- ಕುಡಿಯುವ ನೀರು ಪೂರೈಕೆಗೆ ತೊಂದರೆ ಆಗದಿರಲಿ: ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಮನೂರು ಟಿ.ಬಸವರಾಜ - - -
ಜಿಲ್ಲೆಯ ಬರ ಪರಿಸ್ಥಿತಿ, ಕುಡಿಯುವ ನೀರಿನ ಅಭಾವ, ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆ ಹಿನ್ನೆಲೆಯಲ್ಲಿ ಭದ್ರಾ ಡ್ಯಾಂನಿಂದ ನಾಲೆಗಳಿಗೆ ಬಿಟ್ಟ ನೀರು ಸದ್ಬಳಕೆ ಆಗಬೇಕಿದ್ದು, ಬೆಸ್ಕಾಂ ಅಧಿಕಾರಿಗಳು ಲಭ್ಯ ಸಂಪನ್ಮೂಲ ಬಳಸಿ, ರೈತರ ಬೆಳೆಗಳಿಗೆ ಕನಿಷ್ಠ 6 ತಾಸು ಗುಣಮಟ್ಟದ ವಿದ್ಯುತ್ ಪೂರೈಸಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಮನೂರು ಟಿ.ಬಸವರಾಜ ಸೂಚಿಸಿದರು.
ನಗರದ ಜಿ.ಪಂ. ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರೈತರು ಬೆಳೆಗಳಿಗೆ ನೀರೊದಗಿಸಲು ಅನುಕೂಲ ಆಗುವಂತೆ ನಿರಂತರ 6 ಗಂಟೆಗಳ ಕಾಲ ಸಮರ್ಪಕ ವಿದ್ಯುತ್ ಪೂರೈಸಲು ಹಾಗೂ ಕುಡಿಯುವ ನೀರು ಪೂರೈಸಲು ಬೆಸ್ಕಾಂ ಅಧಿಕಾರಿಗಳು ಗಮನಹರಿಸಲಿ ಎಂದರು.ದಾವಣಗೆರೆ ದಕ್ಷಿಣ, ಮಾಯಕೊಂಡ, ಚನ್ನಗಿರಿ ಸೇರಿದಂತೆ ಜಿಲ್ಲೆಯ ಅನೇಕ ಕಡೆ ಅಂತರ್ಜಲಮಟ್ಟ ಕುಸಿದಿದೆ. ಕೊಳವೆಬಾವಿ ಬತ್ತಿ ಹೋಗುತ್ತಿವೆ. ನಾಲೆಯಲ್ಲಿ ನೀರು ಹರಿಯುತ್ತಿರುವುದಿಂದ ಸುತ್ತಲಿನ ಕೊಳವೆ ಬಾವಿ ಮರು ಪೂರ್ಣಗೊಳ್ಳುತ್ತಿವೆ. ಗ್ರಾಮೀಣ ಭಾಗದಲ್ಲಿ ನೀರಿನ ಅಭಾವ ತಪ್ಪಿಸಲು ಗಮನ ಹರಿಸಬೇಕು. ಕುಡಿಯುವ ನೀರಿನ ಕೊಳವೆ ಬಾವಿ ಹಾಗೂ ಸಾರ್ವಜನಿಕ ನೀರು ಪೂರೈಕೆಗೆ ಅಡೆತಡೆ ಇಲ್ಲದಂತೆ ವಿದ್ಯುತ್ ಪೂರೈಸಿ ಎಂದು ಅವರು ಹೇಳಿದರು.
