ಬೇಲೂರಲ್ಲಿ ಶೀಘ್ರ ಪುನೀತ್‌ ಪುತ್ಥಳಿ ಸ್ಥಾಪನೆ

KannadaprabhaNewsNetwork |  
Published : Oct 30, 2024, 12:41 AM IST
ಕರ್ನಾಟಕ ರತ್ನ ದಿ.ಪುನೀತ್ ರಾಜಕುಮಾರ್ ರವರ ಮೂರನೇ ವರ್ಷ ಪುಣ್ಯ ಸ್ಮರಣೆಯನ್ನು ಬೇಲೂರು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿತ್ತು. | Kannada Prabha

ಸಾರಾಂಶ

ಪವರ್ ಸ್ಟಾರ್ ಪುನೀತ್‌ ರಾಜಕುಮಾರ್ ನಟನೆ ಜೊತೆಗೆ ಸಮಾಜಮುಖಿ ಕೆಲಸ ಮಾಡಿದ್ದು, ಅವರ ಪುತ್ಥಳಿಯನ್ನುಶೀಘ್ರವೇ ಸ್ಥಾಪನೆ ಮಾಡಲಾಗುತ್ತದೆ ಎಂದು ಪುರಸಭಾ ಅಧ್ಯಕ್ಷ ಎ.ಆರ್‌. ಅಶೋಕ್ ಹೇಳಿದರು. ಪಟ್ಟಣದ ಬಸ್‌ನಿಲ್ದಾಣದ ಮುಂದಿನ ಬಸವೇಶ್ವರ ವೃತ್ತ ಬಳಿಯಲ್ಲಿ ಡಾ.ರಾಜಕುಮಾರ್‌ ಅಭಿಮಾನಿ ಸಂಘ, ದಿ.ಪುನೀತ್‌ ರಾಜಕುಮಾರ್ ಅಭಿಮಾನಿ ಸಂಘದಿಂದ ಹಮ್ಮಿಕೊಂಡ ಪುನೀತ್‌ ಮೂರನೇ ವರ್ಷ ಪುಣ್ಯಸ್ಮರಣೆ ನಡೆಯಿತು.

ಕನ್ನಡಪ್ರಭ ವಾರ್ತೆ ಬೇಲೂರು

ಪವರ್ ಸ್ಟಾರ್ ಪುನೀತ್‌ ರಾಜಕುಮಾರ್ ನಟನೆ ಜೊತೆಗೆ ಸಮಾಜಮುಖಿ ಕೆಲಸ ಮಾಡಿದ್ದು, ಅವರ ಪುತ್ಥಳಿಯನ್ನುಶೀಘ್ರವೇ ಸ್ಥಾಪನೆ ಮಾಡಲಾಗುತ್ತದೆ ಎಂದು ಪುರಸಭಾ ಅಧ್ಯಕ್ಷ ಎ.ಆರ್‌. ಅಶೋಕ್ ಹೇಳಿದರು.

ಪಟ್ಟಣದ ಬಸ್‌ನಿಲ್ದಾಣದ ಮುಂದಿನ ಬಸವೇಶ್ವರ ವೃತ್ತ ಬಳಿಯಲ್ಲಿ ಡಾ.ರಾಜಕುಮಾರ್‌ ಅಭಿಮಾನಿ ಸಂಘ, ದಿ.ಪುನೀತ್‌ ರಾಜಕುಮಾರ್ ಅಭಿಮಾನಿ ಸಂಘದಿಂದ ಹಮ್ಮಿಕೊಂಡ ಪುನೀತ್‌ ಮೂರನೇ ವರ್ಷ ಪುಣ್ಯಸ್ಮರಣೆಯಲ್ಲಿ ಮಾತನಾಡಿದ ಅವರಲ್ಲಿನ ಸರಳತೆ ಮತ್ತು ಸೌಜನ್ಯತೆ ಜೊತೆಗೆ ಉಪಕಾರದ ಮನೋಭಾವನೆ ಜೊತೆಗೆ ತಮ್ಮ ನಟನೆಯಿಂದ ಜನರ ಮನಸ್ಸಿನಲ್ಲಿ ಉಳಿದಿದ್ದಾರೆ. ಪುನಿತ್ ಅವರು ಇಲ್ಲದಿದ್ದರೂ ಅಭಿಮಾನಿಗಳು ಪ್ರತಿ ವರ್ಷ ಅವರ ಹುಟ್ಟುಹಬ್ಬ ಮತ್ತು ಪುಣ್ಯಸ್ಮರಣೆಯನ್ನು ನಡೆಸುತ್ತಿರುವುದು ಅವರ ಮೇಲೆ ಅಭಿಮಾನಿಗಳು ಇಟ್ಟಿರುವ ಪ್ರೀತಿಯ ಸಂಕೇತವಾಗಿದೆ.

