ಬಸಾಪುರ ಗ್ರಾಮದಲ್ಲಿ ಯೂರಿಯಾ ಗೊಬ್ಬರಕ್ಕಾಗಿ ಪ್ರತಿಭಟನೆ

KannadaprabhaNewsNetwork |  
Published : Jul 24, 2025, 12:50 AM IST
ಗುತ್ತಲ ಸಮೀಪದ ಬಸಾಪುರ ಗ್ರಾಮದ ಬೀರೇಶ್ವರ ಅಗ್ರೋ ಕೇಂದ್ರದ ಬಳಿ ಯೂರಿಯಾ ಗೊಬ್ಬರಕ್ಕಾಗಿ ಅನ್ನದಾತರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಗುತ್ತಲ- ಹಾವೇರಿ ರಸ್ತೆ ಬಂದ್ ಮಾಡಲು ಹೊರಟ ಪ್ರತಿಭಟನಾಕಾರರನ್ನು ಗುತ್ತಲ ಪಿಎಸ್‌ಐ ಬಸವನಗೌಡ ಬಿರಾದಾರ ಸ್ಥಳಕ್ಕೆ ಆಗಮಿಸಿ ತಡೆದರು. ಯಾವುದೆ ಕಾರಣಕ್ಕೂ ರಸ್ತೆ ಬಂದ್‌ ಮಾಡಲು ಅವಕಾಶ ನೀಡುವುದಿಲ್ಲ ಎಂದ ಮೇಲೆ ರಸ್ತೆತಡೆ ಮಾಡುವುದನ್ನು ಪ್ರತಿಭಟನಾಕಾರರು ರೈತರು ಕೈಬಿಟ್ಟರು.

ಗುತ್ತಲ: ಯೂರಿಯಾ ಗೊಬ್ಬರ ನೀಡುವಂತೆ ಆಗ್ರಹಿಸಿ ಅನ್ನದಾತರು ಪ್ರತಿಭಟನೆ ಮಾಡಿದ ಘಟನೆ ಸಮೀಪದ ಬಸಾಪುರ ಗ್ರಾಮದಲ್ಲಿ ಬುಧವಾರ ನಡೆದಿದೆ.

ಬೀರೇಶ್ವರ ಅಗ್ರೋ ಕೇಂದ್ರಕ್ಕೆ 330 ಚೀಲ ಯೂರಿಯಾ ಗೊಬ್ಬರ ಪೂರೈಕೆಯಾದ ಹಿನ್ನೆಲೆ ಬುಧವಾರ ವಿತರಣೆ ಮಾಡಲು ಮಾಲೀಕರು ಮುಂದಾಗಿದ್ದರು. ಆಗ 500ಕ್ಕೂ ಹೆಚ್ಚು ರೈತರು ಸರದಿಯಲ್ಲಿ ನಿಂತಿದ್ದರು. 330 ಚೀಲ ಗೊಬ್ಬರ ಸಾಕಾಗಲ್ಲ. ಗೊಬ್ಬರ ವಿತರಣೆ ಮಾಡುವುದು ಬೇಡ ಎಂದು ರೈತರು ಪ್ರತಿಭಟನೆಗೆ ಮುಂದಾದರು.ಗುತ್ತಲ- ಹಾವೇರಿ ರಸ್ತೆ ಬಂದ್ ಮಾಡಲು ಹೊರಟ ಪ್ರತಿಭಟನಾಕಾರರನ್ನು ಗುತ್ತಲ ಪಿಎಸ್‌ಐ ಬಸವನಗೌಡ ಬಿರಾದಾರ ಸ್ಥಳಕ್ಕೆ ಆಗಮಿಸಿ ತಡೆದರು. ಯಾವುದೆ ಕಾರಣಕ್ಕೂ ರಸ್ತೆ ಬಂದ್‌ ಮಾಡಲು ಅವಕಾಶ ನೀಡುವುದಿಲ್ಲ ಎಂದ ಮೇಲೆ ರಸ್ತೆತಡೆ ಮಾಡುವುದನ್ನು ಪ್ರತಿಭಟನಾಕಾರರು ರೈತರು ಕೈಬಿಟ್ಟರು.

ಸ್ಥಳಕ್ಕೆ ಸಹಾಯಕ ಕೃಷಿ ನಿರ್ದೇಶಕ ಬಿ.ಎಚ್. ವೀರಭದ್ರಪ್ಪ ಆಗಮಿಸಿ, ಜು. 24ರಂದು ಬೀರೇಶ್ವರ ಅಗ್ರೋ ಕೇಂದ್ರಕ್ಕೆ 330 ಚೀಲ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ 500 ಚೀಲ ಯೂರಿಯಾ ಗೊಬ್ಬರವನ್ನು ನೀಡಲಾಗುವುದೆಂದು ಭರವಸೆ ನೀಡಿದ ಮೇಲೆ ಪ್ರತಿಭಟನೆ ವಾಪಸ್ ಪಡೆಯಲಾಯಿತು.

