ರೈತರಿಗೆ ಬೆಳೆಹಾನಿ ಪರಿಹಾರ ನೀಡಿ: ಉಪ ತಹಸೀಲ್ದಾರ್ ಎಂ.ಎಸ್. ಕಡೂರ

KannadaprabhaNewsNetwork |  
Published : Jul 29, 2025, 01:04 AM IST
ಫೋಟೊ ಶೀರ್ಷಿಕೆ: 28ಆರ್‌ಎನ್‌ಆರ್5ಜಿಲ್ಲಾದ್ಯಂತ ಮುಂಗಾರು ಬಿತ್ತನೆ ಪ್ರಕೃತಿ ವಿಕೋಪಕ್ಕೆ ಕೇಂದ್ರ ಹಾಗೂ ರಾಜ್ಯ ಸÀರ್ಕಾರಗಳು ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ರಾಣಿಬೆನ್ನೂರಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಉಪ ತಹಸೀಲ್ದಾರ ಎಂ.ಎಸ್.ಕಡೂರ ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಕಾಂಗ್ರೆಸ್ಸಿನ 6 ಶಾಸಕರಿದ್ದರೂ ರೈತರಿಗೆ ಆದ ನಷ್ಟದ ಬಗ್ಗೆ ಸರಿಯಾಗಿ ಗೊತ್ತಿಲ್ಲ. ರೈತರಿಗೆ ಕಾಲ ಕಾಲಕ್ಕೆ ಗೊಬ್ಬರ ಸಿಗುತ್ತಿಲ್ಲ.

ರಾಣಿಬೆನ್ನೂರು: ಜಿಲ್ಲಾದ್ಯಂತ ಮುಂಗಾರು ಬಿತ್ತನೆ ಪ್ರಕೃತಿ ವಿಕೋಪಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಸೋಮವಾರ ಉಪ ತಹಸೀಲ್ದಾರ್ ಎಂ.ಎಸ್. ಕಡೂರ ಅವರಿಗೆ ಮನವಿ ಸಲ್ಲಿಸಿದರು. ಜಿಲ್ಲೆಯಲ್ಲಿ ಕಾಂಗ್ರೆಸ್ಸಿನ 6 ಶಾಸಕರಿದ್ದರೂ ರೈತರಿಗೆ ಆದ ನಷ್ಟದ ಬಗ್ಗೆ ಸರಿಯಾಗಿ ಗೊತ್ತಿಲ್ಲ. ರೈತರಿಗೆ ಕಾಲ ಕಾಲಕ್ಕೆ ಗೊಬ್ಬರ ಸಿಗುತ್ತಿಲ್ಲ. ಒಂದು ಕಡೆ ತಮ್ಮ ಕೃಷಿ ಸಚಿವರು ಯಾವುದೇ ಒಂದು ಮೂಲೆಯಲ್ಲಿ ಕುಂತು ಎಲ್ಲ ಸರಿಯಿದೆ. ಯಾವುದೇ ರೀತಿ ಗೊಬ್ಬರ ಮತ್ತು ಬೀಜದ ಕೊರತೆಯಿಲ್ಲವೆಂದು ಹೇಳುತ್ತಾರೆ. ಹಾಗಾದರೇ ಒಂದು ಕಡೆ ಕೇಂದ್ರ ಸರ್ಕಾರ ಕಳಸಿಲ್ಲ ಅಂತ ಆರೋಪ ಮಾಡುತ್ತಾರೆ. ಮತ್ತೊಂದು ಕಡೆ ಬಿಜೆಪಿ ರೈತರಿಗೆ ಸರಿಯಾಗಿ ಗೊಬ್ಬರ ಕೊಟ್ಟಿಲ್ಲ ಅಂತ ಎಂದು ಹೇಳಿ ಪ್ರತಿಭಟನೆ ಮಾಡಲಿಕ್ಕೆ ಮುಂದಾಗಿದ್ದಾರೆ.

ಹಾಗಾದರೆ ಗಂಡ- ಹೆಂಡತಿ ಜಗಳದಲ್ಲಿ ಕೂಸು ಘಾಸಿಯಾಯಿತು ಎನ್ನುವ ಪರಿಸ್ಥಿತಿ ಜಿಲ್ಲೆಯ ರೈತರದ್ದಾಗಿದೆ. ರೈತರಿಗೆ ಸರಿಯಾದ ರೀತಿ ಮೂಲ ಸೌಕರ್ಯಗಳಿಲ್ಲದೇ ಸಾಲದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ರೈತರೊಡನೆ ಚೆಲ್ಲಾಟವಾಡುತ್ತಾ ರೈತರಿಗೆ ಪ್ರಾಣ ಸಂಕಷ್ಟ ನೀಡಿದಂತಾಗಿದೆ.

ಸತತ ಮಳೆಯಿಂದ ರೈತರು ಬೆಳೆದ ಬೆಳೆಗಳು ಸಂಪೂರ್ಣ ಹಾಳಾಗಿವೆ. ಆದ್ದರಿಂದ ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರಕೃತಿ ವಿಕೋಪಕ್ಕೆ ಒಳಗಾದ ರೈತರಿಗೆ ಒಂದು ಎಕರೆಗೆ ₹40- 50 ಸಾವಿರ ಪರಿಹಾರ ನೀಡಬೇಕು ಮತ್ತು ಮುಂಗಾರು ಬೆಳೆಗೆ ಬೆಳೆ ವಿಮೆ ತುಂಬಿದ ರೈತರಿಗೆ ಶೇ. 25ರಷ್ಟು ಬೆಳೆ ವಿಮೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ತಾಲೂಕು ರೈತ ಸಂಘದ ಅಧ್ಯಕ್ಷ ಹನುಮಂತಪ್ಪ ಕಬ್ಬಾರ, ಮಂಜುನಾಥ ಗುಡ್ಡಣ್ಣನವರ, ಸೋಮರೆಡ್ಡಿ ಹಾದಿಮನಿ, ಮಂಜುನಾಥ ಸಂಬೋಜಿ, ಸಂತೋಷಕುಮಾರ ಮುದ್ದಿ, ಸಿದ್ಧಲಿಂಗಪ್ಪ ಮುದ್ದಿ, ಮಂಜಪ್ಪ ಬಸನಗೌಡ್ರ, ತಮ್ಮಣ್ಣ ಮುದಕಣ್ಣನವರ, ಶಿವರಾಜ ಭಜಂತ್ರಿ, ಪ್ರಕಾಶ ಕೆಂಪದುರ್ಗಣ್ಣನವರ, ಪ್ರದೀಪ ಹಂಚಿನಮನಿ, ನಟರಾಜ ಕೋಟಿಹಾಳ, ರಾಮಪ್ಪ ಇಟಗಿ, ಕರಬಸಪ್ಪ ದಾಸಪ್ಪನವರ, ಮಲ್ಲಿಕಾರ್ಜುನ ತೆಗ್ಗಿನ, ನಾಗರಾಜ ಕೆಂಪದುರ್ಗಣ್ಣನವರ ಇದ್ದರು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