ಸ್ಥಗಿತಗೊಂಡ ನೀರಾವರಿ ಕಾಮಗಾರಿ ಪುನರಾರಂಭಿಸಲು ಪ್ರತಿಭಟನೆ

KannadaprabhaNewsNetwork |  
Published : Oct 28, 2025, 12:03 AM IST
ಸ್ಥಗಿತಗೊಂಡಿರುವ ನೀರಾವರಿ ಕಾಮಗಾರಿಯನ್ನು ಪುನರಾಂಭಿಸಲು ಆಗ್ರಹಿಸಿ ಸೋಮವಾರ ನಾಗೇನಹಳ್ಳಿ ಹಾಗೂ ಬೆರಟಿಕೆರೆ ನೀರು ತುಂಬಿಸುವ ಹೋರಾಟ ಸಮಿತಿ ವತಿಯಿಂದ ಚಿಕ್ಕಮಗಳೂರಿನ ಆಜಾದ್‌ ಪಾರ್ಕ್ ವೃತ್ತದಲ್ಲಿ ನಡೆದ ರೈತರ ಪ್ರತಿಭಟನೆಯಲ್ಲಿ ಕಲ್ಮರುಡಪ್ಪ ಅವರು ಮಾತನಾಡಿದರು. | Kannada Prabha

ಸಾರಾಂಶ

ಚಿಕ್ಕಮಗಳೂರು ಸ್ಥಗಿತಗೊಂಡಿರುವ ನೀರಾವರಿ ಕಾಮಗಾರಿಯನ್ನು ಪುನಾರಂಭಿಸಲು ಆಗ್ರಹಿಸಿ ಸೋಮವಾರ ನಾಗೇನಹಳ್ಳಿ ಹಾಗೂ ಬೆರಟಿಕೆರೆ ನೀರು ತುಂಬಿಸುವ ಹೋರಾಟ ಸಮಿತಿಯಿಂದ ನಗರದ ಆಜಾದ್‌ ಪಾರ್ಕ್ ವೃತ್ತದಲ್ಲಿ ರೈತ ಮುಖಂಡರು ಪ್ರತಿಭಟನೆ ನಡೆಸಿದರು.

