ಜಾತಿಗಣತಿದಾರರಿಗೆ ಸರಿಯಾದ ಮಾಹಿತಿ ನೀಡಿ

KannadaprabhaNewsNetwork |  
Published : May 07, 2025, 12:48 AM IST
5ಎಚ್ಎಸ್ಎನ್10 : ಮೀಸಲಾತಿ ವರ್ಗೀಕರಣಕ್ಕೆ ಬರುವ ಗಣತಿದಾರರಿಗೆ ಸಂಕ್ಷಿಪ್ತ ಮಾಹಿತಿ ನೀಡಲು ಸಫಾಯಿ ಕರ್ಮಚಾರಿ ಆಯೊಗದ ಮಾಜಿ ಎ.ಆರ್.ವೆಂಕಟೇಶ್ ಸಲಹೆ ನೀಡಿದರು. | Kannada Prabha

ಸಾರಾಂಶ

ಮೀಸಲಾತಿ ವರ್ಗೀಕರಣಕ್ಕೆ ಬರುವ ಗಣತಿದಾರರಿಗೆ ಸಂಕ್ಷಿಪ್ತ ಮಾಹಿತಿ ನೀಡಲು ಸಫಾಯಿ ಕರ್ಮಚಾರಿ ಆಯೊಗದ ಮಾಜಿ ಎ.ಆರ್‌. ವೆಂಕಟೇಶ್ ಸಲಹೆ ನೀಡಿದರು. ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಒಟ್ಟು 101 ಜಾತಿಗಳಿವೆ. ಈ ಪೈಕಿ ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಉಪ ಜಾತಿಗಳು ಯಾವ ಜಾತಿಗೆ ಸೇರಿವೆ ಎಂಬ ಗೊಂದಲವನ್ನೂ ಇತ್ಯರ್ಥಪಡಿಸಬೇಕಾಗಿದೆ. ದಾಖಲೆ, ಪುರಾವೆ, ಅಂತರ್ ಜಾತಿ ಹಿಂದುಳಿದಿರುವಿಕೆ ಇನ್ನಿತರ ಮಾಹಿತಿ ಸಂಗ್ರಹಿಸಿ ವೈಜ್ಞಾನಿಕ ಮತ್ತು ತರ್ಕಬದ್ಧವಾಗಿ ಎಸ್‌ಸಿ ಮೀಸಲು ವರ್ಗೀಕರಣ ನಡೆಸಬೇಕಾಗಿರುವುದರಿಂದ ಅಂಜಿಕೆ ಇಲ್ಲದೆ ಸರಿಯಾದ ಮಾಹಿತಿ ನೀಡಬೇಕು.

ಕನ್ನಡಪ್ರಭ ವಾರ್ತೆ ಬೇಲೂರು

ಮೀಸಲಾತಿ ವರ್ಗೀಕರಣಕ್ಕೆ ಬರುವ ಗಣತಿದಾರರಿಗೆ ಸಂಕ್ಷಿಪ್ತ ಮಾಹಿತಿ ನೀಡಲು ಸಫಾಯಿ ಕರ್ಮಚಾರಿ ಆಯೊಗದ ಮಾಜಿ ಎ.ಆರ್‌. ವೆಂಕಟೇಶ್ ಸಲಹೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ ಸಮೀಕ್ಷೆ ಸೋಮವಾರದಿಂದ ಆರಂಭಗೊಂಡಿದ್ದು, ಮನೆಮನೆಗೆ ತೆರಳಿ ಸಮೀಕ್ಷೆ ಕಾರ್ಯ ನಡೆಸಲಿದ್ದಾರೆ. ಸಮುದಾಯದ ಎಲ್ಲರೂ ಸರಿಯಾದ ಮಾಹಿತಿ ನೀಡುವಂತೆ ಮನವಿ ಮಾಡಿದರು. ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಒಟ್ಟು 101 ಜಾತಿಗಳಿವೆ. ಈ ಪೈಕಿ ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಉಪ ಜಾತಿಗಳು ಯಾವ ಜಾತಿಗೆ ಸೇರಿವೆ ಎಂಬ ಗೊಂದಲವನ್ನೂ ಇತ್ಯರ್ಥಪಡಿಸಬೇಕಾಗಿದೆ. ದಾಖಲೆ, ಪುರಾವೆ, ಅಂತರ್ ಜಾತಿ ಹಿಂದುಳಿದಿರುವಿಕೆ ಇನ್ನಿತರ ಮಾಹಿತಿ ಸಂಗ್ರಹಿಸಿ ವೈಜ್ಞಾನಿಕ ಮತ್ತು ತರ್ಕಬದ್ಧವಾಗಿ ಎಸ್‌ಸಿ ಮೀಸಲು ವರ್ಗೀಕರಣ ನಡೆಸಬೇಕಾಗಿರುವುದರಿಂದ ಅಂಜಿಕೆ ಇಲ್ಲದೆ ಸರಿಯಾದ ಮಾಹಿತಿ ನೀಡಬೇಕು.

