ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಮುಖಂಡರಾದ ಪ್ರಭುಗೌಡ ಲಿಂಗದಳ್ಳಿ ಹಾಗೂ ಅಶೋಕಗೌಡ ಪಾಟೀಲ ಮಾತನಾಡಿ, ಕುದರಿಸಾಲವಾಡಗಿ ಗ್ರಾಮದಲ್ಲಿ ನಡೆಸಿದ ರಸ್ತೆ ತೆರವು ಕಾರ್ಯಾಚರಣೆ ಯಾವ ಯೋಜನೆಯಡಿ ಮಾಡಲಾಗಿದೆ. ಅಂದಾಜು ವೆಚ್ಚವೆಷ್ಟು ಹಾಗೂ ಗುತ್ತಿಗೆದಾರರು ಯಾರು ಎಂಬ ಬಗ್ಗೆ ಸಂಫೂರ್ಣ ಮಾಹಿತಿ ನೀಡಬೇಕು. ಸತತ ಮಳೆಯಿಂದ ಜನರು ಸಮಸ್ಯೆಯಲ್ಲಿದ್ದಾರೆ. ತೆರವು ಕಾರ್ಯಾಚರಣೆ ವಾರ ಕಾಲ ಮುಂದೂಡಿ ಎಂದು ಡಿಸಿ, ಎಸ್ಪಿ ಅವರಿಗೆ ಮನವಿ ಮಾಡಿದರೂ ಕೇಳದೇ ಕೇವಲ ಒಂದೇ ನೋಟಿಸ್ ನೀಡಿ ಮನೆಗಳ ತೆರವು ಕಾರ್ಯ ಮಾಡಿದ್ದೀರಿ. ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಪಡಿಸುವುದು ಬೇಡವೆಂದು ನಾವೆಲ್ಲಾ 45 ಅಡಿ ರಸ್ತೆ ತೆರವು ಮಾಡಿ ಎಂದರೂ ಎರಡೆರಡು ಬಾರಿ ರಸ್ತೆ ಮಾರ್ಕ್ ಮಾಡಿ ಏಕಾಏಕಿ 55 ಅಡಿ ಎಂದು 60 ಅಡಿವರೆಗೂ ತೆರವು ಕಾರ್ಯಾಚರಣೆ ಮಾಡಲಾಗಿದೆ. ಮನೆ ಕಳೆದುಕೊಂಡವರಿಗೆ ಅವರ ಬೇಡಿಕೆಯಂತೆ ಸೂಕ್ತ ಪರಿಹಾರಧನ ಹಾಗೂ ಮನೆಗಳನ್ನು ನೀಡುವ ಲಿಖಿತ ಭರವಸೆ ನೀಡಿದರೆ ನಾವು ಧರಣಿ ಹಿಂಪಡೆಯುತ್ತೇವೆ ಎಂದು ಶಾಸಕರ ಎದುರು ತಮ್ಮ ಅಹವಾಲು ಸಲ್ಲಿಸಿದರು.
ಶಾಸಕ ರಾಜುಗೌಡ ಪಾಟೀಲ ಮಾತನಾಡಿ, ಕುದರಿಸಾಲವಾಡಗಿ ಗ್ರಾಮದಲ್ಲಿ ಯಾಳವಾರಕ್ಕೆ ಹೋಗುವ ಈ ರಸ್ತೆಯ ಕುರಿತು ಬ್ರಿಟಿಷರ ಕಾಲದ ನಕ್ಷೆಯಲ್ಲಿ 108 ಅಡಿ ರಸ್ತೆಯಿದೆ. ಇದರ ಬದಲಾಗಿ ನಾವು ಜನರ ಅನುಕೂಲಕ್ಕಾಗಿ 55 ಅಡಿ ರಸ್ತೆ ಮಾಡಲು ಮುಂದಾಗಿದ್ದೇವೆ. ರಸ್ತೆ ಅಗಲೀಕರಣದಲ್ಲಿ ನಿರಾಶ್ರಿತರಿಗೆ ಆದ ನೋವು ನನಗೂ ಆಗಿದೆ. ಈ ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ಹಾನಿಯಾಗುವ ಮನೆಗಳ ಕುಟುಂಬ ಬಾಂಧವರಿಗೆ ಗ್ರಾಮದ ಎಂಟು ಎಕರೆ ಸರ್ಕಾರಿ ಜಮೀನಿನಲ್ಲಿ ಅರ್ಹ ಫಲಾನುಭವಿಗಳಿಗೆ ಮನೆ ನಿವೇಶನ, ಮನೆ ನಿರ್ಮಾಣ ಮಾಡಿಸಿಕೊಡುವ ಜೊತೆಗೆ ಅಲ್ಲಿ ಎಲ್ಲ ರೀತಿಯ ಮೂಲಸೌಲಭ್ಯ ನೀಡುವುದಾಗಿ ಭರವಸೆ ನೀಡಿದರು.