ಮಹಾನಗರದ 3 ವಲಯ ಕಚೇರಿಗಳ ವ್ಯಾಪ್ತಿಯಲ್ಲಿ ಬೀದಿಬದಿ ವ್ಯಾಪಾರಿಗಳಿಗಾಗಿ 7 ಝನಲ್ ಗಳನ್ನು ಗುರುತಿಸಲಾಗಿದ್ದರೂ ಅಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಆಗುತ್ತಿರುವ ವಿಳಂಬ ದೋರಣೆ ಖಂಡಿಸಿ ಅ.9ರಂದು ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಲಾಗುವುದು ಎಂದು ಅಖಿಲ ಕರ್ನಾಟಕ ರಾಜ್ಯ ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ ಎಸ್.ಸೂರ್ಯವಂಶಿ ಹೇಳಿದರು.
ಕನ್ನಡಪ್ರಭ ವಾರ್ತೆ ಕಲಬುರಗಿಮಹಾನಗರದ 3 ವಲಯ ಕಚೇರಿಗಳ ವ್ಯಾಪ್ತಿಯಲ್ಲಿ ಬೀದಿಬದಿ ವ್ಯಾಪಾರಿಗಳಿಗಾಗಿ 7 ಝನಲ್ ಗಳನ್ನು ಗುರುತಿಸಲಾಗಿದ್ದರೂ ಅಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಆಗುತ್ತಿರುವ ವಿಳಂಬ ದೋರಣೆ ಖಂಡಿಸಿ ಅ.9ರಂದು ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಲಾಗುವುದು ಎಂದು ಅಖಿಲ ಕರ್ನಾಟಕ ರಾಜ್ಯ ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ ಎಸ್.ಸೂರ್ಯವಂಶಿ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಬೀದಿ ವ್ಯಾಪಾರಿಗಳ ಬೇಡಿಕೆಗೆ ಆಗ್ರಹಿಸಿ ವಿವಿಧ ಹಂತಗಳ ಹೋರಾಟ ಮತ್ತು ಕಾನೂನು ಹೋರಾಟ ಕೈಗೊಂಡರೂ ಕ್ಯಾರೆ ಅನ್ನದ ಪಾಲಿಕೆಯ ಧೋರಣೆ ಖಂಡಿಸಿ ಅ.9ರಂದು ಬೆಳಗ್ಗೆ 11ಕ್ಕೆ ನಗರದ ಜಗತ್ ವೃತ್ತದಿಂದ ಪಾಲಿಕೆಯವರೆಗೂ ಬೃಹತ ಪ್ರತಿಭಟನಾ ರ್‍ಯಾಲಿ ಮೂಲಕ ತೆರಳಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮತ್ತು ಬೀದಿಬದಿ ವ್ಯಾಪರಸ್ಥರು ಸೇರಿಕೊಂಡು ಮಾಹನಗರ ಪಾಲಿಕೆಗೆ ಮುತ್ತಿಗೆ ಹಾಕಲಾಗುವುದು ಎಂದರು..
ನಗರದ ಸರ್ಕಾರಿ ಐಟಿಐ ಕಾಲೇಜು ಎದುರು- ಎಂಎಸ್‍ಕೆ ಮಿಲ್ ರಸ್ತೆ, ಡಂಕಾ ವೃತ್ತದಿಂದ -ಪಾಕಿಜಾ ವೈನ್ ರಸ್ತೆ, ಕೆ.ಎಂ.ಎಫ್. ಡೈರಿ ಎದುರುಗಡೆ, ಅಣಕಲ್ ಪೆಟ್ರೋಲಬಂಕ್ ಎದುರು, ಹಳೆ ಜೇವರ್ಗಿ ರೈಲ್ವೆ ಕೆಳ ಸೇತುವೆ ರಸ್ತೆ, ಆಳಂದ ಚೆಕ್ ಪೋಸ್ಟ್ ರಸ್ತೆ ಮತ್ತು ಸುಪರ ಮಾರುಕಟ್ಟೆ ವಲಯಗಳಲ್ಲಿ ಬೀದಿಬದಿ ವ್ಯಾಪಾರಗಳನ್ನು ಕೈಗೊಳ್ಳಲು 2015 ರಲ್ಲಿ ಅಂದಿನ ಪಾಲಿಕೆ ಆಯುಕ್ತ ಎಸ್.ಬಿ.