ಕಾರ್ಮಿಕರ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಿ: ಪಾಂಡ್ವೆ

KannadaprabhaNewsNetwork |  
Published : Feb 04, 2024, 01:35 AM IST
03ಕೆಪಿಆರ್‌ಸಿಆರ್‌01: | Kannada Prabha

ಸಾರಾಂಶ

ನರೇಗಾ ಕಾರ್ಮಿಕರು ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಿ, ಅವರ ಭವಿಷ್ಯ ಉಜ್ವಲಗೊಳಿಸಬೇಕು.

ರಾಯಚೂರು: ನರೇಗಾ ಕಾರ್ಮಿಕರು ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಿ, ಅವರ ಭವಿಷ್ಯ ಉಜ್ವಲಗೊಳಿಸಬೇಕು ಎಂದು ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ ಹೇಳಿದರು.

ತಾಲೂಕಿನ ಶಾಖವಾದಿ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾದಡಿ ಅನುಷ್ಠಾನಗೊಳ್ಳುತ್ತಿರುವ ಅಡವಿಭಾವಿ ಕೆರೆ ಅಭಿವೃದ್ಧಿಪಡಿಸುವ ಕಾಮಗಾರಿ ಸ್ಥಳದಲ್ಲಿ ನರೇಗಾ ದಿವಸ ಆಚರಣೆಯಲ್ಲಿ ಸಸಿ ನೆಟ್ಟು, ನರೇಗಾ ಕೂಲಿಕಾರರೊಂದಿಗೆ ಪಾಲ್ಗೊಂಡು ಸಂಭ್ರಮದಿಂದ ಕೆಕ್ ಕತ್ತರಿಸಿ 100 ದಿನ ಪೂರೈಸಿದ ಕುಟುಂಬದ ಕೂಲಿಕಾರರಿಗೆ ಸನ್ಮಾಸಿ ಮಾತನಾಡಿದರು.

ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿ ಒಳಗೊಂಡಿರುವ ಪ್ರತಿಯೊಂದು ಕುಟುಂಬದ ಕೂಲಿಕಾರರು ಕೆಲಸದಲ್ಲಿ ಭಾಗಿಯಾಗುವ ರೀತಿಯಂತೆ, ಪ್ರತಿಯೊಂದು ಕೂಲಿಕಾರರ ಮಕ್ಕಳು ಕಾಲೇಜು, ಶಾಲೆ, ಅಂಗನವಾಡಿ ಮತ್ತು ಕೂಸಿನ ಮನೆಗಳಲ್ಲಿ ತಪ್ಪದೇ ಇರುವಂತೆ ಖಾತರಿಪಡಿಸಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಕಾರ್ಮಿಕರ ಮಕ್ಕಳು ಕೂಡ ದೊಡ್ಡ ದೊಡ್ಡ ಕ್ಷೇತ್ರದಲ್ಲಿ ಸಾಧನೆ ಮಾಡುವಂತಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಕೂಲಿಕಾರರಿಗೆ ಉಚಿತ ಆರೋಗ್ಯ ಶಿಬಿರವನ್ನು ಅಯೋಜಿಸಿ, ಕೂಲಿಕಾರರಿಗೆ ರಕ್ತದ ಒತ್ತಡ, ಮಧುಮೇಹ, ರಕ್ತ ಪರೀಕ್ಷೆ ಮತ್ತು ಕಣ್ಣಿನ ತಪಾಸಣೆ ಆರೋಗ್ಯ ಸಿಬ್ಬಂದಿಯವರಿಂದ ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಸಿದ್ಧಮ್ಮ ಆಂಜನೇಯ, ಉಪಾಧ್ಯಕ್ಷ ಮಲ್ಲೇಶ ಪೂಜಾರಿ, ವಿವಿಧ ಅಧಿಕಾರಿ, ಸಿಬ್ಬಂದಿ, ಕೂಲಿಕಾರರು, ಗ್ರಾಮಸ್ಥರು ಇದ್ದರು.

-----ನರೇಗಾ ಕೂಲಿಕಾರರಿಗೆ ಆರೋಗ್ಯ ತಪಾಸಣೆ, ಸಿಹಿ ಹಂಚಿಕೆ

ಮಾನ್ವಿ: ತಾಲೂಕಿನ ರಾಜಲಬಂಡ ಗ್ರಾಪಂ ವ್ಯಾಪ್ತಿಯ ರಾಜಲಬಂಡ ಗ್ರಾಮದ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ನರೇಗಾ ದಿನಾಚರಣೆಯನ್ನು ಆಚರಿಸಲಾಯಿತು. ನರೇಗಾ ಕೂಲಿ ಕಾರ್ಮಿರಿಗೆ ಸಹಿ ಹಂಚಿದ ನಂತರ ಯೋಜನೆ ಜಾರಿಯಾಗಿ 18 ವರ್ಷಗಳು ಕಳೆದ ಹಿನ್ನೆಲೆ ಸವಿನೆನಪಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಐಇಸಿ ತಾಲೂಕು ಸಂಯೋಜಕ ಈರೇಶ ಅವರು ತಿಳಿಸಿದರು.

ನಂತರ ಚಂದ್ರಶೇಖರ ಸೋಪಿಮಠ ಅವರು ಬ್ಯಾಂಕಿನಲ್ಲಿ ದೊರೆಯುವ ಜನ ಸುರಕ್ಷ ಯೋಜನೆ ಬಗ್ಗೆ ಮಾಹಿತಿ ನೀಡಿದರು. ನಂತರ ಆರೋಗ್ಯ ಶಿಬಿರ ಕಾರ್ಯಕ್ರಮದಲ್ಲಿ ಎಲ್ಲಾ ಕೂಲಿಕಾರರು ತಮ್ಮ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಂಡರು.

ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯಾಧಿಕಾರಿಗಳಾದ ಮಹಾದೇವ, ಅಶ್ವನಿ ಹಾಗೂ ಸಮ್ರೀನ್, ಗ್ರಾಮ ಪಂಚಾಯತಿಯ ಡಿಇಒ ಗೋಪಾಲಕೃಷ್ಣ, ಬಿಎಪ್ಟಿ ತಿಮ್ಮಪ್ಪ, ಅಶಾಕಾರ್ಯಕರ್ತೆಯರಾದ ಜ್ಯೋತಿ, ನರಸಮ್ಮ ಹಾಗೂ ನರೇಗಾ ಕೂಲಿಕಾರರು ಹಾಜರಿದ್ದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