ಪಾಕಿಸ್ತಾನ್ ಎಂದವರನ್ನು ಕಠಿಣ ಶಿಕ್ಷೆಗೆ ಒಳಪಡಿಸಿ

KannadaprabhaNewsNetwork |  
Published : Mar 01, 2024, 02:17 AM IST
ಫೋಟೋ : 29ಕೆಎಂಟಿ_ಎಫ್ ಇಬಿ_ಕೆಪಿ1 : ಜನಪರ ಹೋರಾಟ ವೇದಿಕೆಯಿಂದ ತಹಸೀಲ್ದಾರ ಮೂಲಕ ರಾಜ್ಯಪಾಲರಿಗೆ ಗುರುವಾರ ಮನವಿ ಸಲ್ಲಿಸಲಾಯಿತು. ಶಾಸಕ ದಿನಕರ ಶೆಟ್ಟಿ, ಎಂ.ಜಿ.ಭಟ್, ಹೇಮಂತಕುಮಾರ , ಸತೀಶ ಗೌಡ ಇನ್ನಿತರರು ಇದ್ದರು.  | Kannada Prabha

ಸಾರಾಂಶ

ರಾಜ್ಯಸಭಾ ಚುನಾವಣೆಯಲ್ಲಿ ಜಯಗಳಿಸಿದ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ಅವರ ಹಿಂಬಾಲಕರು ವಿಧಾನಸೌಧದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗುವ ಮೂಲಕ ದೇಶದ್ರೋಹಿ ಕೃತ್ಯ ಎಸಗಿದ್ದಾರೆ.

ಕುಮಟಾ:

ರಾಜ್ಯಸಭಾ ಚುನಾವಣೆಯಲ್ಲಿ ಜಯಗಳಿಸಿದ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ಅವರ ಹಿಂಬಾಲಕರು ವಿಧಾನಸೌಧದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗುವ ಮೂಲಕ ದೇಶದ್ರೋಹಿ ಕೃತ್ಯ ಎಸಗಿದ್ದಾರೆ. ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು. ನೀಚ ಮನಸ್ಥಿತಿವುಳ್ಳರನ್ನು ಕೂಡಲೇ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜನಪರ ಹೋರಾಟ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಎಂ.ಜಿ. ಭಟ್ ಆಗ್ರಹಿಸಿದರು.ತಾಲೂಕು ಸೌಧದ ಎದುರು ಗುರುವಾರ ಜನಪರ ಹೋರಾಟ ವೇದಿಕೆಯಿಂದ ಸಾರ್ವಜನಿಕ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಮಾತನಾಡಿದರು.

ಜಿಲ್ಲಾಧ್ಯಕ್ಷ ಹೇಮಂತ್ ಕುಮಾರ ಗಾಂವಕರ ಮಾತನಾಡಿ, ನಮ್ಮ ನೆಲದಲ್ಲಿಯೇ ಕುಳಿತು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದವರನ್ನು ಈ ವರೆಗೂ ಬಂಧಿಸಿಲ್ಲ. ಇದರ ಹಿಂದೇ ಕಾಣದ ಕೈಗಳ ಕೈವಾಡವಿದೆ ಎಂದು ದೂರಿದರು.ಇಂತಹ ದೇಶದ್ರೋಹಿ ಹೇಳಿಕೆಗಳಿಂದ ಸಮಾಜದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾದಲ್ಲಿ ಸಮಾಜಕ್ಕೆ ಮಾರಕವಾಗಲಿದೆ. ಯಾವುದೇ ಭಾರತೀಯನು ಕೂಡ ಇಂಥ ದೇಶದ್ರೋಹದ ಹೇಳಿಕೆ ಸಹಿಸಲು ಸಾಧ್ಯವೇ ಇಲ್ಲ. ನಮ್ಮ ತಾಯ್ನಾಡಿಗಾಗಿ ಯಾವ ತ್ಯಾಗಕ್ಕೂ ಸಿದ್ಧವಿರುವ ಪ್ರಜೆಗಳನ್ನು ಹೊಂದಿರುವ ದೇಶ ನಮ್ಮದು. ನಾವು ಸುಮ್ಮನಿದ್ದೆವೆಂದರೆ ಅದು ನಮ್ಮ ಹೇಡಿತನವಲ್ಲ ಎಂದು ಎಚ್ಚರಿಸಿದರು.ಪಾಕಿಸ್ತಾನ ಜಿಂದಾಬಾದ್ ಎಂದು ಶಕ್ತಿ ಕೇಂದ್ರದಲ್ಲಿ ಕೂಗುವುದಾದಲ್ಲಿ ನಮ್ಮ ಆಡಳಿತ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದು ತಿಳಿಯುತ್ತದೆ ಎಂದ ಅವರು, ತಕ್ಷಣ ಆರೋಪಿ ಬಂಧಿಸಬೇಕು. ಇಲ್ಲದಿದ್ದರೆ ಮುಂದಿನ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದರು.ಶಾಸಕ ದಿನಕರ ಶೆಟ್ಟಿ, ರಾಮದಾಸ್ ಗುನಗಿ, ಆರ್‌.ಎನ್. ಹೆಗಡೆ, ಆದಿತ್ಯ ಶೇಟ್‌, ಗಜು ಪೈ, ಪ್ರಜ್ವಲ್ ನಾಯಕ, ಎಂ.ಎನ್. ಭಟ್, ಕಾರ್ತಿಕ್ ಭಟ್, ಸುರೇಶ ಹರಿಕಾಂತ, ಚಿದಾನಂದ ಲಕ್ಕು ಮನೆ, ಗೋಪಾಲ್ ಶೆಟ್ಟಿ, ಜಯಾ ಶೇಟ್, ಭಾಸ್ಕರ್ ಹರಿಕಂತ, ರಿತೇಶ, ತುಳಸು ಗೌಡ, ಸಣ್ಣ ಗೌಡ, ಉದಯ ಭಟ್, ಮೋಹನ ಮುದಂಗಿ,ರಾಮಚಂದ್ರ, ಮಂಜು, ಈಶ್ವರ,ನಾಗೇಶ, ಮಹಾಂತೇಶ ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...