20 ದಿನಗಳಾದರೂ ನಿರಂತರ ನೀರು ಕೊಡಿ

KannadaprabhaNewsNetwork |  
Published : Oct 15, 2026, 01:15 AM IST
13ಕೆಪಿಡಿವಿಡಿ02:  | Kannada Prabha

ಸಾರಾಂಶ

ಅರಕೇರಾ ಮತ್ತು ದೇವದುರ್ಗ ತಾಲೂಕಿನಲ್ಲಿ ಫಸಲಿಗೆ ಬಂದಿರುವ ಬೆಳೆಗಳು ನೀರಿಲ್ಲದೇ ಒಣಗುತ್ತಿವೆ. ರೈತರು ತೀರಾ ಸಂಕಷ್ಟದಲ್ಲಿದ್ದಾರೆ. ಕೋಟಿಗಟ್ಟಲೇ ಹಾನಿಯಾಗುವ ಲಕ್ಷಣಗಳು ಇವೆ.ಕೂಡಲೇ ವಾರಾಬಂಧಿ ನಿಯಮ ಕೈಬಿಟ್ಟು ಕನಿಷ್ಟ 20 ದಿನಗಳಾದರೂ ನಿರಂತರ ಕಾಲುವೆಗಳಿಗೆ ನೀರು ಹರಿಸಿ ಎಂದು ಶಾಸಕಿ ಕರೆಮ್ಮ ಜಿ.ನಾಯಕ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ದೇವದುರ್ಗ

ಅರಕೇರಾ ಮತ್ತು ದೇವದುರ್ಗ ತಾಲೂಕಿನಲ್ಲಿ ಫಸಲಿಗೆ ಬಂದಿರುವ ಬೆಳೆಗಳು ನೀರಿಲ್ಲದೇ ಒಣಗುತ್ತಿವೆ. ರೈತರು ತೀರಾ ಸಂಕಷ್ಟದಲ್ಲಿದ್ದಾರೆ. ಕೋಟಿಗಟ್ಟಲೇ ಹಾನಿಯಾಗುವ ಲಕ್ಷಣಗಳು ಇವೆ.ಕೂಡಲೇ ವಾರಾಬಂಧಿ ನಿಯಮ ಕೈಬಿಟ್ಟು ಕನಿಷ್ಟ 20 ದಿನಗಳಾದರೂ ನಿರಂತರ ಕಾಲುವೆಗಳಿಗೆ ನೀರು ಹರಿಸಿ ಎಂದು ಶಾಸಕಿ ಕರೆಮ್ಮ ಜಿ.ನಾಯಕ ಒತ್ತಾಯಿಸಿದರು.

ನಾರಾಯಣಪೂರ ಬಲದಂಡೆ ನಾಲೆ ವೀಕ್ಷಿಸಿದ ಬಳಿಕ ಇತ್ತೀಚೆಗೆ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ನೀರಿನ ಲಭ್ಯತೆ ಮತ್ತು ಅಗತ್ಯತೆ ಕುರಿತು ಚರ್ಚಿಸಿದರು. ತಾವೆಲ್ಲರೂ ಕಳೆದ ಒಂದು ವಾರದಿಂದ ರೈತರು ನೀರಿಗಾಗಿ ಪರದಾಡುವ ಪರಿಸ್ತಿತಿ ನೋಡಿರುವಿರಿ. ನಾನೂ ಕೂಡ ರಾತ್ರಿಹಗಲು ಕಾಲುವೆಗಳಿಗೆ ಭೇಟಿ ನೀಡಿರುವೆ. ಆತಂಕಕ್ಕೆ ಒಳಗಾಗಿರುವ ರಾತ್ರಿ ಬೆಳೆ ಹಾನಿ ಭೀತಿಯಿಂದ ನೀರಿಗಾಗಿ ಪರದಾಡುತ್ತಿದ್ದಾರೆ. ಡ್ಯಾಂ ಅಧಿಕಾರಿಗಳು ಸಮರ್ಪಕವಾಗಿ ನೀರು ಬಿಟ್ಟೀವಿ ಅಂತಾರೆ.ನೀವು ನೋಡಿದರೆ ನಮಗೆ ಬಂದಿಲ್ಲ ಎನ್ನುವಿರಿ,ಹಾಗಾದರೆ ಬಿಡಲಾದ ನೀರು ಎಲ್ಲಿಗೆ ಹೋದವು?ತಕ್ಕ ಉತ್ತರ ನೀಡಬೇಕೆಂದು ಪಟ್ಟು ಹಿಡಿದರು.

