ಏಕಾಏಕಿ ಒಕ್ಕಲೆಬ್ಬಿಸದೇ 36 ಬಡ ಕುಟುಂಬಗಳಿಗೆ ಸೂರು ಕಲ್ಪಿಸಿ

KannadaprabhaNewsNetwork |  
Published : Sep 16, 2025, 12:03 AM IST
15ಕೆಡಿವಿಜಿ1, 2-ದಾವಣಗೆರೆ ಹೊರ ವಲಯದ ಶಿರಮಗೊಂಡನಹಳ್ಳಿ ರಿ.ಸ.ನಂ.62ರ ವ್ಯಾಪ್ತಿಯ ಎಸ್.ಎ.ರವೀಂದ್ರನಾಥ ನಗರದ 36 ಕುಟುಂಬಗಳನ್ನು ಒಕ್ಕಲೆಬ್ಬಿಸದಂತೆ ಜಿಲ್ಲಾ ಪ್ರಗತಿ ಪರ ಸಂಘಟನೆಗಳ ಒಕ್ಕೂಟದಿಂದ ತಾಲೂಕು ಆಡಳಿತಕ್ಕೆ ಸೋಮವಾರ ಮನವಿ ಅರ್ಪಿಸಲಾಯಿತು. | Kannada Prabha

ಸಾರಾಂಶ

ದಾವಣಗೆರೆ ಹೊರವಲಯದ ಶಿರಮಗೊಂಡನಹಳ್ಳಿ ಗ್ರಾಮದ ರಿ.ಸ.ನಂ.62ರ ಎಸ್.ಎ.ರವೀಂದ್ರನಾಥ ನಗರದಲ್ಲಿ 2 ದಶಕದಿಂದ ವಾಸಿಸುತ್ತಿರುವ 36 ಕುಟುಂಬಗಳಿಗೆ ನಿವೇಶನ ಅಥವಾ ಮನೆ ಹಾಗೂ ಮೂಲಸೌಕರ್ಯ ಕಲ್ಪಿಸುವಂತೆ ಸೋಮವಾರ ನಗರದ ತಾಲೂಕು ಕಚೇರಿ ಎದುರು ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟಿಸಿ, ಸರ್ಕಾರಕ್ಕೆ ಒತ್ತಾಯಿಸಲಾಯಿತು.

- ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟ ಒತ್ತಾಯ ।

- ನಿವೇಶನ ಅಥವಾ ಮನೆ ನೀಡಿ ಮೂಲಸೌಕರ್ಯ ಕಲ್ಪಿಸಲು ಆಗ್ರಹ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಹೊರವಲಯದ ಶಿರಮಗೊಂಡನಹಳ್ಳಿ ಗ್ರಾಮದ ರಿ.ಸ.ನಂ.62ರ ಎಸ್.ಎ.ರವೀಂದ್ರನಾಥ ನಗರದಲ್ಲಿ 2 ದಶಕದಿಂದ ವಾಸಿಸುತ್ತಿರುವ 36 ಕುಟುಂಬಗಳಿಗೆ ನಿವೇಶನ ಅಥವಾ ಮನೆ ಹಾಗೂ ಮೂಲಸೌಕರ್ಯ ಕಲ್ಪಿಸುವಂತೆ ಸೋಮವಾರ ನಗರದ ತಾಲೂಕು ಕಚೇರಿ ಎದುರು ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟಿಸಿ, ಸರ್ಕಾರಕ್ಕೆ ಒತ್ತಾಯಿಸಲಾಯಿತು.