ಈಗಾಗಲೇ ಬೇಲೂರು ಪಟ್ಟಣದಲ್ಲಿ ಪುನೀತ್‌ ರಾಜಕುಮಾರ್ ಪುತ್ಥಳಿ ಸ್ಥಾಪಿಸಬೇಕು ಎಂದು ಪುರಸಭಾ ಮಾಜಿ ಅಧ್ಯಕ್ಷರಾದ ತೀರ್ಥಕುಮಾರಿ ವೆಂಕಟೇಶ್ ಅಧಿಕಾರ ಅವಧಿಯಲ್ಲಿ ಶುಂಕುಸ್ಥಾಪನೆ ನಡೆಸಲಾಗಿತ್ತು. ಪುನೀತ್‌ ರಾಜಕುಮಾರ್ ಪುತ್ಥಳಿಯನ್ನು ಈಗಾಗಲೇ ಸಿದ್ದತೆ ಮಾಡಿಕೊಳ್ಳಲಾಗಿದೆ. ಅಸಂಖ್ಯಾತ ಅಭಿಮಾನಿಗಳ ಸಮ್ಮುಖದಲ್ಲಿ ಪುನೀತ್‌ ರಾಜಕುಮಾರ್ ಪುತ್ಥಳಿಯನ್ನು ಸ್ಥಾಪಿಸಿ ಉದ್ಘಾಟನೆ ನಡೆಸಲಾಗುತ್ತದೆ ಎಂದು ಭರವಸೆ ನೀಡಿದರು. ಡಾ.ರಾಜಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ತೀರ್ಥಂಕರ್ ಮಾತನಾಡಿ, ಪುನೀತ್‌ ರಾಜಕುಮಾರ್ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಪ್ರಮುಖ ನಟರಾಗಿದ್ದರು. ಅವರ ಅಕಾಲಿಕ ಮರಣ ಅಭಿಮಾನಿಗಳಿಗೆ ಅಪಾರ ನೋವು ನೀಡಿದೆ. ಅವರು ತಮ್ಮ ಬದುಕಿನಲ್ಲಿ ನಡೆದುಕೊಂಡ ಆದರ್ಶ ಜೀವನ ಇನ್ನಿತರರು ಅಳವಡಿಸಿಕೊಳ್ಳಬೇಕಿದೆ. ಕರ್ನಾಟಕ ಸರ್ಕಾರ ಪುನೀತ್‌ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಜೊತೆಗೆ ಆರೋಗ್ಯ ಇಲಾಖೆ ಯೋಜನೆ ರೂಪಿಸಿ ಪ್ರಾಮಾಣಿಕ ಕೆಲಸ ಮಾಡಿದ್ದಾರೆ. ಈಗಾಗಲೇ ಪುರಸಭಾ ಅಧ್ಯಕ್ಷ ಪುನೀತ್‌ ರಾಜಕುಮಾರ್ ಪುತ್ಥಳಿ ಸ್ಥಾಪನೆ ಬಗ್ಗೆ ತಿಳಿಸಿದ್ದು ನಿಜಕ್ಕೂ ಸಂತೋಷ ತಂದಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ದಿ. ಪುನೀತ್‌ ರಾಜಕುಮಾರ್ ಅಭಿಮಾನಿ ಸಂಘದ ಪದಾಧಿಕಾರಿಗಳಾದ ರಾಜು ಸಮುಖ, ಮಾಳೇಗೆರೆ ತಾರಾನಾಥ್, ಸುಬ್ರಮಣ್ಯ, ಆಶೋಕ್ ಸೇರಿದಂತೆ ಇನ್ನೂ ಮುಂತಾದರಿದ್ದರು. ಪುಣ್ಯಸ್ಮರಣೆಯಲ್ಲಿ ಅಭಿಮಾನಿಗಳಿಗೆ ಲಘು ಉಪಹಾರ ವಿತರಿಸಲಾಯಿತು.

PREV

Recommended Stories

ದಸರಾ ವೇಳೆ ಬಾನುರಿಂದ 2023ರ ಘಟನೆ ಮರುಕಳಿಸಬಾರ್ದು : ಯದುವೀರ್‌
ಮೈಸೂರು ದಸರಾ: ಜಂಬೂಸವಾರಿ ಟಿಕೆಟ್‌ ₹3500, ಗೋಲ್ಡ್‌ಕಾರ್ಡ್ ₹6500