ರೈತರ ಜಮೀನುಗಳಿಗೆ ಸಮರ್ಪಕ ನೀರು ಹರಿಸಿ: ಶಾಸಕ ಆರ್.ಬಸನಗೌಡ

KannadaprabhaNewsNetwork |  
Published : Jul 30, 2024, 12:42 AM IST
29-ಎಂಎಸ್ಕೆ-02 | Kannada Prabha

ಸಾರಾಂಶ

ಮಸ್ಕಿ ತಾಲೂಕಿನ ಕವಿತಾಳ ಸಮೀಪದ ತುಂಗಭದ್ರಾ ಎಡನಾಲೆ 73ನೇ ಉಪಕಾಲುವೆಗೆ ಶಾಸಕ ಆರ್.ಬಸನಗೌಡ ತುರ್ವಿಹಾಳ ಭೇಟಿ ನೀಡಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಮಸ್ಕಿ/ಕವಿತಾಳ

ತುಂಗಭದ್ರಾ ಎಡನಾಲೆ ಭಾಗದ ರೈತರಿಗೆ ಸೇರಿ ಕ್ಷೇತ್ರದ ರೈತರಿಗೆ ಯಾವುದೇ ರೀತಿ ತೊಂದರೆಗಳು ಬಾರದಂತೆ ನೋಡಿಕೊಳ್ಳಿ ಎಂದು ಖಾದಿ ಮತ್ತು ಗ್ರಾಮೋದ್ಯೋಗ ನಿಗಮದ ಅಧ್ಯಕ್ಷ ಶಾಸಕ ಆರ್.ಬಸನಗೌಡ ತುರ್ವಿಹಾಳ ಎಂದು ಹೇಳಿದರು.

ಮಸ್ಕಿ ತಾಲೂಕು ವ್ಯಾಪ್ತಿ, ಕವಿತಾಳ ಸಮೀಪದ ತುಂಗಭದ್ರಾ ನಾಲೆ 73ನೇ ಉಪ ಕಾಲುವೆಗೆ ಹಾಗೂ ಹಿರೇದಿನ್ನಿ ಪಂಚಾಯತಿ ವ್ಯಾಪ್ತಿ ಮೈಬುಬ್ನಗರ ಕ್ಯಾಂಪನಲ್ಲಿ ಮಳೆಗಾಳಿಗೆ ಇತ್ತೀಚೆಗೆ ರೈತರ ಹೊಲದಲ್ಲಿ ವಿದ್ಯುತ್ ಕಂಬಗಳು ಬಿದ್ದಿರುವ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿ, ರೈತರ ಜಮೀನುಗಳಿಗೆ ಕಾಲುವೆಗಳಿಂದ ಸಮರ್ಪಕವಾಗಿ ನೀರು ಬಿಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮಳೆ-ಗಾಳಿಯಿಂದ ಕ್ಷೇತ್ರದಲ್ಲಿ ರೈತರ ಹೊಲದಲ್ಲಿ ವಿದ್ಯುತ್ ಕಂಬಗಳು ಬಿದ್ದಿವೆ. ಆದ್ದರಿಂದ ಅಧಿಕಾರಿಗಳು ಮುಂಜಾಗ್ರತೆ ವಹಿಸಿ ಅವುಗಳನ್ನು ಸರಿಪಡಿಸಿ ರೈತರಿಗೆ ಅನೂಕೂಲ ಮಾಡಬೆಕು ಎಂದು ಸೂಚಿಸಿದರು.

ಈ ವೇಳೆ ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ಯುವ ಕಾಂಗ್ರೆಸ್ ಅಧ್ಯಕ್ಷ ಹನುಮೇಶ್ ಬಾಗೋಡಿ, ಶರಣಪ್ಪ ಗೌಡ ತೋರಣದಿನ್ನಿ, ಬಲವಂತರಾಯ, ಸುರೇಶ, ವಿವಿದ ಇಲಾಖೆಯ ಅಧಿಕಾರಿಗಳು ಹಾಗೂ ರೈತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಿಂಗರಾಜ ದೇಸಾಯಿ ಕೊಡುಗೆ ವಿದ್ಯಾರ್ಥಿಗಳಿಗೆ ದಾರಿದೀಪ
ದುರ್ಗಮ ಪ್ರದೇಶಗಳಿಗೆ ಸಂಚಾರಿ ಆರೋಗ್ಯ ವಾಹನ: ಸಚಿವರಿಂದ ಚಾಲನೆ