ಸಂಘಟನೆ ಮುಖಂಡರು ಮಾತನಾಡಿ, ನ್ಯಾಯಾಲಯ ಆದೇಶದ ಮೇರೆಗೆ ಎಸ್.ಎ.ರವೀಂದ್ರನಾಥ ನಗರದ 36 ಕುಟುಂಬಗಳಿಗೆ ತಾಲೂಕು ಕಚೇರಿಯಿಂದ ನೋಟಿಸ್ ಜಾರಿಗೊಂಡಿದೆ. ನೋಟೀಸ್‌ನಿಂದಾಗಿ ಅಲ್ಲಿ ಜೀವನ ನಡೆಸುತ್ತಿದ್ದ 36 ಕುಟುಂಬಗಳೂ ಬೀದಿ ಪಾಲಾಗುವ ಪರಿಸ್ಥಿತಿ ನಿರ್ಮಾಣ‍ವಾಗಿದೆ ಎಂದು ದೂರಿದರು.

ಸೂರು-ಸೌಕರ್ಯ ಕಲ್ಪಿಸಲಿ:

ಗುಡಿಸಲು, ತಗಡು, ಸಿಮೆಂಟ್ ಶೀಟುಗಳನ್ನು ಬಳಸಿ ಸಣ್ಣದಾಗಿ ಸೂರು ಮಾಡಿಕೊಂಡು ಬದುಕುತ್ತಿದ್ದ 36 ಕುಟುಂಬಗಳನ್ನು ಅಲ್ಲಿಂದ ಒಕ್ಕಲೆಬ್ಬಿಸಲಾಗುತ್ತಿದೆ. ಹೀಗಾದರೆ ಮಕ್ಕಳು, ಮಹಿಳೆಯರು, ವಯೋವೃದ್ಧರು, ಯುವತಿಯರು ಬೀದಿಪಾಲಾಗುವ ಪರಿಸ್ಥಿತಿ ಬಂದೊದಗಲಿದೆ. ಕೂಲಿ, ದಿನಗೂಲಿ ಮಾಡಿ ಬಾಳು ಕಟ್ಟಿಕೊಂಡ ಅಸಂಘಟಿತ ವಲಯದ ಈ ಎಲ್ಲ ಕಾರ್ಮಿಕ ಕುಟುಂಬಗಳಿಗೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಮಾನವೀಯ ದೃಷ್ಟಿಯಿಂದ ಸ್ಪಂದಿಸಿ, ಸೂರು-ಸೌಕರ್ಯ ಕಲ್ಪಿಸಲಿ ಎಂದು ಆಗ್ರಹಿಸಿದರು.

ನ್ಯಾಯಾಲಯ ಆದೇಶ, ತಾಲೂಕು ಕಚೇರಿಯ ನೋಟಿಸ್‌ನಿಂದಾಗಿ ಅನಕ್ಷರಸ್ಥರಾದ ಬಡ ಅಸಂಘಟಿತ ಕಾರ್ಮಿಕ ಕುಟುಂಬಗಳಿಗೆ ದಿಕ್ಕೇ ತೋಚದಂತಾಗಿದೆ. ನ್ಯಾಯಾಲಯದ ಆದೇಶ ನಾವು ಗೌರವಿಸುತ್ತೇವೆ. ಆದರೆ, ಸಂತ್ರಸ್ಥರಾಗುವ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆಯಾಗಿ ನಿವೇಶನ, ಮನೆ, ಮೂಲ ಸೌಕರ್ಯಗಳನ್ನು ತಾಲೂಕು ಆಡಳಿತ ಶೀಘ್ರ ಕಲ್ಪಿಸಿಕೊಡಬೇಕು ಎಂದು ತಾಲೂಕು ಆಡಳಿತ ಹಾಗೂ ಮಹಾನಗರ ಪಾಲಿಕೆ ಆಯುಕ್ತರಿಗೆ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರ ನೇತೃತ್ವದಲ್ಲಿ ಬಡ ಕುಟುಂಬಗಳ ಸದಸ್ಯರು ಮನವಿ ಅರ್ಪಿಸಿದರು.

ಪ್ರತಿಭಟನೆಯಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು, ಸ್ಲಂ ಜನರ ಸಂಘಟನೆ ಕರ್ನಾಟಕದ ಎಂ.ಕರಿಬಸಪ್ಪ, ಜಬೀನಾ ಖಾನಂ, ಎಎಫ್ಐಡಬ್ಲ್ಯು ಜಿಲ್ಲಾಧ್ಯಕ್ಷೆ ಸರೋಜ, ಎಐವೈಎಫ್‌ ತಿಪ್ಪೇಶ, ಸಿಪಿಐ ಮುಖಂಡ ಯಲ್ಲಪ್ಪ, ಜ್ಯೋತಿ, ರುದ್ರಮ್ಮ, ಜಯಮ್ಮ, ನೇತ್ರಾವತಿ, ಯಶೋಧ, ಶಿರೀನ್‌ ಬಾನು, ನೂರ್‌ ಫಾತಿಮಾ, ಹಸೀನಾ, ಗೀತಾ, ಜಯಮ್ಮ, ಯಶೋಧ, ಮಂಜಮ್ಮ, ಎ.ತಿಪ್ಪೇಶಿ ಆವರಗೆರೆ, ಜ್ಯೋತಿ ಇತರರು ಇದ್ದರು.

- - -

(ಕೋಟ್‌) ಅಸಂಘಟಿತ ಕಾರ್ಮಿಕರಾದ 36 ಕುಟುಂಬಗಳಿಗೂ ಎಸ್.ಎ.ರವೀಂದ್ರನಾಥ ನಗರದ ಅದೇ ಜಾಗದಲ್ಲೇ ವಾಸಿಸಲು ಅವಕಾಶ ಮಾಡಿಕೊಡಬೇಕು. ಮೂಲ ಸೌಲಲಭ್ಯಗಳನ್ನು ಕಲ್ಪಿಸಿ, ಜಾಗದ ಹಕ್ಕುಪತ್ರವನ್ನು ನೀಡಬೇಕು. ನ್ಯಾಯಾಲಯದ ಆದೇಶದಂತೆ ಜಾಗ ತೆರವಿಗೆ ಕುಟುಂಬಗಳು ಸಿದ್ಧವಿದ್ದು, ಈ ಕುಟುಂಬಗಳಿಗೆ ಪರ್ಯಾಯವಾಗಿ ನಿವೇಶನ-ಮನೆ ನೀಡಿ, ಮೂಲ ಸೌಕರ್ಯ ಕಲ್ಪಿಸಲಿ. ಬಳಿಕವೇ ಅಲ್ಲಿಂದ ತೆರವು ಮಾಡಿಸಲಿ.

- ಪ್ರಗತಿಪರ ಸಂಘಟನೆಗಳ ಮುಖಂಡರು, ದಾವಣಗೆರೆ.

- - -

-15ಕೆಡಿವಿಜಿ1, 2.ಜೆಪಿಜಿ:

ದಾವಣಗೆರೆ ಹೊರವಲಯದ ಶಿರಮಗೊಂಡನಹಳ್ಳಿ ರಿ.ಸ.ನಂ.62ರ ವ್ಯಾಪ್ತಿಯ ಎಸ್.ಎ.ರವೀಂದ್ರನಾಥ ನಗರದ 36 ಕುಟುಂಬಗಳನ್ನು ಒಕ್ಕಲೆಬ್ಬಿಸದಂತೆ ಹಾಗೂ ಶೀಘ್ರ ಪರ್ಯಾಯವಾಗಿ ನಿವೇಶನ/ಮನೆ, ಸೌಲಭ್ಯಗಳನ್ನು ಕಲ್ಪಿಸಲು ಆಗ್ರಹಿಸಿ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ತಾಲೂಕು ಆಡಳಿತಕ್ಕೆ ಸೋಮವಾರ ಮನವಿ ಅರ್ಪಿಸಲಾಯಿತು.

PREV

Recommended Stories

ದ.ಕ.ದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಚಾಲನೆ
ಕದ್ರಿ ದೇವಸ್ಥಾನ ಪ್ರಾಂಗಣದಲ್ಲಿ ‘ಮುದ್ದು ಕೃಷ್ಣ’ ವೇಷ ಸ್ಪರ್ಧೆ