ಕನ್ನಡಪ್ರಭ ವಾರ್ತೆ ಆಲೂರು
ಆಲೂರು, ಸಕಲೇಶಪುರ ಕ್ಷೇತ್ರದಾದ್ಯಂತ ಕಾಡಾನೆ ದಾಳಿಯಿಂದ ಸಾವು ನೋವುಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಈ ಕುರಿತು ಹಲವು ಬಾರಿ ಸರ್ಕಾರದ ಗಮನಕ್ಕೆ ತಂದಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಆದುದರಿಂದ ಮಂಗಳವಾರ ಅರಣ್ಯ ಸಚಿವರಾದ ಈಶ್ವರ್ ಕಂಡ್ರೆ ಅವರನ್ನು ಭೇಟಿ ಮಾಡಿ ಕಾಡಾನೆಗಳ ಸ್ಥಳಾಂತರ, ಕಾಡಾನೆ ಮಾನವ ಸಂಘರ್ಷವನ್ನು ತಡೆಗಟ್ಟಲು ಕ್ರಮಗಳನ್ನು ಕುರಿತು ಚರ್ಚಿಸಿದ್ದು ಸ್ಥಳೀಯ ರೈತರು, ಬೆಳೆಗಾರರು ಹಾಗೂ ಸಾರ್ವಜನಿಕರೊಂದಿಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆಯನ್ನು ಆಯೋಜಿಸುವಂತೆ ಮನವಿ ಸಲ್ಲಿಸಿರುವುದಾಗಿ ಅವರು ತಿಳಿಸಿದರು.