ಮಾರಿಕುಪ್ಪಂ ರೈಲು ಪುನಾಹ ಆರಂಭಿಸಲು ಪ್ರತಿಭಟನೆ

KannadaprabhaNewsNetwork |  
Published : Jan 21, 2026, 01:15 AM IST
20ಕೆಬಿಪಿಟಿ.1.ಬಂಗಾರಪೇಟೆ ರೈಲ್ವೆ ನಿಲ್ದಾಣ ಎದುರು ಭಾರತ ಕಮ್ಯೂನಿಸ್ಟ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. | Kannada Prabha

ಸಾರಾಂಶ

ಕೆಜಿಎಫ್, ಬಂಗಾರಪೇಟೆ, ಮಾಲೂರು ತಾಲೂಕುಗಳಿಂದ ಪ್ರತಿದಿನ 20 ಸಾವಿರಕ್ಕೂ ಹೆಚ್ಚು ಜನರು ದಿನನಿತ್ಯ ಕೆಲಸಕ್ಕಾಗಿ ಬೆಂಗಳೂರಿಗೆ ಪ್ರಯಾಣಿಸುತ್ತಾರೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಕೆಎಸ್‌ಆರ್ ಬೆಂಗಳೂರು ರೈಲ್ವೆ ನಿಲ್ದಾಣದಿಂದ ಬಂಗಾರಪೇಟೆಗೆ ಮಾರ್ಗವಾಗಿ ಮಾರಿಕುಪ್ಪಂಗೆ ಹೋಗುವ ರೈಲು ಸಂಖ್ಯೆ 66532 ಮತ್ತೆ ಚಾಲ್ತಿಗೊಳಿಸಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್‌ವಾದಿ) ಕೆಜಿಎಫ್ ಮತ್ತು ಬಂಗಾರಪೇಟೆ ತಾಲೂಕು ಸಮಿತಿಗಳು ಒತ್ತಾಯಿಸಿ ರೈಲ್ವೆ ನಿಲ್ದಾಣದ ಮುಂದೆ ಪ್ರತಿಭಟನೆ ಮಾಡಿದರು.ಈ ವೇಳೆ ಜಿಲ್ಲಾ ಸಮಿತಿ ಸದಸ್ಯ ಪಿ.ಶ್ರೀನಿವಾಸ್ ಅವರು ಮಾತನಾಡಿ, ಕೆಜಿಎಫ್, ಬಂಗಾರಪೇಟೆ, ಮಾಲೂರು ತಾಲೂಕುಗಳಿಂದ ಪ್ರತಿದಿನ 20 ಸಾವಿರಕ್ಕೂ ಹೆಚ್ಚು ಜನರು ದಿನನಿತ್ಯ ಕೆಲಸಕ್ಕಾಗಿ ಬೆಂಗಳೂರಿಗೆ ಪ್ರಯಾಣಿಸುತ್ತಾರೆ. ಈ ನಿಲ್ದಾಣಗಳಿಂದ ಬೆಂಗಳೂರಿಗೆ ಆಗಾಗ್ಗೆ ಪ್ರಯಾಣಿಸುವ ನೂರಾರು ವಿವಿಧ ವರ್ಗದ ಜನರಿದ್ದಾರೆ. ಬಹುತೇಕ ಜನರಿಗೆ ರೈಲುಗಳು ಏಕೈಕ ಸಾರಿಗೆ ಸಾಧನವಾಗಿದೆ.

ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಎ.ಆರ್.ಬಾಬು ಮಾತನಾಡಿ, ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣದಿಂದ ಈ ರೈಲು ಹೊರಡುವ ಸಮಯವನ್ನು ಮಧ್ಯಾಹ್ನ 2.55ಕ್ಕೆ ನಿಗಧಿಪಡಿಸಲು ಮುಖ್ಯ ಕಾರಣವೇನೆಂದರೆ, ಎಚ್‌ಎಎಲ್, ಬಿಇಎಂಎಲ್ ಮುಂತಾದ ಕಾರ್ಖಾನೆಗಳಲ್ಲಿ ಮೊದಲ ಪಾಳಿಯಲ್ಲಿ ಕೆಲಸಕ್ಕಾಗಿ ಬೆಂಗಳೂರಿನ ಕಡೆಗೆ ಪ್ರಯಾಣಿಸುವ ಸಾವಿರಾರು ಜನರು ಕೆಲಸ ಮುಗಿಸಿ ಮಾರಿಕುಪ್ಪಂ ಕಡೆಗೆ ಹಿಂತಿರುಗುವಾಗ ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣ, ಕೃಷ್ಣರಾಜಪುರಂ, ವೈಟ್‌ಫೀಲ್ಡ್ನಲ್ಲಿ ಈ ರೈಲನ್ನು ಹತ್ತಲು ಸಾಧ್ಯವಾಗುವಂತೆ ಮಾಡುವುದು, ಈ ರೈಲಿನ ಪ್ರಾರಂಭದ ನಿಲ್ದಾಣವನ್ನು ವೈಟ್‌ಫೀಲ್ಡ್ಗೆ ಬದಲಾಯಿಸಲಾಯಿತು. ನಾವು ರೈಲ್ವೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಮೂಲ ಮತ್ತು ನಿರ್ಗಮನ ಸಮಯವನ್ನು ಪುನಃಸ್ಥಾಪಿಸಲಾಗುವುದು ಎಂದು ಅವರು ನಮಗೆ ಭರವಸೆ ನೀಡಿದರು. ಆದರೆ ಇಲ್ಲಿಯವರೆಗೆ ಈ ಭರವಸೆ ಈಡೇರಿರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಟಿ.ಅಪ್ಪಯ್ಯಣ್ಣ, ಎಸ್.ಡಿ.ಆನಂದನ್, ಎ.ಪಿಚ್ಚಕಣ್ಣು, ಸಿ.ಆರ್.ಮೂರ್ತಿ, ತಿರುಪತಿ, ಪಿ.ಆನಂದ್‌ರಾಜ್, ನಿರೇಶ್‌ಬಾಬು, ವಿಜಯನ್, ಎ.ಸಿ.ವೇಲಾಯುದನ್, ಲಿಯೋರಾಜ, ಶಾಂತ್‌ಕುಮಾರ್, ನಿಕ್ಸನ್ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮರಳು ಮಾಫಿಯಾದಿಂದ ಶಾಸಕಿ ಕರೆಮ್ಮಗೆ ಬೆದರಿಕೆ
ಉಡುಪಿಯ ಕೃಷ್ಣಮಠದಲ್ಲಿ ಇನ್ನು ಭಕ್ತರಿಗೆ ಕಟ್ಟುನಿಟ್ಟಿನ ನಿಯಮ ಜಾರಿ