ರಸ್ತೆ ಅಗಲೀಕರಣ ಕಾಮಗಾರಿ ಆರಂಭ ಮಾಡುವ ಮುನ್ನವೇ ಸಭೆ ನಡೆಸಿ ಜನರ ಗಮನಕ್ಕೆ ತರಲಾಗಿತ್ತು. ಇದು ಲೋಕೋಪಯೋಗಿ ಇಲಾಖೆಗೆ ಸೇರಿದ ಜಾಗ ಆಗಿರುವುದರಿಂದಾಗಿ ಪರಿಹಾರ ಬರುವುದಿಲ್ಲ ಎಂದು ಸಹ ಹೇಳಲಾಗಿತ್ತು. ಗ್ರಾಮದ ಅಭಿವೃದ್ಧಿಗೆ ಎಲ್ಲ ಜನರ ಸಹಕಾರ ತುಂಬಾ ಅಗತ್ಯವಿದೆ. ಈಗಲೂ ನಾನು ನಿರಾಶ್ರಿತರಿಗೆ ಸಹಾಯ-ಸಹಕಾರ ನೀಡಲು ಬದ್ಧನಿದ್ದೇನೆ ಎಂದರು.
ತಾಪಂ ಇಒ ಪ್ರಕಾಶ ದೇಸಾಯಿ ಮಾತನಾಡಿ, ರಸ್ತೆ ಅಗಲೀಕರಣದಲ್ಲಿ ಸೂರು ಕಳೆದುಕೊಂಡವರಿಗೆ ನಮ್ಮ ಹೊಲ ನಮ್ಮ ತೋಟ ಯೋಜನೆಯಲ್ಲಿ ಅರ್ಹ ಫಲಾನುಭವಿಗಳಿಗೆ ಪರಿಹಾರ ಕಲ್ಪಿಸಿಕೊಟ್ಟು ಅಗತ್ಯ ಸೌಲಭ್ಯ ಒದಗಿಸಲಾಗುವುದು ಎಂದರು. ಲೋಕೋಪಯೋಗಿ ಇಲಾಖೆ ಎಇ ಮಾಲಿಪಾಟೀಲ ಮಾತನಾಡಿ, ಗ್ರಾಮದಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಎಲ್ಲ ಜನರಿಗೂ ಅನುಕೂಲವಾಗುತ್ತದೆ. ಆದ್ದರಿಂದ ಸಹಕರಿಸಬೇಕೆಂದರು.
ಶಾಸಕರು ಧರಣಿ ಸ್ಥಳದಿಂದೆ ತೆರಳಿದ ನಂತರ ಮುಖಂಡ ಪ್ರಭುಗೌಡ ಲಿಂಗದಳ್ಳಿ, ಅಶೋಕಗೌಡ ಪಾಟೀಲ ಸುದ್ದಿಗಾರರೊಂದಿಗೆ ಮಾತನಾಡಿ,
ಧರಣಿಯಲ್ಲಿ ಮುಖಂಡರಾದ ಗುರುರಾಜ ಗುಡಿಮನಿ, ಕಾಮೇಶ ಭಜಂತ್ರಿ, ಅದಾಂಸಾಬ ಢವಳಗಿ, ನಜೀರ ಗುಡ್ನಾಳ, ರಮಜಾನ ಮುಜಾವರ, ಬಸವರಾಜ ದೇಸಾಯಿ, ಶ್ರೀಕಾಂತ ಹಚಡದ, ಮಲಕ್ಕವ್ವ ಬೆಳ್ಳೇಗೋಳ, ಹಜರತಬೀ ಅತ್ತಾರ, ಪಾವಡೆವ್ವ ದೊಡಮನಿ ಸೇರಿದಂತೆ ಇತರರು ಇದ್ದರು. ಈ ವೇಳೆ ಲೋಕೋಪಯೋಗಿ ಇಲಾಖೆ ಎಇಇ ದೊಡಮನಿ, ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ, ಪಿಐ ಗುರುಶಾಂತ ದಾಶ್ಯಾಳ, ಭೂಸೇನಾ ನಿಗಮದ ಎಇಇ ಆನಂದಸ್ವಾಮಿ ಸೇರಿದಂತೆ ಇತರರು ಇದ್ದರು.