ರಮೇಶ್ ಕುಮಾರ್ ಭೂ ಒತ್ತುವರಿ ಸರ್ವೆ ಮೂಂದೂಡಿಕೆ

KannadaprabhaNewsNetwork | Published : Nov 6, 2024 12:41 AM

ಸಾರಾಂಶ

ಡಿಡಿಎಲ್‌ಅರ್ ಹಾಗೂ ಒತ್ತುವರಿದಾರರ ಸಮ್ಮುಖದಲ್ಲಿ ನಡೆಯಬೇಕಿದ್ದ ಜಂಟಿ ಸರ್ವೇಗೆ ತಾತ್ಕಾಲಿಕ ಬ್ರೇಕ್ ಹಾಕಿರುವ ಕಂದಾಯ ಇಲಾಖೆ ನಡೆ ಸಾಕಷ್ಟು ಅನುಮಾನಗಳು ಮೂಡಿದೆ. ಕೆಲವು ಕಾರಣಗಳನ್ನ ನೀಡಿ ಅಧಿಕಾರಿಗಳು ಜಂಟಿ ಸರ್ವೇಗೆ ತಡೆಯೊಡ್ಡಿರುವ ಸಾಧ್ಯತೆ ಇದ್ದು, ರಮೇಶ್ ಕುಮಾರ್ ತಮ್ಮ ಪ್ರಭಾವ ಬಳಸಿ ತಡೆಯೊಡ್ಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಕನ್ನಡಪ್ರಭ ವಾರ್ತೆ ಕೋಲಾರಮಾಜಿ ಸ್ಪೀಕರ್ ರಮೇಶ್ ಕುಮಾರ್ ರಿಂದ ಅರಣ್ಯ ಭೂಮಿ ಒತ್ತುವರಿ ವಿಚಾರ ನಾಳೆ ನಡೆಯಬೇಕಿದ್ದ ಜಂಟಿ ಸರ್ವೆ ಕಾರ್ಯ ಮೂಂದೂಡಲಾಗಿದೆ. ಕೋಲಾರದಲ್ಲಿ ವಿವಾದಿತ ಅರಣ್ಯ ಭೂಮಿ ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಒತ್ತುವರಿ ತೆರವು ಉತ್ಸಾಹಕ್ಕೆ ಕಂದಾಯ ಇಲಾಖೆ ತಣ್ಣೀರೆರೆಚಿದೆ. ಕಂದಾಯ ಇಲಾಖೆಯ ತಾಂತ್ರಿಕ ಕಾರಣಗಳಿಂದ ಮುಂದೂಡಿರುವ ಜಂಟಿ ಸರ್ವೇ ಕಾರ್ಯಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ, ಅಂದರೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ತಮ್ಮ ಪ್ರಭಾವ ಬಳಿಸಿ ಜಂಟಿ ಸರ್ವೇಗೆ ತಡೆ ನೀಡಿದ್ದಾರೆ ಎನ್ನಲಾಗಿದೆ.ರಮೇಶ್‌ ಕುಮಾರ್‌ ಪ್ರಭಾವ?

ಡಿಡಿಎಲ್‌ಅರ್ ಹಾಗೂ ಒತ್ತುವರಿದಾರರ ಸಮ್ಮುಖದಲ್ಲಿ ನಡೆಯಬೇಕಿದ್ದ ಜಂಟಿ ಸರ್ವೇಗೆ ತಾತ್ಕಾಲಿಕ ಬ್ರೇಕ್ ಹಾಕಿರುವ ಕಂದಾಯ ಇಲಾಖೆ ನಡೆ ಸಾಕಷ್ಟು ಅನುಮಾನಗಳು ಮೂಡಿದೆ. ಕೆಲವು ಕಾರಣಗಳನ್ನ ನೀಡಿ ಅಧಿಕಾರಿಗಳು ಜಂಟಿ ಸರ್ವೇಗೆ ತಡೆಯೊಡ್ಡಿರುವ ಸಾಧ್ಯತೆ ಇದ್ದು, ರಮೇಶ್ ಕುಮಾರ್ ತಮ್ಮ ಪ್ರಭಾವ ಬಳಸಿ ತಡೆಯೊಡ್ಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.ಕಳೆದ ೨ ವರ್ಷಗಳಿಂದ ಕಣ್ಮರೆಯಾಗಿದ್ದ ಮಾಜಿ ಸ್ಪೀಕರ್ ಸಧ್ಯ ಚನ್ನಪಟ್ಟಣ ಬೈ ಎಲೆಕ್ಷನ್ ಭರಾಟೆಯಲ್ಲಿ ಬಿಸಿಯಾಗಿದ್ದಾರೆ. ಸಧ್ಯ ಆಕ್ಟೀವ್ ಆಗಿ ರಮೇಶ್ ಕುಮಾರ್ ಕಾಂಗ್ರೆಸ್ ಪರ ಪ್ರಚಾರಕ್ಕೆ ದುಮಿಕಿದ್ದಾರೆ, ಎಲೆಕ್ಷನ್‌ನಲ್ಲಿ ಭಾಗಿಯಾಗುವ ಮೂಲಕ ಜಂಟಿ ಸರ್ವೆ ವೇಳೆ ಗೈರು ನೆಪ ಹೇಳುವ ಸಾಧ್ಯತೆ ಹೆಚ್ಚಾಗಿದೆ. ಬೈ ಎಲೆಕ್ಷನ್ ಪ್ರಚಾರದ ಜೊತೆಗೆ ಜಮೀನು ರಕ್ಷಣೆಗೆ ರಮೇಶ್ ಕುಮಾರ್ ಮಾಸ್ಟರ್ ಪ್ಲಾನ್ ಮಾಡಿದ್ದು, ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ನಾಳೆ ಜಂಟಿ ಸರ್ವೇಗೆ ದಿನಾಂಕ ನಿಗಧಿಯಾಗಿತ್ತು, ಆದರೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಜಿಲ್ಲೆಗೆ ಭೇಟಿ ಬಳಿಕ ಜಂಟಿ ಸರ್ವೇ ಕಾರ್ಯದ ಸಂಪೂರ್ಣ ಚಿತ್ರಣ ಬದಲಾಗಿದೆ.

ಒಂದು ವಾರ ಮುದೂಡಿಕೆಸರ್ಕಾರದಲ್ಲಿ ತಮಗಿರುವ ಪ್ರಭಾವ ಬಳಸಿ ರಮೇಶ್ ಕುಮಾರ್ ತಡೆಯೊಡ್ಡಿರುವ ಸಾಧ್ಯತೆ ಹೆಚ್ಚಾಗಿದೆ ಅನ್ನೋ ಲೆಕ್ಕಾಚಾರಗಳು ಜಿಲ್ಲೆಯಲ್ಲಿ ಆರಂಭವಾಗಿದೆ. ಸದ್ಯ ಒಂದು ವಾರದ ಮಟ್ಟಿಗೆ ಜಂಟಿ ಸರ್ವೇ ಮುದೂಡಲಾಗಿದೆ, ಯಾವುದೆ ಪ್ರಭಾವಕ್ಕೂ ಒಳಗಾಗಲ್ಲ, ಸಣ್ಣ ರೈತರು ಸೇರಿದಂತೆ ಪ್ರಭಾವಿಗಳ ಒತ್ತುವರ ತೆರವುಗೊಳಿಸಲಾಗುವುದು ಅನ್ನೋದು ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ಮಾಹಿತಿ ನೀಡಿದರು.

Share this article