ಜಿ. ಸೋಮಶೇಖರ
2026ರಲ್ಲಿಯೂ ಈ ಪರಂಪರೆ ಮುಂದುವರಿದಿದ್ದು, ಇಂದು ಪದವಿಪೂರ್ವ ಕಾಲೇಜಿನ ಅರ್ಚನಾ ಡಿ.ಎಂ. ಮತ್ತು ಸಂಗೀತಾ 600ಕ್ಕೆ 598 ಅಂಕಗಳನ್ನು ಪಡೆದು ರಾಜ್ಯದ ಕಲಾ ವಿಭಾಗದಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಇದರ ಜೊತೆಯಲ್ಲಿ ಒಟ್ಟು 25 ವಿದ್ಯಾರ್ಥಿಗಳು ಕಲಾ ವಿಭಾಗದಲ್ಲಿ ಮೊದಲ 10 ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಇದಲ್ಲದೇ ವಾಣಿಜ್ಯ ವಿಭಾಗದಲ್ಲಿ ಇಬ್ಬರು ಹಾಗೂ ವಿಜ್ಞಾನ ವಿಭಾಗದಲ್ಲೂ ಓರ್ವ ವಿದ್ಯಾರ್ಥಿನಿ ರ‍್ಯಾಂಕ್ ಪಡೆದಿದ್ದಾರೆ.
2015ರಿಂದ 2026ರ ವರೆಗೆ ಈ ಕಾಲೇಜಿನ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ರ‍್ಯಾಂಕ್ ಪಡೆದಿದ್ದಾರೆ. ಈ ಮೂಲಕ ರಾಜ್ಯದ ಗಮನ ಸೆಳೆದಿದ್ದು, ದ್ವಿತೀಯ ಪಿಯುಸಿ ರ‍್ಯಾಂಕ್ ಪಟ್ಟಿಯಲ್ಲಿ ಕಾಯಂ ಸ್ಥಾನ ಪಡೆದುಕೊಂಡಿದೆ.ಜಿ.ಕೆ. ಸಹನಾ, ಸಾಕ್ಷಿ 5ನೇ ರ‍್ಯಾಂಕ್, ದೀಪಾ, ಗೋದಾವರಿ, ಹರ್ಷಿಯಾ, ಎಂ.ಎಸ್. ರಕ್ಷಿತಾ 6ನೇ ರ‍್ಯಾಂಕ್, ಆರ್. ಸ್ವಾತಿ 7ನೇ ರ‍್ಯಾಂಕ್, ಎಸ್. ಬಿಂದು, ನಯನಾ ಎಚ್.ಕೆ., ನಿಕೇತನ 8ನೇ ರ‍್ಯಾಂಕ್, ಸೌಮ್ಯಾ, ಅಂದಪ್ಪ, ಭಾಗ್ಯಶ್ರೀ, ಕೀರ್ತಿ, ಮೋಟಮ್ಮನವರ ಸಂಜನಾ, ನಿರ್ಮಲಾ, ಪಿ.ವಿ. ಶ್ರೀನಿಧಿ, ವಿಶಾಲ ಲಮಾಣಿ 9ನೇ ರ‍್ಯಾಂಕ್, ಕವಿತಾ ಅಂಗಡಿ, ಸುಮಿತ್ರಾ, ಮಹಾಂತಗೌಡ 10ನೇ ರ‍್ಯಾಂಕ್ ಗಳಿಸಿದ್ದಾರೆ.
ಖುಷಿ ತಂದಿದೆ: ಇಂದು ಪದವಿಪೂರ್ವ ಮಹಾವಿದ್ಯಾಲಯ ಕಳೆದ 11 ವರ್ಷಗಳಿಂದ ಸತತ ಮೊದಲನೇ ರ‍್ಯಾಂಕ್ ಪಡೆಯುತ್ತಿದೆ. ಈ ಸಾಧನೆ ನಮಗೆ ಉತ್ತೇಜನ ನೀಡಿದೆ. ಈ ವರ್ಷವೂ ರ‍್ಯಾಂಕ್ ನಿರೀಕ್ಷೆ ಇಟ್ಟುಕೊಂಡಿದ್ದೆವು. ಅದರಂತೆ ಫಲಿತಾಂಶ ಬಂದಿರುವುದು ಖುಷಿ ತಂದಿದೆ. ಇದಕ್ಕೆ ಕಾಲೇಜಿನಲ್ಲಿನ ಅಧ್ಯಾಪಕ ವರ್ಗದವರ ಟೀಮ್ ವರ್ಕ್ ಕಾರಣ ಎಂದು ಇಂದು ಪದವಿ ಪೂರ್ವ ಕಾಲೇಜು ಆಡಳಿತಾಧಿಕಾರಿ ಎಚ್.ಎನ್. ವೀರಭದ್ರಪ್ಪ ಹೇಳುತ್ತಾರೆ.