ಆಧಾರ್‌ಕಾರ್ಡ್ ಮಾಡಿಸಲು ಸಾರ್ವಜನಿಕರ ಪರದಾಟ

KannadaprabhaNewsNetwork |  
Published : Sep 26, 2026, 01:30 AM IST
ಪೋಟೊ ಕ್ಯಾಪ್ಸನ್: ಡಂಬಳ ಗ್ರಾಮ ಪಂಚಾಯತಿ | Kannada Prabha

ಸಾರಾಂಶ

ಸರ್ಕಾರದ ಆದೇಶದ ಪ್ರಕಾರ ಡಂಬಳ ಹೋಬಳಿಯ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಆಧಾ‌ರ್ ನೋಂದಣಿ ಕೇಂದ್ರ ಪ್ರಾರಂಭಿಸಬೇಕು. ಆದರೆ ಡಂಬಳ ಹೋಬಳಿಯ ಗ್ರಾಪಂಗಳಲ್ಲಿ ಆಧಾರ್‌ ಕೇಂದ್ರಗಳು ಇಲ್ಲದೆ ಇರುವ ಕಾರಣ ತಿದ್ದುಪಡಿ ಮತ್ತು ಹೊಸ ಆಧಾರ್‌ಕಾರ್ಡ್ ಮಾಡಿಸಲು ಸಾರ್ವಜನಿಕರು ಪರದಾಡುವಂತಾಗಿದೆ.

ಡಂಬಳ ಹೋಬಳಿಯ ಗ್ರಾಮ ಪಂಚಾಯತಿಗಳಲ್ಲಿ ಆಧಾರ್ ಕೇಂದ್ರ ಪ್ರಾರಂಭಿಸಲು ಒತ್ತಾಯ

ರಿಯಾಜಅಹ್ಮದ ಎಂ ದೊಡ್ಡಮನಿ

ಕನ್ನಡಪ್ರಭ ವಾರ್ತೆ ಡಂಬಳ

ಸರ್ಕಾರದ ಆದೇಶದ ಪ್ರಕಾರ ಡಂಬಳ ಹೋಬಳಿಯ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಆಧಾ‌ರ್ ನೋಂದಣಿ ಕೇಂದ್ರ ಪ್ರಾರಂಭಿಸಬೇಕು. ಆದರೆ ಡಂಬಳ ಹೋಬಳಿಯ ಗ್ರಾಪಂಗಳಲ್ಲಿ ಆಧಾರ್‌ ಕೇಂದ್ರಗಳು ಇಲ್ಲದೆ ಇರುವ ಕಾರಣ ತಿದ್ದುಪಡಿ ಮತ್ತು ಹೊಸ ಆಧಾರ್‌ಕಾರ್ಡ್ ಮಾಡಿಸಲು ಸಾರ್ವಜನಿಕರು ಪರದಾಡುವಂತಾಗಿದೆ.