- ನಾಗೇನಹಳ್ಳಿ ಹಾಗೂ ಬೆರಟಿಕೆರೆ ನೀರು ತುಂಬಿಸುವ ಕಾಮಗಾರಿ ಹೋರಾಟ ಸಮಿತಿಯಿಂದ ಪ್ರತಿಭಟನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸ್ಥಗಿತಗೊಂಡಿರುವ ನೀರಾವರಿ ಕಾಮಗಾರಿಯನ್ನು ಪುನಾರಂಭಿಸಲು ಆಗ್ರಹಿಸಿ ಸೋಮವಾರ ನಾಗೇನಹಳ್ಳಿ ಹಾಗೂ ಬೆರಟಿಕೆರೆ ನೀರು ತುಂಬಿಸುವ ಹೋರಾಟ ಸಮಿತಿಯಿಂದ ನಗರದ ಆಜಾದ್‌ ಪಾರ್ಕ್ ವೃತ್ತದಲ್ಲಿ ರೈತ ಮುಖಂಡರು ಪ್ರತಿಭಟನೆ ನಡೆಸಿದರು.ಈ ವೇಳೆ ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ ಮಾತನಾಡಿ, ಹಲವಾರು ವರ್ಷಗಳಿಂದ ಹುಲಿಕೆರೆ, ಬೆರಟಿಕೆರೆ ಹಾಗೂ ನಾಗೇನಹಳ್ಳಿ ಗ್ರಾಮದ ನೀರಿನ ಕಟ್ಟೆಗಳು ಬರಗಾಲಕ್ಕೆ ತುತ್ತಾಗಿದ್ದವು. ಇದನ್ನು ಮನಗಂಡ ಜಿಲ್ಲಾಡಳಿತ ಟ್ಯಾಂಕರ್ ಮೂಲಕ ಗ್ರಾಮಗಳಿಗೆ ಕುಡಿಯುವ ನೀರನ್ನು ಸದ್ಯದ ಮಟ್ಟಿಗೆ ಒದಗಿಸುತ್ತಿದೆ ಎಂದು ಹೇಳಿದರು.ಇದೇ ಗ್ರಾಮದ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ತಾತ್ಕಾಲಿಕವಾಗಿ ಲಭ್ಯವಾದರೆ. ಜಾನು ವಾರುಗಳು, ಪ್ರಾಣಿ ಪಕ್ಷಿಗಳಿಗೆ ಕುಡಿಯಲು ನೀರಿಲ್ಲದೇ ಪರಿತಪಿಸುವಂತಾಗಿದೆ. ಅಯ್ಯನಕೆರೆ ಕೋಡಿ ನೀರು ಕಳೆದ ಎರಡೂವರೆ ತಿಂಗಳಿನಿಂದ ಹರಿಯತ್ತಿದ್ದರೂ, ಸ್ಥಳೀಯ ರೈತರ ಕೃಷಿ ಚಟುವಟಿಕೆಗೆ ನೀಡದೇ ಸರ್ಕಾರ ವಂಚಿಸುತ್ತಿರುವ ಕಾರಣ ಗ್ರಾಮವೇ ಬರಗಾಲಕ್ಕೆ ತುತ್ತಾಗುತ್ತಿದೆ ಎಂದರು.ಸದಾ ಕಾಲ ಬರಗಾಲಕ್ಕೆ ತುತ್ತಾಗಿರುವ ಗ್ರಾಮಗಳಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಯೋಜನೆಯಾಗಿದ್ದು, ಯಾವುದೇ ನೀರಾವರಿ ಉದ್ದೇಶವಿರುವುದಿಲ್ಲ. ಈ ಯೋಜನೆ ಅಯ್ಯನಕೆರೆ ಕೋಡಿ ಬಿದ್ದು ಹರಿದ ಸ್ವಲ್ಪ ಪ್ರಮಾಣದ ನೀರನ್ನು ಬಳಸುವ ಯೋಜನೆಯಾಗಿದ್ದು ಕೆರೆಗಳು ತುಂಬಿದ ನಂತರ ಪುನಃ ವೇದಾಹಳ್ಳಕ್ಕೆ ಹರಿಯುವುದರಿಂದ ಯಾರಿಗೂ ಸಮಸ್ಯೆಯಿಲ್ಲ ಎಂದು ತಿಳಿಸಿದರು.ಹುಲಿಕೆರೆ, ಬೆರಟಿಕೆರೆ ಮತ್ತು ನಾಗೇನಹಳ್ಳಿ ಕಟ್ಟೆಗೆ ನೀರು ತುಂಬಿಸುವ ಯೋಜನೆಗೆ ಸರ್ಕಾರದಿಂದ ಅನುಮೋದನೆ ದೊರೆತಿದೆ. ಅಂದಾಜು ₹9.90 ಕೋಟಿ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆ ಪೂರ್ಣ ಗೊಂಡಿದೆ. ಆದರೆ, ಪ್ರಗತಿಯಲ್ಲಿದ್ದ ಕಾಮಗಾರಿ ಕೆಲವರ ತಪ್ಪು ಮಾಹಿತಿಯಿಂದ ಸ್ಥಗಿತ ಗೊಂಡಿರು ವುದರಿಂದ ರೈತರಿಗೆ ಬಹಳಷ್ಟು ಸಮಸ್ಯೆ ಎದುರಾಗಿದೆ ಎಂದು ತಿಳಿಸಿದರು.