ಪುನರ್‌ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವ

KannadaprabhaNewsNetwork |  
Published : Apr 06, 2026, 03:00 AM IST
ತಾಕೇರಿ ಗ್ರಾಮದಲ್ಲಿ ಶ್ರೀ ಕಾಲಬೈರೇಶ್ವರ ಮತ್ತು ಶ್ರೀ ವನದುರ್ಗಾದೇವಿ ಪುನರ್‌ ಪ್ರತಿಷ್ಠಾಪನಾ ಮತ್ತು ಅಷ್ಟಬಂಧ ಬ್ರಹ್ಮಕಲಶೋತ್ಸವ | Kannada Prabha

ಸಾರಾಂಶ

ತಾಕೇರಿ ಗ್ರಾಮದಲ್ಲಿ ಶೆಟ್ಟೇರ ಮನೆ ಕುಟುಂಬಸ್ಥರ ಶ್ರೀ ಕಾಲಬೈರೇಶ್ವರ ಮತ್ತು ಶ್ರೀ ವನದುರ್ಗಾದೇವಿಯ ಪುನರ್ ಪ್ರತಿಷ್ಠಾಪನಾ ಮತ್ತು ಅಷ್ಠಬಂಧ ಬ್ರಹ್ಮಕಲಶೋತ್ಸವ ಏ. ೭ ಮತ್ತು ೮ರಂದು ನಡೆಯಲಿದೆ ಎಂದು ಶ್ರೀ ಕಾಲಬೈರೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಎಸ್.ಎಂ. ಚಂಗಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ತಾಕೇರಿ ಗ್ರಾಮದಲ್ಲಿ ಶೆಟ್ಟೇರ ಮನೆ ಕುಟುಂಬಸ್ಥರ ಶ್ರೀ ಕಾಲಬೈರೇಶ್ವರ ಮತ್ತು ಶ್ರೀ ವನದುರ್ಗಾದೇವಿಯ ಪುನರ್ ಪ್ರತಿಷ್ಠಾಪನಾ ಮತ್ತು ಅಷ್ಠಬಂಧ ಬ್ರಹ್ಮಕಲಶೋತ್ಸವ ಏ. ೭ ಮತ್ತು ೮ರಂದು ನಡೆಯಲಿದೆ ಎಂದು ಶ್ರೀ ಕಾಲಬೈರೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಎಸ್.ಎಂ. ಚಂಗಪ್ಪ ಹೇಳಿದರು.ವೇದಬ್ರಹ್ಮ ರಘುಪತಿ ತಂತ್ರಿಯವರ ಪೌರೋಹಿತ್ಯದಲ್ಲಿ ವಿವಿಧ ಪೂಜೆಗಳು ನಡೆಯಲಿವೆ. ೭ರಂದು ಸಂಜೆ ೫-೩೦ಕ್ಕೆ ಗಣಪತಿ, ವಾಸ್ತು ಹೋಮ ನಡೆಯಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.೮ರಂದು ೮.೧೫ಕ್ಕೆ ಶ್ರೀ ಕಾಲಭೈರೇಶ್ವರ ಹಾಗೂ ಶ್ರೀ ವನದುರ್ಗಿದೇವಿಯ ಪ್ರತಿಷ್ಠಾಪನೆ ನೆರವೇರಲಿದೆ. ೧೦.೩೦ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಡಾ. ಮಂತರ್‌ ಗೌಡ, ಮಾಜಿ ಸಚಿವ ಬಿ.ಎ. ಜೀವಿಜಯ, ಎಂ.ಪಿ. ಅಪ್ಪಚ್ಚು ರಂಜನ್, ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ನಿರ್ದೇಶಕ ಹರಪಳ್ಳಿ ರವೀಂದ್ರ, ಉದ್ಯಮಿ ತಾಕೇರಿ ಗ್ರಾಮದ ಎ.ಎನ್. ಪದ್ಮನಾಭ ಭಾಗವಹಿಸುವರು.ಸುದ್ದಿಗೋಷ್ಠಿಯಲ್ಲಿ ಸಮಿತಿ ಖಜಾಂಚಿ ದೇವರಾಜ್, ನಿರ್ದೇಶಕರಾದ ರಘು, ಎಸ್.ಪಿ.ಪೊನ್ನಪ್ಪ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಡತನ ನೀಗಿದ್ದರೆ ಪ್ರಚಾರಕ್ಕೆ 5 ದಿನ ಬರಬೇಕಿತ್ತಾ?: ಕುಮಾರಸ್ವಾಮಿ
ಕಾರಜೋಳ-ಚರಂತಿಮಠ ಜೋಡಿ ಬಾಗಲಕೋಟೆ ಅಭಿವೃದ್ಧಿಗೆ ಮಾರಕ: ತಿಮ್ಮಾಪೂರ