ಈಗಾಗಲೇ ಇದರ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕ್ರಾಂತಿಕಾರಿ ಮಹತ್ವದ ಮಾಹಿತಿಯನ್ನು ನೀಡಿದ್ದು, ಪ್ರತಿಯೊಬ್ಬರು ಅದನ್ನು ಕಡ್ಡಾಯವಾಗಿ ಅನುಸರಿಸಬೇಕು. ನಿವೃತ್ತ ನ್ಯಾಯಮೂರ್ತಿಗಳಾದ ನಾಗಮೋಹನ್ ದಾಸ್ ಅವರ ಆಯೋಗ ರಚನೆ ಮಾಡಿ ಜನಸಂಖ್ಯೆ ಅನುಗುಣವಾಗಿ ಜಾತಿಗಣತಿ ರಚನೆ ಮಾಡಬೇಕು. ನಮ್ಮ ತಾಲೂಕಿನಲ್ಲಿ ೬೦ರಿಂದ ೭೦ ಸಾವಿರ ಜನಸಂಖ್ಯೆ ಇದ್ದು ಆದಿ ಕರ್ನಾಟಕ ಆದಿ ದ್ರಾವಿಡ ಎಂಬುದಾಗಿ ನಮೂದಿಸಿದ್ದು, ತಾವುಗಳು ದಯಮಾಡಿ ಜಾತಿಗಣತಿಗೆ ಬರುವವರಿಗೆ ತಮ್ಮ ಉಪಜಾತಿಗಳ ಮಾಹಿತಿಯನ್ನು ಧೈರ್ಯವಾಗಿ ನೀಡಬೇಕು ಎಂದರು.

ಒಂದೊಂದು ಜಿಲ್ಲೆಗಳಲ್ಲಿ ೭ರಿಂದ ೮ ಲಕ್ಷದವರೆಗೆ ನಮ್ಮ ಜನಾಂಗದವರಿದ್ದು ಯಾರು ಸಹ ತಮ್ಮ ಉಪಜಾತಿಗಳನ್ನು ನೋಂದಾಯಿಸದೇ ಸರ್ಕಾರದ ಹಲವಾರು ಸವಲತ್ತಿಂದ ವಂಚಿತರಾಗಿದ್ದು, ವಿದ್ಯಾರ್ಥಿಗಳೇ ಹೆಚ್ಚಿರುವುದು ದುರದೃಷ್ಟಕರ. ಈಗಾಗಲೇ ತೆಲಂಗಾಣ, ಆಂಧ್ರ, ಪಂಜಾಬ್ ರಾಜ್ಯದಲ್ಲಿ ಎಲ್ಲಾ ಉಪಜಾತಿಗಳನ್ನು ಸೇರಿಸಿಕೊಂಡು ಸವಲತ್ತು ಪಡೆಯುತ್ತಿದ್ದು, ಇದರ ಬಗ್ಗೆ ಸರ್ಕಾರ ಜಾಗೃತಿ ಮೂಡಿಸುತ್ತಿದ್ದು, ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಪ್ರಕ್ರಿಯೆಯಲ್ಲಿ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದು, ಸಮೀಕ್ಷೆ ನಂತರ ತ್ವರಿತವಾಗಿ ಒಳ ಮೀಸಲಾತಿ ಜಾರಿಗೆ ತರುವ ಕೆಲಸ ಪ್ರಾರಂಭವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಅಶೋಕ್, ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ದೇವರಾಜ್ ಹಾಜರಿದ್ದರು.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