ಉಡುಪಿ ನೂತನ ಡಾ. ಟಿಎಂಎ ಪೈ ಆಸ್ಪತ್ರೆಗೆ ಸಾರ್ವಜನಿಕರ ಮೆಚ್ಚುಗೆ

KannadaprabhaNewsNetwork |  
Published : May 25, 2026, 02:45 AM IST
24ಆಸ್ಪತ್ರೆ | Kannada Prabha

ಸಾರಾಂಶ

ಉಡುಪಿಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸ್ವಾಗತ ಗೋಪುರದ ಬಳಿಯ ಹೊಸ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಜೂ. 1ರಿಂದ ಕಾರ್ಯಾಚರಿಸಲಿರುವ ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆಗೆ ಸಾರ್ವಜನಿಕ ಮುಕ್ತ ಭೇಟಿ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು, ಇದಕ್ಕೆ ಸಾರ್ವಜನಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಉಡುಪಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸ್ವಾಗತ ಗೋಪುರದ ಬಳಿಯ ಹೊಸ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಜೂ. 1ರಿಂದ ಕಾರ್ಯಾಚರಿಸಲಿರುವ ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆಗೆ ಸಾರ್ವಜನಿಕ ಮುಕ್ತ ಭೇಟಿ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು, ಇದಕ್ಕೆ ಸಾರ್ವಜನಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಕಳೆದ 2 ದಿನಗಳಲ್ಲಿ1000 ಕ್ಕೂ ಹೆಚ್ಚು ಜನರು ಹೊಸ ಆಸ್ಪತ್ರೆಗೆ ಭೇಟಿ ನೀಡಿ ಸುಧಾರಿತ ಮೂಲಸೌಕರ್ಯ, ಆಧುನಿಕ ಸೌಲಭ್ಯಗಳು ಮತ್ತು ರೋಗಿ ಸ್ನೇಹಿ ವಾತಾವರಣವನ್ನು ಮೆಚ್ಚಿಕೊಂಡರು. ಉಡುಪಿಯ ಜನರಿಗೆ ಮೆಟ್ರೋನಗರ ಮಟ್ಟದ ಆರೋಗ್ಯ ಸೌಲಭ್ಯಗಳು ಮತ್ತು ಸುಧಾರಿತ ವೈದ್ಯಕೀಯ ಸೇವೆಗಳು ಈಗ ಮನೆಗೆ ಹತ್ತಿರವಾಗಿ ಸಿಗುತ್ತಿದೆ ಎಂದು ಅನೇಕ ಸಂದರ್ಶಕರು ವ್ಯಕ್ತಪಡಿಸಿದರು.ಉಡುಪಿಯ ಡಾ. ಟಿ.ಎಂ.ಎ. ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಮತ್ತು ಆಡಳಿತ ತಂಡದ ವೈದ್ಯಕೀಯ ಅಧೀಕ್ಷಕ ಡಾ. ಶಶಿಕಿರಣ್ ಉಮಾಕಾಂತ್, ಸಾರ್ವಜನಿಕರಿಂದ ಬಂದ ಪ್ರೋತ್ಸಾಹದಾಯಕ ಪ್ರತಿಕ್ರಿಯೆ ಆಸ್ಪತ್ರೆ ತಂಡಕ್ಕೆ ಆಸ್ಪತ್ರೆ ತಂಡಕ್ಕೆ ಹೆಚ್ಚು ಉತ್ತೇಜನಕಾರಿ ಮತ್ತು ಪ್ರೇರಕವಾಗಿದೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಂದಾಪುರ: ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ 12ನೇ ಶಾಖೆ ಉದ್ಘಾಟನೆ
ಕಾನೂನು ಅರಿವು ಅಗತ್ಯ: ಮುಕ್ತಾಬಾಯಿ