು ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ಬಡವರನ್ನು ಟಾರ್ಗೆಟ್ ಮಾಡಿ ಸುಲಭ ರೀತಿಯಾಗಿ ಸಾಲ ನೀಡುವುದಾಗಿ ಹೇಳಿ ಸಾಲ ನೀಡಿದ ಮೇಲೆ ಅವರ ಮನೆಯವರೆಗೆ ಹೋಗಿ ವಿಪರೀತ ಕಿರುಕುಳ ನೀಡುತ್ತಿರುವ ಖಾಸಗಿ ಮೈಕ್ರೋ ಫೈನಾನ್ಸ್‌ಗಳ ಮೇಲೆ ಕಠಿಣ ಕಾನೂನು ಕ್ರಮ ಆಗಬೇಕು. ಬಡವರಿಗೆ ನೀಡಿರುವ ಎಲ್ಲ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.ಹನುಮಂತಪ್ಪ ದೀವಗಿಹಳ್ಳಿ ಮಾತನಾಡಿ, ಬಡ, ಕೂಲಿ ಕಾರ್ಮಿಕರ ಕುಟುಂಬದ ಹೆಣ್ಣುಮಕ್ಕಳ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಬಡವರ ಹಣಕಾಸಿನ ತೊಂದರೆ ತಿಳಿದ ಖಾಸಗಿ ಮೈಕ್ರೋ ಫೈನಾನ್ಸ್‌ಗಳು ಸಂಘಗಳನ್ನು ನಿರ್ಮಿಸಿ ಸರಳ ವಿಧಾನದಲ್ಲಿ ಸಾಲ ಕೊಟ್ಟು ನಂತರ ಅವರ ಮನೆ ಬಾಗಿಲಿಗೆ ಹೋಗಿ ದಬ್ಬಾಳಿಕೆ ಮಾಡುತ್ತಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ನಮ್ಮ ಬಡವರಿಗೆ ಸರಳ ರೀತಿಯಲ್ಲಿ ಸಾಲ ಕೊಡದಿರುವುದೇ ಇಂತಹ ದುರಂತಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ರೈತರು ಅತಿವೃಷ್ಟಿಯಿಂದ ಸಂಪೂರ್ಣ ಬೆಳೆ ನಾಶವಾಗಿದ್ದು, ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.ಈ ವೇಳೆ ರಾಜಶೇಖರ ದೂದಿಹಳ್ಳಿ, ಮಹೇಶ ಕೊಟ್ಟೂರ, ಮಂಜುನಾಥ ಸಂಬೋಜಿ, ರಾಜೇಶ ಅಂಗಡಿ, ಬಸವರಾಜ ಮೇಗಳಗೇರಿ, ಶೈಲಮ್ಮ ಅರಣಗೇರಿ, ಅಮೀಬಾ ನುಸಿದೆನೂರ, ನಾಗಮ್ಮ ತಳವಾರ, ಕೊಟ್ರಮ್ಮ ಕಾಯಿಕಾರ, ರೈಮಾ ಕಮ್ಮಾರ ರೇಖಮ್ಮ ಪೂಜಾರಿ, ನೀಲಮ್ಮ ಮೇಗಳಗೆರೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ ವಸತಿ ವ್ಯವಸ್ಥೆ ಕಲ್ಪಿಸಿದರೆ ಕೋರ್ಟ್‌ಗೆ: ಮುತಾಲಿಕ್‌
ಗುರುರಾಜ್ ಹೆಬ್ಬಾರ್ ಸ್ಮರಣಾರ್ಥ ರಕ್ತದಾನ ಶಿಬಿರ