ನಾರಾಯಣಪೂರ ವಿಭಾಗದ ಜಿ.ಜಿ.ಪೂಜಾರ ಮಾತನಾಡಿ, ಈಗಾಗಲೇ ಕಾಲುವೆಗಳಿಗೆ ಡ್ಯಾಂನಿಂದ 2700 ಕ್ಯೂಸೆಕ್ ನೀರು ಬಿಡಲಾಗಿದೆ. ಆದರೂ ಟೇಲೆಂಡ್ ರೈತರ ಜಮೀನುಗಳಿಗೆ ನೀರು ಬಂದಿಲ್ಲ ಎಂಬ ಹಿನ್ನೆಲೆಯಲ್ಲಿ ಹೆಚ್ಚವರಿಯಾಗಿ 200 ಕ್ಯೂಸೆಕ್ ನೀರು ಬಿಡಲಾಗುತ್ತಿದೆ.ಮುಂಗಾರು ಬೆಳೆಗಳಿಗೆ ನೀರಿನ ಕೊರೆತೆ ಇರುವದಿಲ್ಲ.ಆದರೆ ಕಾಲುವೆಗಳ ನಿರ್ವಹಣೆ ಹಾಗೂ ರೈತರು ಕಾಲುವೆಗಳಿಂದ ನಿಯಮಬಾಹಿರ ನೀರು ಪಡೆಯುತ್ತಿರುವದರಿಂದ ಸಮಸ್ಯೆ ಉಲ್ಬನಗೊಂಡಿದೆ.ಜಲಾಷಯದಲ್ಲಿ 48 ಟಿಎಂಸಿ ನೀರು ಸಂಗ್ರಹವಿದೆ.ಕುಡಿವ ನೀರು ಮತ್ತು ಕೆಪಿಟಿಸಿಎಲ್ಗೆ ಬೇಕಾಗುವ ಅಗತ್ಯ ನೀರಿನ ಪ್ರಮಾಣವನ್ನು ಪರಿಗಣಿಸಲಾಗುವದು ಎಂದರು.

ಎನ್‌ ಆರ್‌ ಬಿಸಿ 15 ರಿಂದ 18ರವರಗೆ ಟೇಲೆಂಡ್ ನೀರು ಹರಿಯುತ್ತಿಲ್ಲ.9ಎ ಕೆನಾಲ್ ವ್ಯಾಪ್ತಿಯಲ್ಲಿ ಕುಡಿವ ನೀರಿಗೂ ಅಭಾವ ಉಂಟಾಗಿದೆ.ನದಿ ಪಾತ್ರದಲ್ಲಿ ಹೆಚ್ಚಿನ ಪ್ರಮಾಣ ನೀರು ಬಿಡಲಾಗುತ್ತಿದೆ.ತೆಲಂಗಾಣ ರಾಜ್ಯಕ್ಕೆ ನೀರು ಬಿಡಲಾಗುತ್ತಿದೆ ಎನ್ನಲಾಗುತ್ತಿದೆ.ವಿದ್ಯುತ್ ಉತ್ಪಾದನಾ ಘಟಕದಲ್ಲಿ ನೀರು ಹೆಚ್ಚಿನ ಪ್ರಮಾಣ ಬಳಸಲಾತ್ತಿದೆ.ಇನ್ನೂ 2-3ದಿನ ಕಳೆದರೂ ರೈತರಿಗೆ ಆತ್ಮಹತ್ಯೆ ಒಂದೇ ದಾರಿ ಎಂದು ರೈತರು ಸಭೆಯಲ್ಲಿ ಅಕ್ರೋಶ ವ್ಯಕ್ತಪಡಿಸಿದರು.

ಜನಪ್ರತಿನಿಧಿಗಳನ್ನು ದೂರವಿರಸಿ,ಸಲಹಾ ಸಮಿತಿಯಲ್ಲಿ ಅಧಿಕಾರಿಗಳೇ ನಿರ್ಧಾರ ತೆಗೆದುಕೊಂಡ ಹಿನ್ನಲೆಯಲ್ಲಿ ಈ ಬಾರಿ ಇಂತಹ ಸಮಸ್ಯೆ ಉಲ್ಬಣಗೊಂಡಿದೆ.ಅ.15ರಂದು ಜರುಗುವ ಸಲಹಾ ಸಮಿತಿ ಸಭೆಯಲ್ಲಿ ವಾರಾಬಂಧಿ ನಿಯಮ ಕೈಬಿಡಲು ಒತ್ತಾಯಿಸಲಾಗುವದು ಎಂದು ಶಾಸಕಿ ತಿಳಿಸಿದರು.

ಕೃಷ್ಣಾಪೂರ ಅಧೀಕ್ಷಕ ಅಭಿಯಂತರ ವಿಜಯಕುಮಾರ,ಸಿಇ ಗೋಪಾಲಸಿಂಗ,ಮಹಾಲಿಂಗಪ್ಪ ಭಜಂತ್ರಿ ಸೇರಿದಂತೆ ಇತರೆ ಕೆಬಿಜೆಎನ್ಎಲ್ ಅಧಿಕಾರಿಗಳು,ಮುಖಂಡರು ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಸದ ತಿಪ್ಪೆಯಲ್ಲಿ ಅವಧಿ ಮುಗಿದ ಔಷಧಿ ಡಬ್ಬಿಗಳು ಪತ್ತೆ
ಟಿಎಲ್‌ಬಿಸಿ ಮೇಲ್ಭಾಗ ನೀರಿನ ಕಳ್ಳಾಟ ಬಯಲು