
ಚಿಂಚೋಳಿ ತಾಲೂಕಿನ ಚಂದನಕೇರಾ ಗ್ರಾಮದಲ್ಲಿ ಕಳೆದ 15 ದಿನಗಳಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮೋಟಾರ್ ಕೆಟ್ಟುಹೋಗಿ ತೀವ್ರ ಜಲಕ್ಷಾಮ ಎದುರಾಗಿದ್ದು ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಗ್ರಾಮ ಪಂಚಾಯತ್ ಕಚೇರಿಗೆ ಬೀಗ ಹಾಕಿ ಶನಿವಾರ ಭಾರಿ ಪ್ರತಿಭಟನೆ ನಡೆಸಿದರು.
ಸಭೆಯಲ್ಲಿ ಭಾಗವಹಿಸಿದ ಎಇಇ ಉಮೇಶ ರಾಠೋಡ್, ಚನ್ನೂರು ಗ್ರಾಮದ ಮುಲ್ಲಾಮಾರಿ ಜಲಾಶಯದಿಂದ ನೀರೆತ್ತುವ ಮೋಟಾರ್ ಕೆಟ್ಟುಹೋಗಿತ್ತು.ಹುಬ್ಬಳ್ಳಿಗೆ ಕಳುಹಿಸಿ ದುರಸ್ತಿ ಮಾಡಿಸಿ, ಮರಳಿ ಜೋಡಣೆ ಮಾಡಲಾಗಿದೆ. ಇಂದಿನಿಂದಲೇ ಗ್ರಾಮಕ್ಕೆ ನಿಯಮಿತವಾಗಿ ನೀರು ಪೂರೈಕೆಯಾಗಲಿದೆ ಎಂದು ಭರವಸೆ ನೀಡಿದರು. ಗ್ರಾಮಸ್ಥರಾದ ಹನುಮಂತ ಪೂಜಾರಿ ಗುರುಲಿಂಗ್ ಪಡಶೆಟ್ಟಿ, ತುಕಾರಾಂ ಬಸಂತಪುರ್, ಕಾಶಿನಾಥ್ ಪುಂಡಲೀಕ, ಸಿದ್ದು ಪಡಶೆಟ್ಟಿ ಚಂದ್ರಕಾಂತ್, ಮಸ್ತಾನ್ ಮಾರುತಿ ವಗ್ಗೆ ಇನ್ನಿತರ ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಡಾ. ಅವಿನಾಶ್ ಜಾಧವ ಅವರಿಗೆ ಸಂಪೂರ್ಣ ಮಾಹಿತಿ ನೀಡಿದರು.
ಶಾಸಕ ಡಾ.ಅವಿನಾಶ್ ಜಾಧವ್ ಮಾತನಾಡಿ ಚಂದನಕೇರಾ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಗ್ರಾಮ ಪಂಚಾಯತ್ ಪಿಡಿಒ ಮತ್ತು ಎಮ ಇಎಸ್ ಸಮಸ್ಯೆ ಬಗೆಹರಿಸಬೇಕಾಗಿತ್ತು. ಆದರೆ ಅವರು ಮಾಡಿದ ಬೇಜವಾಬ್ದಾರಿಯಿಂದ ಜನಪ್ರತಿನಿಧಿಗಳಿಗೆ ಕೆಟ್ಟ ಹೆಸರು ಬರುತ್ತಿದೆ ಇದರ ಬಗ್ಗೆ ಮೇಲಾಧಿಕಾರಿಗಳು ಗಮನಕ್ಕೆ ಕ್ರಮ ಜರುಗಿಸುವಂತೆ ಅಧಿಕಾರಿಗೆ ಸೂಚನೆ ನೀಡುತ್ತೇನೆ.ಗ್ರಾಮಸ್ಥರು ಯಾವುದೇ ಸಮಸ್ಯೆ ಇದ್ದರೂ ನನಗೆ ನೇರವಾಗಿ ತಿಳಿಸಬೇಕು. ನಿಮ್ಮ ಸಮಸ್ಯೆಗೆ ನಾನು ಸ್ಪಂದಿಸುತ್ತೇನೆ ಎಂದು ಸಭೆಯಲ್ಲಿ ತಿಳಿಸಿದರು.ಗ್ರಾಮ ಪಂಚಾಯತ್ ಕಾರ್ಯಾಲಯ ದೊಳಗೆ ಕುಳಿತಿದ್ದ ಅಧಿಕಾರಿಗಳು ರಟಕಲ್ ಪೊಲೀಸರ ರಕ್ಷಣೆಯೊಂದಿಗೆ ಪ್ರಜಾಸೇವೆ ಅಭಿಯಾನದಲ್ಲಿ ಭಾಗವಹಿಸಿದರು. ನಂತರ ಗ್ರಾಮದ ಸಾರ್ವಜನಿಕರ ಸಮಸ್ಯೆಗಳನ್ನು ಒಂದೊಂದಾಗಿ ಶಾಸಕರು ಆಲಿಸಿದರು. ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ, ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್ ಚೌವ್ಹಾಣ್, ಎಇಇ ಅಮೃತ್ ಪವಾರ್,ಎಇಇ ಉಮೇಶ್ ಜಾಧವ್ ಬಿಸಿಎಂ ಅಧಿಕಾರಿ ಅನುಸೂಯ, ತಾಲೂಕ್ ಆರೋಗ್ಯಾಧಿಕಾರಿ ಡಾ.ಸಂತೋಷ ರಾಠೋಡ್,ಡಾ.ಮಲ್ಲಿಕಾರ್ಜುನ ಗುತ್ತೇದಾರ್ ಇನ್ನಿತರ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು.