ಲೋಕಾಪುರ: ಪಾಲಕರು ಹಾಗೂ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರ ಭವಿಷ್ಯ ರೂಪಿಸಬೇಕು ಎಂದು ಸಿಆರ್‌ಪಿ ಕೆ.ಎಲ್.ಮಾಳೇದ ಹೇಳಿದರು. ಪಟ್ಟಣದ ಸರ್ಕಾರಿ ಮಾದರಿ ಶಾಲೆಯ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಕರು ಜ್ಞಾನ ದಾಸೋಹ ಕಾರ್ಯಕ್ಕೆ ಮುಂದಾಗಬೇಕು, ಆಪತ್ತುಗಳನ್ನು ಎದುರಿಸಿ ಮಕ್ಕಳ ಶ್ರೇಯಸ್ಸಿಗಾಗಿ ಶ್ರಮಿಸಬೇಕು. ದೇಶ, ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಿಆರ್‌ಪಿ ವ್ಹಿ.ಆರ್.ಕಟ್ಟಿಮನಿ, ಮುಖ್ಯ ಶಿಕ್ಷಕ ಬಸವರಾಜ ಗಂಗಣ್ಣವರ, ಎಚ್.ಎಫ್.ಖವಾಸ್ತ, ಬಿ.ಆರ್.ಮಂಟೂರ, ಜಿ.ಐ.ಗೊಲಶೆಟ್ಟಿ, ಸವಿತಾ ಪುರಶೆಟ್ಟಿ, ಜಬೀನಾ ಪಟ್ಟಲಗಿ ಇತರರು ಇದ್ದರು