ಕನ್ನಡಪ್ರಭ ವಾರ್ತೆ ಕೋಲಾರಡಿ.೨೧ ರಂದು ಕೋಲಾರ ಜಿಲ್ಲಾದ್ಯಾಂತ ೦-೫ ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನವನ್ನು ಹಮ್ಮಿಕೊಂಡಿದೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು. ನಗರದ ಕಚೇರಿಯಲ್ಲಿ ೨೦೨೫ನೇ ಸಾಲಿನ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮದ ಜಿಲ್ಲಾ ಮಟ್ಟದ ಟಾಸ್ಕ್‌ಪೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದರು.5 ವರ್ಷದೊಳಗಿನ ಮಕ್ಕಳಿಗೆ
ಲಸಿಕಾ ಕಾರ್ಯಕ್ರಮ ಬಗ್ಗೆ ಮಾಹಿತಿ ನೀಡಿದ ಆರೋಗ್ಯ ಇಲಾಖಾಧಿಕಾರಿಗಳು ಜಿಲ್ಲೆಯಲ್ಲಿ ಕಳೆದ ವರ್ಷ ಲಸಿಕಾ ಅಭಿಯಾನದಲ್ಲಿ ೧೦೧.೯ ಸಾಧನೆ ಮಾಡಲಾಗಿದೆ. ೨೦೨೫ನೇ ಸಾಲಿನಲ್ಲಿ ೦-೫ವರ್ಷದೊಳಗಿನ ೧,೬೪,೯೯೧ ಮಕ್ಕಳಿದ್ದು, ಇವರಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಇದಕ್ಕಾಗಿಯೆ ಜಿಲ್ಲೆಯಲ್ಲಿ ೭೪೯ ಬೂತ್‌ಗಳು, ೩೭ ಟ್ರಾನ್ಸಿಟ್ ಕೇಂದ್ರಗಳಿದ್ದು, ೩೦೬೪ ಲಸಿಕೆದಾರರನ್ನು ಹಾಗೂ ೧೬೪ ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದರು. ದೇಶ ಪೋಲಿಯೊ ಮುಕ್ತವಾಗಿದ್ದರೂ ಸಹ ಮುಂದೆಯೂ ಪ್ರಕರಣಗಳು ಮರುಕಳಿಸದಂತೆ ಮುಂಜಾಗ್ರತಾ ಕ್ರಮವಾಗಿ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು. ಸಭೆಯಲ್ಲಿ ಜಿಪಂ ಸಿಇಓ ಪ್ರವೀಣ್ ಪಿ.ಬಾಗೇವಾಡಿ, ಎಡಿಸಿ ಮಂಗಳ, ಡಿಹೆಚ್‌ಓ ಶ್ರೀನಿವಾಸ್ ಇದ್ದರು.