ಕಟ್ಟಿಮನಿ ಅವರು, ಬೀದಿವ್ಯಾಪಾರಸ್ಥರ ಅಧಿನಿಯಮ-2014ರಂತೆ ಕ್ರಮ ಕೈಗೊಂಡಿದ್ದರು. ಆದರೇ ಇಲ್ಲಿಯವರೆಗೂ ಬೀದಿಬದಿ ವಲಯ ಮಾರುಕಟ್ಟೆಗಳನ್ನು ನಿರ್ಮಿಸಿ ಅಲ್ಲಿ ಅಗತ್ಯ ಮೂಲ ಸೌಕರ್ಯ ಕಲ್ಪಿಸುವಲ್ಲಿ ಪಾಲಿಕೆ ಸಂಪೂರ್ಣ ವಿಫಲಗೊಂಡಿದೆ ಎಂದರು.ಬೀದಿಬದಿ ವ್ಯಾಪಾರಸ್ಥರ ಬೆಂಬಲ ಉಪಘಟಕದಡಿ ಅಭಿವೃದ್ಧಿಗೆ 2017-18ರಲ್ಲಿ 50 ಲಕ್ಷ ರು. ಮೀಸಲಿಟ್ಟರೂ ಆ ಹಣ ಖರ್ಚು ಮಾಡಿಲ್ಲ. ಬೀದಿ ವ್ಯಾಪಾರಸ್ಥರ ಕಲ್ಯಾಣ ಯೋಜನೆಗಳು ಸಹ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಸಂಘವೂ ಕೈಗೊಂಡ ಕಾನೂನು ಹೋರಾಟದಲ್ಲಿ ಬೀದಿವ್ಯಾಪಾರಿಗಳ ಪರ ಆದೇಶ ಬಂದಿದ್ದರೂ ಅದನ್ನು ಜಾರಿ ಮಾಡುವಲ್ಲಿಯೂ ಪಾಲಿಕೆ ವಿಫಲವಾಗಿದೆ ಎಂದರು.ದಸರಾ ಮತ್ತು ದೀಪಾವಳಿ ಹಬ್ಬಗಳಲ್ಲಿ ವ್ಯಾಪಾರ ಮುಕ್ತವಾಗಿ ನಡೆಸಲು ಮಹಾನಗರ ಪಾಲಿಕೆ, ಜಿಲ್ಲಾಡಳಿತ ಮತ್ತು ಪೊಲೀಸ ಇಲಾಖೆ ಸ್ಥಳಗಳನ್ನು ಗುರುತಿಸಿ ಗುರುತು ಮಾಡಿಕೊಡಬೇಕು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಹಿಂದೂ ಮತ್ತು ಮುಸ್ಲೀಮರ ಹಬ್ಬ ಹರಿದಿನಗಳಲ್ಲಿ ಮಹಾನಗರದ ಕಿರಾಣ ಬಜಾರ, ಕಪಡ ಬಜಾರ, ಚಪ್ಪಲ ಬಜಾರ, ಬಂಡೆಬಜಾರ ಸಹಿತ ಸುಪರ ಮಾರುಕಟ್ಟೆಯಲ್ಲಿರುವ ಎಲ್ಲ ವ್ಯಾಪಾರ ಪ್ರದೇಶಗಳಲ್ಲಿ ಬೀದಿ ಬದಿ ವ್ಯಾಪಾರಕ್ಕೆ ಅಡ್ಡಿಪಡಿಸಬಾರದು. ಸಾರ್ವಜನಿಕರಿಗೆ ಮತ್ತು ರಸ್ತೆ ಸಂಚಾರಕ್ಕೆ ತೊಂದರೆಯಾಗದಂತೆ ದಸರಾ ಹಬ್ಬದಿಂದ ದೀಪಾವಳಿ ಹಬ್ಬ ಮುಗಿಯುವವರೆಗೂ ಬೀದಿಬದಿಯ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕು. ಯಾವುದೇ ಕಾರಣಕ್ಕೂ ಅವರನ್ನು ಬೆರೆಕಡೆ ಸ್ಥಳಾಂತರಿಸಬಾರದು ಎಂಬ ಬೇಡಿಕೆಗಳನ್ನು ಮುಂದಿಡಲಾಯಿತು.
ಮಹಾನಗರದ ಝುನಲ್ ಬೀದಿವ್ಯಾಪಾರಿಗಳ ಮಾರುಕಟ್ಟೆಗಳು ಅಭಿವೃದ್ದಿ ಪಡಿಸುವವರೆಗೂ ಹಾಗೂ ಹಬ್ಬಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಮಾತ್ರ ಬೀದಿವ್ಯಾಪಾರಿಗಳನ್ನು ತಾತ್ಕಾಲಿಕವಾಗಿ ಚೌಪಾಡಿಯಲ್ಲಿನ ಪ್ರದೇಶಕ್ಕೆ ಸ್ಥಳಾಂತರಿಸಬೇಕು ಎಂಬ ಪ್ರಮುಖ ಬೇಡಿಕೆಯ ಮನವಿ ಸಲ್ಲಿಸಲಾಗುವುದು ಎಂದು ಎಸ್.ಸೂರ್ಯವಂಶಿ ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.