ಪತ್ರಕರ್ತರಿಗೆ ನಿವೇಶನ, ಚಿಕಿತ್ಸೆ ಸೌಲಭ್ಯ ಕಲ್ಪಿಸಿ: ನಾಗರಾಜ ಬಡದಾಳ

KannadaprabhaNewsNetwork |  
Published : Sep 01, 2024, 01:49 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

17 ವರ್ಷಗಳ ಹಿಂದೆ ಸ್ವಾಭಿಮಾನಿ ಪತ್ರಕರ್ತರು ಸೇರಿ ಕಟ್ಟಿದ ದಾವಣಗೆರೆ ಜಿಲ್ಲಾ ವರದಿಗಾರರ ಕೂಟ ಇದುವರೆಗೂ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಪತ್ರಕರ್ತರು, ಕುಟುಂಬ ವರ್ಗಕ್ಕಾಗಿ ಸಾಕಷ್ಟು ಚಟುವಟಿಕೆ ನಡೆಸಿಕೊಂಡು ಬಂದಿದೆ ಎಂದು ವರದಿಗಾರರ ಕೂಟ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕನ್ನಡಪ್ರಭ ಹಿರಿಯ ಪ್ರಧಾನ ವರದಿಗಾರ ನಾಗರಾಜ ಎಸ್. ಬಡದಾಳ್ ಹೇಳಿದ್ದಾರೆ.

- ಕಾಂಗ್ರೆಸ್, ಬಿಜೆಪಿ ಆಳ್ವಿಕೆಯಲ್ಲಿ ಸಚಿವರು, ಸಂಸದರು, ಶಾಸಕರಿಂದ ಉತ್ತಮ ಸ್ಪಂದನೆ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

17 ವರ್ಷಗಳ ಹಿಂದೆ ಸ್ವಾಭಿಮಾನಿ ಪತ್ರಕರ್ತರು ಸೇರಿ ಕಟ್ಟಿದ ದಾವಣಗೆರೆ ಜಿಲ್ಲಾ ವರದಿಗಾರರ ಕೂಟ ಇದುವರೆಗೂ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಪತ್ರಕರ್ತರು, ಕುಟುಂಬ ವರ್ಗಕ್ಕಾಗಿ ಸಾಕಷ್ಟು ಚಟುವಟಿಕೆ ನಡೆಸಿಕೊಂಡು ಬಂದಿದೆ ಎಂದು ವರದಿಗಾರರ ಕೂಟ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕನ್ನಡಪ್ರಭ ಹಿರಿಯ ಪ್ರಧಾನ ವರದಿಗಾರ ನಾಗರಾಜ ಎಸ್. ಬಡದಾಳ್ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಸುಮಾರು 44ಕ್ಕೂ ಹೆಚ್ಚು ಪತ್ರಕರ್ತರಿಗೆ ನಿವೇಶನ ಸೌಲಭ್ಯ ಸಿಕ್ಕಿದೆ. ಬಿಜೆಪಿ-ಕಾಂಗ್ರೆಸ್ ಪಕ್ಷಗಳ ಸರ್ಕಾರಗಳ ಅವಧಿಯಲ್ಲಿ ದೊರೆತಿದ್ದು, ಪತ್ರಕರ್ತರ ಸುಖ, ದುಃಖಗಳಿಗೆ ಹಿಂದಿನ ಹಾಗೂ ಈಗಿನ ಎಲ್ಲ ಸಚಿವರು, ಸಂಸದರು, ಶಾಸಕರು ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿದರು.