ಜಿಪಂ ಸಿಇಒ ಸಾಹಿತ್ಯ ಎಂ.ಆಲದಕಟ್ಟಿ ಮಾತನಾಡಿ, ಚನ್ನಗಿರಿಯಲ್ಲಿ ಸಾರ್ವಜನಿಕರ ಅನುಕೂಲಕ್ಕೆ ಸುಸಜ್ಜಿತವಾಗಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಅಗತ್ಯ ಜಮೀನನ್ನು ನೇರ ಖರೀದಿ ಕರಾರು ವಿಧಾನದ ಮೂಲಕ ಅತ್ಯಂತ ಕಡಿಮೆ ಅವಧಿಯಲ್ಲಿ ವಶಪಡಿಸಿಕೊಳ್ಳಲು ಕ್ರಮ ವಹಿಸಬೇಕು. ಬಸ್ ನಿಲ್ದಾಣವಿಲ್ಲದೇ ಖಾಸಗಿ ಬಸ್ ನಿಲ್ದಾಣದ ಬಳಿಯೇ ಸರ್ಕಾರಿ ಬಸ್ಸು ಸಂಚರಿಸುತ್ತಿರುವುದರಿಂದ ಜನರಿಗೆ, ಚಾಲಕ, ನಿರ್ವಾಹಕರಿಗೆ ಗೊಂದಲವಾಗುತ್ತಿದೆ. ಸಮಸ್ಯೆ ಪರಿಹರಿಸಲು ಸಿಬ್ಬಂದಿ, ಪೋಲೀಸ್ ಸಿಬ್ಬಂದಿ ನೇಮಿಸಿ ಸಂಚಾರ ಸುಗಮ ಸೇರಿದಂತೆ ಶಾಶ್ವತ ಬಸ್ ನಿಲ್ದಾಣ ನಿರ್ಮಾಣದ ಜಮೀನು ಸ್ವಾಧೀನಕ್ಕೆ ಅಗತ್ಯ ಕ್ರಮವಹಿಸಿ ಎಂದರು.
ಕೆಎಸ್‌ಆರ್‌ಟಿಸಿ ಮತ್ತು ಇಲಾಖೆ ಅಧಿಕಾರಿಗಳು ಜಮೀನಿನ ಮಾಲೀಕರನ್ನು ವೈಯಕ್ತಿಕವಾಗಿ ಭೇಟಿಯಾಗಿ, ನೇರ ಖರೀದಿ ಅನುಕೂಲಗಳ ಬಗ್ಗೆ ಮನವರಿಕೆ ಮಾಡಿ ಒಪ್ಪಿಗೆ ಪಡೆಯಿರಿ. ಈ ಪ್ರಕ್ರಿಯೆ ಬಗ್ಗೆ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳೊಂದಿಗೆ ಚರ್ಚಿಸಿ, ಕಡತವನ್ನು ಶೀಘ್ರ ವಿಲೇವಾರಿ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ತಿಳಿಸಿದರು.
ಸಮಿತಿ ಉಪಾಧ್ಯಕ್ಷರಾದ ಮಂಜುನಾಥ, ನಂಜಾನಾಯ್ಕ, ರಾಜೇಶ್ವರಿ, ಅನೀಶ್ ಪಾಷ, ಸದಸ್ಯರಾದ ಡೋಲಿ ಚಂದ್ರು, ಶಶಿಕಲಾ, ನಾಗರಾಜ್, ಎಸ್.ಎಸ್.ಗಿರೀಶ, ಲಿಯಾಕತ್ ಅಲಿ, ಉಮೇಶ್, ಷಂಷೀರ್ ಅಹ್ಮದ್, ಶಿವರಾಮ ನಾಯಕ್, ಜಿಪಂ ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್, ಸಿಪಿಒ ಮಲ್ಲಾ ನಾಯಕ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
(ಕೋಟ್‌ಗಳು)
- ಡೋಲಿ ಚಂದ್ರು, ಸದಸ್ಯ, ಜಿಲ್ಲಾ ಗ್ಯಾರಂಟಿ ಸಮಿತಿ.