ಡಂಬಳ ಹೋಬಳಿಯ 26 ಗ್ರಾಮದವರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಆಧಾರ್‌ಸೇವೆ ಪಡೆಯುವುದು ಸಮಸ್ಯೆಯಾಗಿದೆ. 20ರಿಂದ 30ಕಿಮೀ ದೂರದಿಂದ ವಯಸ್ಕರು, ಮಹಿಳೆಯರು, ಮಕ್ಕಳು ಪ್ರತಿದಿನ ಮುಂಡರಗಿ ತಾಲೂಕು ಕೇಂದ್ರಕ್ಕೆ ಹೋಗುವುದು ಕಷ್ಟವಾಗಿ ಪರಿಣಮಿಸಿದೆ. ಡಂಬಳ ಹೋಬಳಿಯ ಪ್ರತಿ ಗ್ರಾಪಂಗಳಲ್ಲಿ ಆಧಾರ್ ಕೇಂದ್ರ ನಿರ್ಮಾಣ ಮಾಡಿ ಪ್ರತ್ಯೇಕ ಆಪರೇಟರ್‌ ನೇಮಿಸಿ ಅಂಗವಿಕಲರಿಗೆ, ವಯಸ್ಕರು ಮತ್ತು ಮಹಿಳೆಯರಿಗೆ ಅನುಕೂಲ ಮಾಡಿಕೊಡಬೇಕೆಂದು ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಇತ್ತೀಚೆಗೆ ರಾಜ್ಯ ಸರ್ಕಾರ ಪಡಿತರ ಚೀಟಿಯಲ್ಲಿನ ಎಲ್ಲ ಸದಸ್ಯರು ಈಕೆವೈಸಿ ಮಾಡಿಸುವುದು ಕಡ್ಡಾಯ ಮಾಡಿರುವುದರಿಂದ ಬರಗಾಲಕ್ಕೆ ತತ್ತರಿಸಿ ಬೇರೆ ಪ್ರದೇಶಗಳಿಗೆ ವಲಸೆ ಹೋಗಿರುವವರು ತಂಡೋಪ ತಂಡವಾಗಿ ಗ್ರಾಮಗಳಿಗೆ ಆಗಮಿಸುತ್ತಿದ್ದು, ಆಧಾರ್‌ಕಾರ್ಡ್‌ಗಳು ಹತ್ತು ವರ್ಷಗಳಾದರೂ ಈಕೆವೈಸಿ ಮಾಡಿಸದ ಕಾರಣ ಅವರ ಕೈಬೆರಳು ಗುರುತು, ಕಣ್ಣಿನ ಪಟಲದ ಗುರುತು, ಪೋನ್‌ ಸಂಖ್ಯೆ ಸೇರ್ಪಡೆ ಮತ್ತು ಪಡಿತರ ಈಕೆವೈಸಿ ಮಾಡಿಸಲು ಸಾಧ್ಯವಾಗುತ್ತಿಲ್ಲ. ಪಡಿತರ ವಿತರಕರು ಆಧಾರ್‌ ನವೀಕರಣ ಮಾಡಿದರೆ ಮಾತ್ರ ಈಕೆವೈಸಿ ಸಾಧ್ಯವಾಗುತ್ತದೆ ಎಂದಾಗ ಪಾಲಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬೆಳಗಿನ ಜಾವ ಆಧಾರ್‌ ಸೆಂಟರ್‌ ಹೋಗಿ ಕೆಲಸ ಆಗದೆ ಹಿಂದಿರುಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲೂಕಿನ ತಹಸೀಲ್ದಾರ್‌ ಕಚೇರಿಯಲ್ಲಿ ಇರುವ ಕೇಂದ್ರದಲ್ಲಿ ದಿನಕ್ಕೆ 20ರಿಂದ 25 ಜನರಿಗೆ ಮಾತ್ರ ಆಧಾರ್‌ಸೇವೆ ಪಡೆಯಲು ಅವಕಾಶವಿದೆ. ಆ ಹಿನ್ನೆಲೆ ಸರಿಯಾದ ಸಮಯಕ್ಕೆ ಮತ್ತು ರಾತ್ರಿ ಗ್ರಾಮಗಳಿಗೆ ತೆರಳಲು ಬಸ್‌ ವ್ಯವಸ್ಥೆ ಇಲ್ಲದೆ ಇರುವ ಕಾರಣ ಡಂಬಳ ಹೋಬಳಿಯ ಗ್ರಾಮಸ್ಥರು ಪರಿತಪಿಸುವಂತಾಗಿದ್ದು ತುರ್ತಾಗಿ ಡಂಬಳ ಹೋಬಳಿಯ ಪ್ರತಿ ಗ್ರಾಪಂ ಮತ್ತು ಅಂಚೆ ಕಚೇರಿಗಳಲ್ಲಿ ಗ್ರಾಮದ ನಾಡ ಕಚೇರಿಯಲ್ಲಿ ಆಧಾರ್‌ ಸೇವಾ ಕೇಂದ್ರವನ್ನು ತೆರೆಯಲು ಮುಂದಾಗಬೇಕು ಎಂದು ಆಗ್ರಹಿಸುತ್ತಾರೆ ಡಂಬಳ ಹೋಬಳಿಯ ಗ್ರಾಮಸ್ಥರು.ತಿದ್ದುಪಡಿ, ಹೊಸ ಆಧಾರ್‌ ಕಾರ್ಡ ಮಾಡಿಸಲು ಡಂಬಳ ಹೋಬಳಿಯ ಪ್ರತಿ ಗ್ರಾಪಂಗಳಲ್ಲಿ ಅಥವಾ ಡಂಬಳ ಗ್ರಾಮದ ಅಂಚೆ ಕಚೇರಿಯಲ್ಲಿ, ನಾಡ ಕಾರ್ಯಾಲಯದಲ್ಲಿ ತುರ್ತಾಗಿ ಆಧಾರ ಕೇಂದ್ರವನ್ನು ಪ್ರಾರಂಭಿಸಿ ಡಂಬಳ ಹೋಬಳಿಯ 26 ಗ್ರಾಮದ ಗ್ರಾಮಸ್ಥರಿಗೆ ಸರಕಾರ ಅನುಕೂಲ ಮಾಡಿಕೊಡಬೇಕು ಎನ್ನುತ್ತಾರೆ ವಿವಿಧ ಗ್ರಾಮಗಳ ಗ್ರಾಮಸ್ಥರಾದ ಅಶೋಕ, ನೀಲವ್ವ, ರಮೇಶ ಕಲ್ಲಿನಮನಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಂಡಿತ್ ಮತ್ತು ಮುಖರ್ಜಿ ಕನಸು ನನಸಾಗಿದೆ : ಕುತ್ಯಾರು ನವೀನ್ ಶೆಟ್ಟಿ
ಮಹಿಳಾ ಕುಸ್ತಿಯಲ್ಲಿ ಮೂರು ಪದಕ