ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕುಡಿಯುವ ನೀರು ರಸ್ತೆ ಚರಂಡಿ ಹಾಗೂ ಒಳ ಚರಂಡಿಗಳ ಅಭಿವೃದ್ಧಿ ಕಾಮಗಾರಿಗಳ ವಿಳಂಭವಾಗಿದ್ದು, ತ್ವರಿತವಾಗಿ ಕಾಮಗಾರಿ ನಡೆಸುವ ಕುರಿತು ಸದಸ್ಯರು ಚರ್ಚೆ ನಡೆಸಿ ಒತ್ತಾಯಿಸಿದರು.
ಪೌರ ಕಾರ್ಮಿಕರು ಹಾಗೂ ನೀರುಗಂಟಿಗಳಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಅವರಿಗೆ ಸರಿಯಾಗಿ ವೇತನ ನೀಡದಿರುವ ಬಗ್ಗೆ ಪೌರ ಕಾರ್ಮಿಕರು ಗುತ್ತಿಗೆದಾರರ ವಿರುದ್ಧ ದೂರಿದ್ದಾರೆ. ಪುರಸಭೆ ಮುಖ್ಯಾಧಿಕಾರಿಗಳು ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಪುರಸಭಾ ಸದಸ್ಯ ಎಸ್. ಪ್ರಕಾಶ್ ಒತ್ತಾಯಿಸಿದರು.ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ ಕೆಲವು ವಾರ್ಡ್‌ಗಳಲ್ಲಿ ಜಾಗದ ಸಮಸ್ಯೆ ಇದ್ದು, ತಮ್ಮ ವಾರ್ಡ್ ನಲ್ಲಿ ಜಾಗವಿದ್ದರೆ ಅಲ್ಲಿನ ಸದಸ್ಯರ ಜೊತೆಗೂಡಿ ಅದನ್ನು ಗುರುತಿಸಿ ಅಂಗನವಾಡಿ ನಿರ್ಮಾಣಕ್ಕೆ ಜಾಗ ನೀಡಲು ಮುಂದಾಗಬೇಕು. ಜೊತೆಗೆ ಪಟ್ಟಣ ಹಾಗೂ ಗಂಜಾಂನ ಸ್ಮಶಾನ ಅಭಿವೃದ್ಧಿಗೆ ಈಗಾಗಲೇ ಹಣ ಬಿಡುಗಡೆಯಾಗಿದ್ದರೂ ಕಾಮಗಾರಿಗಳು ವಿಳಂಭವಾಗಿ ನಡೆಯುತ್ತಿರುವುದರಿಂದ ಅವುಗಳನ್ನು ತ್ವರಿತವಾಗಿ ನಡೆಸುವಂತೆ ತಾಕೀತು ಮಾಡಿದರು.
ಈ ಸಭೆಯು ಆಡಳಿತ ಮಂಡಳಿಯ ಐದು ವರ್ಷಗಳ ಅವಧಿಯ ಕೊನೆ ಸಭೆ ಇದಾಗಿತ್ತು. ನಂತರದಲ್ಲಿ ಅಧ್ಯಕ್ಷರು ಸದಸ್ಯರನ್ನು ಪುರಸಭೆ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿಯಿಂದ ಅಭಿನಂದಿಸಿ ಗೌರವಿಸಲಾಯಿತು.