ಜಿಲ್ಲೆಯಲ್ಲಿ ಜುಲೈ 2023ರಿಂದ ಡಿಸೆಂಬರ್ 2024ರ ಅಂತ್ಯದವರೆಗೆ ಒಟ್ಟು 346.33 ಕೋಟಿ ಹಣ ಡಿಬಿಟಿ ಮುಖಾಂತರ 1242812 ಫಲಾನುಭವಿ ಖಾತೆಗೆ ವರ್ಗಾಯಿಸಲಾಗಿದೆ. ಫೆಬ್ರವರಿ 2025ರಿಂದ ಸೆಪ್ಟೆಂಬರ್ 2026ರ ಅಂತ್ಯದ ವರೆಗೆ ಪ್ರತಿ ಫಲಾನುಭವಿಗೆ ಹೆಚ್ಚುವರಿ 5 ಕೆಜಿ ಅಕ್ಕಿ ವಿತರಿಸಿದ್ದು, ಸೆಪ್ಟೆಂಬರ್ 2026ರ ಅಂತ್ಯಕ್ಕೆ ಒಟ್ಟು 1139749 ಫಲಾನುಭವಿಗೆ 1193500 ಕ್ವಿಂಟಲ್ ಅಕ್ಕಿ ಉಚಿತವಾಗಿ ವಿತರಿಸಿದೆ. ಜಿಲ್ಲೆಯಲ್ಲಿ ಶೇ.52ರಷ್ಟು ಇ-ಕೆವೈಸಿ ಪೂರ್ಣಗೊಂಡಿದ್ದು, ರಾಜ್ಯದಲ್ಲಿ 7ನೇ ಸ್ಥಾನದಲ್ಲಿದ್ದೇವೆ. ನಿಗದಿತ ಅವಧಿಯಲ್ಲಿ ಇ-ಕೆವೈಸಿ ಕಾರ್ಯ ಪೂರ್ಣಗೊಳಿಸಲಾಗುವುದು.
- ಮಧುಸೂದನ್, ಜಂಟಿ ನಿರ್ದೇಶಕ, ಆಹಾರ ಇಲಾಖೆ.- - -
ಜಿಲ್ಲೆಯಲ್ಲಿ ಆಗಸ್ಟ್ 2023ರಿಂದ ಜೂನ್ 2026 ರವರೆಗೆ 352521 ಫಲಾನುಭವಿಗೆ 2264.33 ಕೋಟಿ ರು. ಪಾವತಿಸಿದೆ. ಯಾವುದೇ ಒಬ್ಬ ವ್ಯಕ್ತಿಗೆ 2 ಬಾರಿ ಹಣ ಸಂದಾಯವಾಗಿಲ್ಲ.-ರಾಜಾನಾಯ್ಕ, ಉಪ ನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ.
- - -ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಲ್ಲಿ ಆಗಸ್ಟ್ 2026ರಲ್ಲಿ ಒಟ್ಟು 512933 ಫಲಾನುಭವಿಗೆ ₹4336.61 ಕೋಟಿ ಮೊತ್ತವನ್ನು ಹೊಂದಾಣಿಕೆ ಮಾಡಲಾಗಿದೆ. ಮನೆ ಮನೆ ಭೇಟಿ ಕಾರ್ಯ ಶೇ.92ರಷ್ಟು ಪೂರ್ಣಗೊಂಡಿದ್ದು, ಇನ್ನೂ 26000 ಮನೆ ಬಾಕಿ ಇವೆ.
- ತಿಪ್ಪೇಸ್ವಾಮಿ, ಇಇ, ಬೆಸ್ಕಾಂ,- - -
ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ 16.44 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ಇದರಿಂದ 490.27 ಕೋಟಿ ರು. ಪ್ರಯಾಣ ದರ ಆಗಿದೆ.- ಗಿರೀಶ, ವಿಭಾಗೀಯ ನಿಯಂತ್ರಕ, ಕೆಎಸ್ಸಾರ್ಟಿಸಿ,
- - -ಯುವನಿಧಿ ಯೋಜನೆಯಡಿ ಜಿಲ್ಲೆಯ 14532 ಪದವಿ ಫಲಾನುಭವಿಗೆ ತಲಾ ₹3 ಸಾವಿರದಂತೆ ಹಾಗೂ 347 ಡಿಪ್ಲೋಮಾ ಫಲಾನುಭವಿಗೆ ತಲಾ ₹1500 ರಂತೆ ₹42.70 ಲಕ್ಷ ಹೀಗೆ ಒಟ್ಟು 14879 ಫಲಾನುಭವಿಗಳಿಗೆ ₹48.27 ಕೋಟಿ ಪಾವತಿಸಲಾಗಿದೆ.
- ರವೀಂದ್ರ, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ.- - -
-22ಕೆಡಿವಿಜಿ5, 6: ದಾವಣಗೆರೆ ಜಿಪಂ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಮನೂರು ಟಿ.ಬಸವರಾಜ ಅಧ್ಯಕ್ಷತೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ ನಡೆಯಿತು.-22ಕೆಡಿವಿಜಿ7: ಸಾಹಿತ್ಯ ಎಂ.ಆಲದಕಟ್ಟಿ, ಸಿಇಒ, ಜಿಪಂ.