ಜು. 24ರಂದು ಗೊಬ್ಬರವನ್ನು ನೀಡದಿದ್ದಲ್ಲಿ ಹಾವೇರಿ- ಗುತ್ತಲ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದೆಂದು ರೈತರು ಎಚ್ಚರಿಸಿದ್ದಾರೆ.

ಸ್ಥಳಕ್ಕೆ ಗ್ರಾಮೀಣ ಠಾಣೆಯ ಸಿಪಿಐ ಸಂತೋಷ ಪವಾರ, ಗುತ್ತಲ ಪಿಎಸ್‌ಐ ಬಸವನಗೌಡ ಬಿರಾದಾರ, ಎ.ಆರ್. ಮುಂದಿನಮನಿ ಮತ್ತು ಪೊಲೀಸ್ ಸಿಬ್ಬಂದಿ ಬಿಗಿ ಬಂದೋಬಸ್ತ್‌ ಕೈಗೊಂಡಿದ್ದರು.ಜಿಎಸ್‌ಟಿ ನೋಟಿಸ್ ಹಿಂದಕ್ಕೆ ಪಡೆಯಲು ಆಗ್ರಹ

ರಾಣಿಬೆನ್ನೂರು: ರಾಜ್ಯದಲ್ಲಿ ಸಣ್ಣ ಮತ್ತು ಅತಿ- ಸಣ್ಣ ವ್ಯಾಪಾರಸ್ಥರಿಗೆ ನೀಡಿರುವ ನೋಟಿಸ್‌ನ್ನು ಕೂಡಲೇ ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಸ್ಥಳೀಯ ಎಪಿಎಂಸಿ ವರ್ತಕರ ಸಂಘದ ಮಾಜಿ ಅಧ್ಯಕ್ಷ ಗದಿಗೆಪ್ಪ ಹೊಟ್ಟಿಗೌಡ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಒತ್ತಾಯಿಸಿದ್ದಾರೆ.ಈ ಕುರಿತು ನೀಡಿರುವ ಪ್ರಕಟಣೆಯಲ್ಲಿ, ಜಿಎಸ್‌ಟಿ ಜಾರಿಗೆ ಬಂದು 8 ವರ್ಷವಾಯಿತು. ವರ್ತಕರಿಗೆ ಮೊದಲು ತಿಳಿವಳಿಕೆ ನೀಡಿ ನಂತರ ನೋಟಿಸ್ ಕೊಟ್ಟರೆ ಉತ್ತಮ. ಏಕಾಏಕಿ ರೋಡಿನಲ್ಲಿ ವ್ಯಾಪಾರ ಮಾಡುವವರಿಗೂ ನೋಟಿಸ್ ಕೊಟ್ಟು ಹತ್ತು ಲಕ್ಷದಿಂದ ಒಂದು ಕೋಟಿಯವರೆಗೂ ತೆರಿಗೆ ಕಟ್ಟುವಂತೆ ಸೂಚಿಸಿದರೆ ಹೇಗೆ ಸಾಧ್ಯ? ಮೊದಲು ನೋಟಿಸ್ ನೀಡಿರುವ ಆರು ಸಾವಿರ ಜನರಿಗೂ ತಿಳಿವಳಿಕೆ ಕೊಡಿ. ಆ ನಂತರ ತಮ್ಮ ಅವೈಜ್ಞಾನಿಕ ತೆರಿಗೆ ವಸೂಲು ಮಾಡಿ. ಇಲ್ಲವಾದರೆ ನೋಟಿಸ್ ಕೊಡುವುದನ್ನು ನಿಲ್ಲಿಸಿ. ಮುಂದಿನ ದಿನಮಾನದಲ್ಲಿ ವರ್ತಕರಿಗೆ ಕಾನೂನುಬದ್ಧವಾಗಿ ತೆರಿಗೆ ಕಟ್ಟುವ ಹಾಗೆ ತಿಳಿವಳಿಕೆ ಕೊಡಿ. ಇದರ ಹೊಣೆ ಮತ್ತು ನಿರ್ವಹಣೆಯನ್ನು ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆ ಮಾಡಬೇಕು ಎಂದು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತೋಟಗಾರಿಕೆ ವಿವಿಯಲ್ಲಿ ರೈತ ಸಂಪರ್ಕ ಕೇಂದ್ರ ಸ್ಥಾಪಿಸಿ
ದೈವಾರಾಧನೆ ಬಗ್ಗೆ ಮಾತಿನಲ್ಲಿ ಎಚ್ಚರ ಇರಲಿ: ಸುರೇಶ್‌ ನಾವೂರು