ಬ್ಯಾಡಗಿ: ಅಧಿಕೃತ ಲೈಸೆನ್ಸ್ ಪಡೆದಿರುವ ದಸ್ತಾವೇಜು (ಪತ್ರ) ಬರಹಗಾರ (ಬಾಂಡ್ ರೈಟರ್‌ಗಳಿಗೆ) ರಿಗೆ ಪ್ರತ್ಯೇಕ ಲಾಗಿನ್ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಪಟ್ಟಣದ ದಸ್ತಾವೇಜು ಬರಹಗಾರರ ಸಂಘದ ಸದಸ್ಯರು ಪಟ್ಟಣದ ಉಪನೋಂದಾಣಿಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದರು.
ಕಾವೇರಿ-3 ರಲ್ಲಿ ಲೋಪದೋಷ: ಕಚೇರಿ ಕೆಲಸಗಳಿಗೆ ವೇಗ ನೀಡುವ ದೃಷ್ಟಿಯಿಂದ ಕಾವೇರಿ-3 ನ್ನು ಪ್ರಚುರಪಡಿಸಲಾಗಿದೆ. ಇದರಲ್ಲಿಯೂ ಸಾಕಷ್ಟು ಲೋಪದೋಷಗಳಿದ್ದು ಇಲ್ಲಿಯೂ ಸಹ ದಸ್ತಾವೇಜುಗಳ ನೊಂದಣಿ ಸುಲಭವಾಗಿಲ್ಲ. ಹೀಗಾಗಿ ಇವೆಲ್ಲಾ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ನಾವು ಬೀದಿಗಿಳಿದು ಹೋರಾಟ ಮಾಡಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಬಸವರಾಜ ಹಡಗಲಿ, ಕೆ.ಕೆ.ಪಾಟೀಲ, ಪರುಶರಾಮ ಹಡಗಲಿ, ವಿ.ಎಸ್.ಕಲ್ಯಾಣಮಠ ಸೇರಿದಂತೆ ಇನ್ನಿತರರಿದ್ದರು,.
ಡಿ.10 ರಿಂದ ಅನಿರ್ದಿಷ್ಟಾವಧಿ ಮುಷ್ಕರ: ತಮ್ಮೆಲ್ಲಾ ಬೇಡಿಕೆಗಳು ಈಡೇರುವವರೆಗೂ ಯಾವುದೇ ದಸ್ತಾವೇಜುಗಳನ್ನು ನೋಂದಣಿ ಮಾಡಲಾಗುವುದಿಲ್ಲ ಹೀಗಾಗಿ ಡಿ.10ರಿಂದ ಉಪನೋಂದಣಿ ಕಚೇರಿಯೆದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗುವುದು ಎಂದು ದಸ್ತಾವೇಜು ಬರಹಗಾರರ ಸಂಘದವರು ಹೇಳಿದರು.ಕೋರ್ಟ ಮೊರೆಗೂ ಹಿಂಜರಿಯುವುದಿಲ್ಲ: ದಸ್ತಾವೇಜು ಬರಹಗಾರರ ನ್ಯಾಯಸಮ್ಮತ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೇ ಹೈಕೋರ್ಟ ಮೊರೆ ಹೋಗಲು ಹಿಂಜರಿಯುವುದಿಲ್ಲ. ಕಾರಣ ಸರ್ಕಾರ ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಬಸವರಾಜ ಹಡಗಲಿ ಹೇಳಿದರು.