ಭಾರತೀಯ ಸೇನೆಗೆ ಜಯ ಸಿಗಲೆಂದು ಪೂಜೆ

KannadaprabhaNewsNetwork |  
Published : May 02, 2025, 12:13 AM IST
1ಎಚ್ಎಸ್ಎನ್8 : ಪಹಲ್ಗಾಮ್‌ನಲ್ಲಿ ಮೃತಪಟ್ಟವರಿಗೆ ಸದ್ಗತಿದೊರೆಯಲಿ ಹಾಗೂ ಭಾರತದ ಕಾರ್ಯಾಚರಣೆ ಯಶಸ್ವಿಯಾಗಲಿ ಎಂದು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. | Kannada Prabha

ಸಾರಾಂಶ

ಪ್ರವಾಸಿಗರ ಮೇಲೆ ನಡೆದಿರುವ ದಾರುಣ ಹತ್ಯೆಯಿಂದ ಇಡೀ ರಾಜ್ಯ ಪ್ರವಾಸಿಗರಿಂದ ದೂರವೇ ಉಳಿಯಲಿದೆ. ಇದರಿಂದ ಪ್ರವಾಸೋದ್ಯಮ ನಂಬಿ ಜೀವಿಸುತ್ತಿರುವವರ ಒಂದೊತ್ತಿನ ಊಟಕ್ಕೂ ಸಮಸ್ಯೆಯಾಗಲಿದೆ ಆದರೂ ಸ್ಥಳೀಯರು ಉಗ್ರರಿಗೆ ಸಹಾಯ ಮಾಡುತ್ತಾರೆಂದರೆ ಇವರ ಧರ್ಮದ ಮೇಲಿನ ಧರ್ಮಾಂಧತೆಯನ್ನು ಎತ್ತಿ ಹಿಡಿಯುತ್ತಿದೆ. ಅತಿಯಾದ ಧರ್ಮಾಂದತೆ ಶಾಂತಿಯನ್ನು ಕದಡಲಿದೆ. ಸದ್ಯ ಕಾಶ್ಮೀರದಲ್ಲಿ ನಡೆಯುತ್ತಿರುವುದೇ ಇದೆ ಬೆಳವಣಿಗೆ. ಆದ್ದರಿಂದ ಈ ಬಾರಿ ಕೇಂದ್ರ ಸರ್ಕಾರ ಉಗ್ರಗಾಮಿ ಪೋಷಕರು ತಿರುಗಿ ನೋಡದಂತೆ ಪೆಟ್ಟು ನೀಡಬೇಕು ಎಂದು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಭಯೋತ್ಪಾದಕರಿಂದ ಪಹಲ್ಗಾಮ್‌ನಲ್ಲಿ ಮೃತಪಟ್ಟ ೨೬ ಪ್ರವಾಸಿಗರ ಆತ್ಮಕ್ಕೆ ಶಾಂತಿ ದೊರಕಲಿ ಹಾಗೂ ಭಯೋತ್ಪಾದಕರ ವಿರುದ್ಧ ಭಾರತ ನಡೆಸಲಿರುವ ಕಾರ್ಯಾಚರಣೆ ಯಶಸ್ವಿಯಾಗಲಿ ಎಂದು ಪಟ್ಟಣದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಸನಾತನ ಸೇವಾ ಟ್ರಸ್ಟ್ ಸದಸ್ಯರು ಗುರುವಾರ ಪೂಜೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಮುಖಂಡರು, ಜಮ್ಮು ಕಾಶ್ಮೀರದ ಜೀವನಾಡಿಯೇ ಪ್ರವಾಸೋದ್ಯಮ. ಆದರೆ, ಪ್ರವಾಸಿಗರ ಮೇಲೆ ನಡೆದಿರುವ ದಾರುಣ ಹತ್ಯೆಯಿಂದ ಇಡೀ ರಾಜ್ಯ ಪ್ರವಾಸಿಗರಿಂದ ದೂರವೇ ಉಳಿಯಲಿದೆ. ಇದರಿಂದ ಪ್ರವಾಸೋದ್ಯಮ ನಂಬಿ ಜೀವಿಸುತ್ತಿರುವವರ ಒಂದೊತ್ತಿನ ಊಟಕ್ಕೂ ಸಮಸ್ಯೆಯಾಗಲಿದೆ ಆದರೂ ಸ್ಥಳೀಯರು ಉಗ್ರರಿಗೆ ಸಹಾಯ ಮಾಡುತ್ತಾರೆಂದರೆ ಇವರ ಧರ್ಮದ ಮೇಲಿನ ಧರ್ಮಾಂಧತೆಯನ್ನು ಎತ್ತಿ ಹಿಡಿಯುತ್ತಿದೆ. ಅತಿಯಾದ ಧರ್ಮಾಂದತೆ ಶಾಂತಿಯನ್ನು ಕದಡಲಿದೆ. ಸದ್ಯ ಕಾಶ್ಮೀರದಲ್ಲಿ ನಡೆಯುತ್ತಿರುವುದೇ ಇದೆ ಬೆಳವಣಿಗೆ. ಆದ್ದರಿಂದ ಈ ಬಾರಿ ಕೇಂದ್ರ ಸರ್ಕಾರ ಉಗ್ರಗಾಮಿ ಪೋಷಕರು ತಿರುಗಿ ನೋಡದಂತೆ ಪೆಟ್ಟು ನೀಡಬೇಕು ಎಂದು ಒತ್ತಾಯಿಸಿದರು. ಹಾಗೂ ಜೀವ ಕಳೆದುಕೊಂಡವರಿಗೆ ಸದ್ಗತಿ ದೊರಕಲಿ ಎಂದು ಪ್ರಾರ್ಥಿಸಿಕೊಂಡರು. ಈ ವೇಳೆ ಮುಖಂಡರಾದ ಮಂಜುನಾಥ್ ಸಂಘಿ, ಹರೀಶ್ ಕರಿಡಿಗಾಲ, ರಘು ಚಂಪಕನಗರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!