ಪತ್ರಕರ್ತರಿಗೆ ಸಮಾಜದಲ್ಲಿ ಗೌರವವಿದ್ದರೂ, ಸಂಕಷ್ಟದಲ್ಲಿರುವ ಪತ್ರಕರ್ತರು ಸಹ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಬೇರೆಯವರ ಸಮಸ್ಯೆಗಳಿಗೆ ಸದಾ ಧ್ವನಿಯಾಗುವ ಪತ್ರಕರ್ತರ ಗೋಳು ಕೇಳುವವರು ಇಲ್ಲದಂತಾಗಿದೆ. ಜೀವನ ಭದ್ರತೆ ಇಲ್ಲದ ಪತ್ರಿಕಾ ವೃತ್ತಿಯು ನೀರ ಮೇಲಿನ ಗುಳ್ಳೆ ಇದ್ದಂತೆ. ಇಂತಹ ಸಂದರ್ಭದಲ್ಲಿ ಅನಾರೋಗ್ಯಪೀಡಿತ ಪತ್ರಕರ್ತರ ಚಿಕಿತ್ಸೆಗೆ ನೆರವಿನ ಅಗತ್ಯವಿದೆ. ಈಗಲೂ ನಿವೇಶನ ಪಡೆಯದ ಸಾಕಷ್ಟು ಜನ ಪತ್ರಕರ್ತರಿದ್ದಾರೆ. ಅಂಥವರಿಗೆ ಆದ್ಯತೆ ಮೇರೆಗೆ ರಿಯಾಯಿತಿ ದರದಲ್ಲಿ ನಿವೇಶನ ನೀಡಬೇಕು. ವರದಿಗಾರರ ಕೂಟಕ್ಕೆ ಸ್ವಂತ ನಿವೇಶನ ಒದಗಿಸುವಂತೆ ಸಚಿವರು, ಸಂಸದರು, ಶಾಸಕರು, ದೂಡಾ ಅಧ್ಯಕ್ಷರು, ಮೇಯರ್‌ ಅವರಿಗೆ ಮನವಿ ಮಾಡಿದರು.

ಕೂಟದ ಗೌರವಾಧ್ಯಕ್ಷ ಬಿ.ಎನ್.ಮಲ್ಲೇಶ್ ಮಾತನಾಡಿ, ವರದಿಗಾರರ ಕೂಟ ಸದಾ ಪತ್ರಕರ್ತರ ಧ್ವನಿಯಾಗಿದೆ. ಯುವಕರು, ಹಿರಿಯರು ಹೀಗೆ ಎಲ್ಲ ವಯೋಮಾನದವರನ್ನು ಒಳಗೊಂಡ ಕೂಟವು ಇದೇ ಮೊದಲ ಬಾರಿಗೆ ಹಿರಿಯ ಪತ್ರಕರ್ತರನ್ನು ಗೌರವಿಸುವ ಕೆಲಸ ಮಾಡುತ್ತಿದೆ. ಇಡೀ ವರದಿಗಾರರ ಕೂಟದ ಹಿನ್ನೆಲೆ, ಸದಸ್ಯರ ಬಗ್ಗೆ ಸಂಪೂರ್ಣ ಮಾಹಿತಿ, ಕೂಟದ ಚಟುವಟಿಕೆಗಳನ್ನು ಕಟ್ಟಿ ಕೊಡುವ ಕೆಲಸವನ್ನು ನೂತನ ವೆಬ್ ಸೈಟ್ ಮೂಲಕ ಮಾಡುತ್ತಿದೆ ಎಂದು ತಿಳಿಸಿದರು.

- - - ಟಾಪ್‌ ಕೋಟ್‌ ಇನ್ನೊಂದು ವಾರದಲ್ಲಿ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಿಎ ನಿವೇಶನಕ್ಕೆ ಅರ್ಜಿ ಆಹ್ವಾನಿಸಲಾಗುವುದು. ವರದಿಗಾರರ ಕೂಟದಿಂದ ಅರ್ಜಿ ಸಲ್ಲಿಸಿದರೆ, ಚರ್ಚಿಸಿ ನಿವೇಶನ ಒದಗಿಸಲಾಗುವುದು

- ದಿನೇಶ ಕೆ.ಶೆಟ್ಟಿ, ಅಧ್ಯಕ್ಷ, ದೂಡಾ

- - - (-ಫೋಟೋ:)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!