ರೈತ ಸಂಘದ ಮಾಜಿ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಮಾತನಾಡಿ, ಜಿಲ್ಲೆ ಪಂಚನದಿಗಳ ಉಗಮ ಸ್ಥಾನ ವಾಗಿದೆ. ನೂರಾರು ಟಿಎಂಸಿ ನೀರು ವಿವಿಧ ಜಿಲ್ಲೆ ಸೇರಿದಂತೆ ಆಂಧ್ರಪ್ರದೇಶಕ್ಕೂ ಹರಿಯುತ್ತಿದೆ. ಆದರೆ, ಬಯಲುಸೀಮೆ ರೈತರಿಗೆ ಅಲ್ಪಪ್ರಮಾಣದ ನೀರು ಒದಗಿಸದೇ ಸರ್ಕಾರ ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಹೇಳಿದರು.ಕೇವಲ ಮಳೆಯಾಶ್ರಯದಲ್ಲಿ ಬೆಳೆ ಬೆಳೆಯುತ್ತಿದ್ದ ರೈತರಿಗೆ ನೀರಿನ ಬೆಲೆ ಗೊತ್ತಾಗಿದೆ. ಪ್ರಸ್ತುತ ಆಧುನಿಕ ಬೇಸಾಯಕ್ಕೆ ನೀರಿನ ಬಳಕೆ ಅತ್ಯವಶ್ಯವಾಗಿದ್ದು ಆ ನಿಟ್ಟಿನಲ್ಲಿ ಸರ್ಕಾರ ಕಟ್ಟುನಿಟ್ಟಿನ ಕಾನೂನು ರೂಪಿಸಿ ಸ್ಥಳೀಯರಿಗೆ ನೀರೋದಗಿಸಲು ಮೊದಲ ಆದ್ಯತೆ ನೀಡಬೇಕು. ಅಯ್ಯನಕೆರೆ ಬೊಗಸೆ ನೀರಿಗಷ್ಟೆ ಆಸೆ ಪಟ್ಟಿರುವ ರೈತರಿಗೆ ಜನಪ್ರತಿಧಿಗಳು ಜವಾಬ್ದಾರಿ ಹೊತ್ತು ನ್ಯಾಯ ಒದಗಿಸಬೇಕು ಎಂದು ಹೇಳಿದರು. ಕೆಪಿಸಿಸಿ ವಕ್ತಾರ ರವೀಶ್ ಕ್ಯಾತನಬೀಡು ಮಾತನಾಡಿ, ರೈತರು ಸಂಘಟಿತರಾಗಿ ಹೋರಾಟ ರೂಪಿಸಿ ದಾಗ ಮಾತ್ರ ನೀರಾವರಿ ಯೋಜನೆ ಪೂರ್ಣಗೊಳ್ಳಲು ಸಾಧ್ಯ. ಹೀಗಾಗಿ ಜನಪ್ರತಿನಿಧಿಗಳ ಸುಳ್ಳು ಮಾತಿಗೆ ಹಾಗೂ ಹೊಗಳಿಕೆಗೆ ಮಾರು ಹೋಗದಿರಿ. ಒಟ್ಟಿನಲ್ಲಿ ಗ್ರಾಮದ ಕೆರೆಗಳು ನೀರು ತುಂಬಿಸಿ ಜನ ಜಾನುವಾರು, ಪ್ರಾಣಿ ಪಕ್ಷಿಗಳಿಗೆ ತಲುಪುವಂತಾಗುವುದು ಗುರಿಯಾಗಬೇಕು ಎಂದರು.ರೈತ ಸಂಘದ ಜಿಲ್ಲಾಧ್ಯಕ್ಷ ಮಹೇಶ್ ಮಾತನಾಡಿ, ಬಯಲುಸೀಮೆಯಿಂದ ಬೆಂಗಳೂರಿನವರೆಗೆ ಹರಿಯುತ್ತಿರುವ ನೀರನ್ನು ಸರ್ಕಾರ ಸ್ಥಳೀಯರಿಗೆ ಬೊಗಸೆಯಷ್ಟು ಉಳಿಸಿಕೊಡಬೇಕು. ಒಂದು ತಿಂಗಳಿನ ಗಡುವಿನೊಳಗೆ ನೀರಾವರಿ ಯೋಜನೆ ಪುನರಾಂಭಿಸದಿದ್ದರೆ ಶಾಸಕರ ಹಾಗೂ ಜಿಲ್ಲಾಡಳಿತ ಕಚೇರಿ ಎದುರು ಜಾನುವಾರು ಸಮೇತ ರೈತರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಇದೇ ವೇಳೆ ಪ್ರತಿಭಟನಾ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಹಾಗೂ ತಹಸೀಲ್ದಾರ್ ರೇಷ್ಮಾ ಶೆಟ್ಟಿ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿ, ಮನವಿ ಸ್ವೀಕರಿಸಿದರು. ಪ್ರತಿಭಟನೆ ಯಲ್ಲಿ ರೈತ ಮುಖಂಡರಾದ ವಿಜಯ್‌ಕುಮಾರ್, ರುದ್ರಮೂರ್ತಿ, ಮೋಹನ್‌ಕುಮಾರ್, ಅಣ್ಣಾನಾಯ್ಕ್, ಉಮೇಶ್, ಸಚಿನ್‌ ಎತ್ತಿನಮನೆ, ಚಂದ್ರು ಹುಲಿಕೆರೆ, ಮುಳ್ಳಪ್ಪ, ಪುಷ್ಪರಾಜ್ ಪಾಲ್ಗೊಂಡಿದ್ದರು. 27 ಕೆಸಿಕೆಎಂ 1ಸ್ಥಗಿತಗೊಂಡಿರುವ ನೀರಾವರಿ ಕಾಮಗಾರಿ ಪುನರಾಂಭಿಸಲು ಆಗ್ರಹಿಸಿ ಸೋಮವಾರ ನಾಗೇನಹಳ್ಳಿ ಹಾಗೂ ಬೆರಟಿಕೆರೆ ನೀರು ತುಂಬಿಸುವ ಹೋರಾಟ ಸಮಿತಿಯಿಂದ ಚಿಕ್ಕಮಗಳೂರಿನ ಆಜಾದ್‌ ಪಾರ್ಕ್ ವೃತ್ತದಲ್ಲಿ ನಡೆದ ರೈತರ ಪ್ರತಿಭಟನೆಯಲ್ಲಿ ಕಲ್ಮರುಡಪ್ಪ ಮಾತನಾಡಿದರು.

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು