ನಿರಾಪರಾಧಿಗಳಿಗೂ ಶಿಕ್ಷೆ ವಿಧಿಸಿದ್ದು ಸರಿಯಾದ ಕ್ರಮವಲ್ಲ: ಎ.ಆರ್. ಕೖಷ್ಣಮೂರ್ತಿ

KannadaprabhaNewsNetwork |  
Published : Aug 01, 2025, 11:45 PM IST
ಹುಲಿ ಸಾವು ಪ್ರಕರಣ  ನಿರಾಪರಾಧಿಗಳ ವಿರುದ್ದ ಕ್ರಮ,  ಯಾರನ್ನು ದೂಷಿಸಬೇಕು-  ಎ ಆರ್  ಕೖಷ್ಣಮೂರ್ತಿ ಪ್ರಶ್ನೆ | Kannada Prabha

ಸಾರಾಂಶ

ಈ ಪ್ರಕರಣದ್ಲಲಿ ಹಿಂದಿದ್ದ ಸಂತೋಷ್ ಕುಮಾರ್ ಅವರನ್ನು ಹೊಣೆಗಾರರನ್ನಾಗಿಸಬೇಕಿತ್ತು, ಆದರೆ ನಿರಾಪರಾಧಿಗಳನ್ನ ಈ ಪ್ರಕರಣದಲ್ಲಿ ಶಿಕ್ಷಿಸಲಾಗಿದೆ.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ರಾಷ್ಟ್ರಪ್ರಾಣಿ ಹುಲಿಗೆ ವಿಷಾಪ್ರಾಶನ ನಿಜಕ್ಕೂ ಘೋರವಾದುದು. ಆದರೆ ಈ ಪ್ರಕರಣದಲ್ಲಿ ನಿರಾಪರಾಧಿಗಳಿಗೂ ಶಿಕ್ಷೆ ವಿಧಿಸಿದ್ದು ಸರಿಯಾದ ಕ್ರಮವಲ್ಲ. ಅಧಿಕಾರಿಗಳ ಲೋಪವು ಇಲ್ಲಿತ್ತು. ಹಾಗಾಗಿ ಇಲ್ಲಿ ಯಾರನ್ನು ದೂಷಿಸಬೇಕು ಎಂಬುದೆ ತಿಳಿಯದಾಗಿದೆ ಎಂದು ಶಾಸಕ ಎ.ಆರ್. ಕೖಷ್ಣಮೂರ್ತಿ ಹೇಳಿದರು.

ಅವರ ಆದರ್ಶ ಶಾಲೆಯಲ್ಲಿ ಅಯೋಜಿಸಲಾಗಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿ, ಮಹದೇಶ್ವರ ವನ್ಯಧಾಮದಲ್ಲಿ ರೈತರ ಹಸು ಹುಲಿ ತಿಂದಿದೆ ಎಂಬ ಕಾರಣಕ್ಕೆ ಆರೈತ ಕುಟುಂಬ ಸತ್ತ ಹಸುವಿಗೆ ಕ್ರಿಮಿನಾಶಕ ಸಿಂಪಡಿಸಿ ಹುಲಿಗಳ ಸಾವಿಗೆ ಕಾರಣವಾದದ್ದು ಘೋರ ದುರಂತ. ಇದು ರಾಷ್ಟ್ರಮಟ್ಟದಲ್ಲೂ ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಇದೆ ವಿಚಾರವನ್ನು ಸರ್ಕಾರ ಗಮನದಲ್ಲಿಟ್ಟುಕೊಂಡು ಇಲಾಖಾ ಸಿಬ್ಬಂದಿಗೆ ವೇತನ ನೀಡಿರಲಿಲ್ಲ ಎಂಬ ಕಾರಣಕ್ಕೆ ಕೆಲ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ.

ಈ ಪ್ರಕರಣದ್ಲಲಿ ಹಿಂದಿದ್ದ ಸಂತೋಷ್ ಕುಮಾರ್ ಅವರನ್ನು ಹೊಣೆಗಾರರನ್ನಾಗಿಸಬೇಕಿತ್ತು, ಆದರೆ ನಿರಾಪರಾಧಿಗಳನ್ನ ಈ ಪ್ರಕರಣದಲ್ಲಿ ಶಿಕ್ಷಿಸಲಾಗಿದೆ. ಹಾಗಾಗಿ ಈಗ ಈ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಅದನ್ನು ಅರ್ಥ ಮಾಡಿಕೊಂಡು ಜಾಗೖತರಾಗಿ ಕೆಲಸಮಾಡಿ, 2023-24ನೇ ಸಾಲಿನಿಂದಲೂ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳನ್ನು ಬಿಟ್ಟು ಹುಲಿ ಸಾವಿನ ಪ್ರಕರಣಕ್ಕೆ ವೇತನ ನೀಡಿರಲಿಲ್ಲ ಎಂಬುದನ್ನು ಮನನ ಮಾಡಿಕೊಂಡು ಈ ಪ್ರಕರಣದಲ್ಲಿ ಭಾಗಿಯಾಗಿಲ್ಲದ ನಿರಾಪರಾಧಿಗಳ ವಿರುದ್ದ ಕ್ರಮ ಆಗಿದೆ.

ಹಾಗಾಗಿ ಇಲ್ಲಿ. ಯಾರನ್ನು ದೂಷಿಸಬೇಕು ಎಂಬುದೆ ತಿಳಿಯದಾಗಿದೆ. ಈ ಹಿನ್ನೆಲೆ ಈಗಿನ ಅಧಿಕಾರಿಗಳು ಈ ಪ್ರಕರಣದ ಗಂಭೀರತೆ ಅರಿತು ಜಾಗ್ರತೆಯಿಂದ ಕೆಲಸ ಮಾಡಿ. ಅರಣ್ಯಾಧಿಕಾರಿಗಳ ಕೆಲಸ ಸುಲಭದ್ದಲ್ಲ. ಅದೇ ರೀತಿ ಅರಣ್ಯ ರಕ್ಷಣೆ, ಅಲ್ಲಿನ ವನ್ಯಜೀವಿಗಳ ಸಂರಕ್ಷಣೆ ಎಲ್ಲರ ಜವಾಬ್ದಾರಿಯೂ ಆಗಿದೆ ಎಂದರು.

ಆದರ್ಶ ಸರ್ಕಾರಿ ವಿದ್ಯಾಲಯದ ಮಕ್ಕಳು ಕಲಿಕೆಯಲ್ಲಿ ಮುಂಚೂಣಿ ಕಾಯ್ದುಕೊಂಡಿದ್ದಾರೆ. ಸರ್ಕಾರ ಗ್ರಾಮೀಣ ಪ್ರದೇಶದ ಮಕ್ಕಳು ಕಲಿಕೆಯಲ್ಲಿ ಮುಂದೆ ಬರಬೇಕು ಎಂದು ಅನೇಕ ಕಾರ್ಯಕ್ರಮ ರೂಪಿಸಿದೆ. ಇದನ್ನ ಮಕ್ಕಳು ಸದ್ಬಳಕೆ ಮಾಡಿಕೊಳ್ಳಬೇಕು. ಅರಣ್ಯ ಇಲಾಖೆ ಅಯೋಜಿಸಿರುವ ವನಮಹೋತ್ಸವ ಅರ್ಥಪೂರ್ಣ ಕಾರ್ಯಕ್ರಮ ಎಂದು ಶ್ಲಾಘಿಸಿದರು.

ಈ ವೇಳೆ ಚಾ.ನಗರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೊಂಗನೂರು ಚಂದ್ರು,

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಮಲೈ ಮಹದೇಶ್ವರ ವನ್ಯಜೀವಿ ವಿಭಾಗದ ಅರಣ್ಯ ಉಪ ಸಂರಕ್ಷಣಾಧಿಕಾರಿ ಭಾಸ್ಕರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಕ್ಷಯ್ ಕುಮಾರ್, ಚಾ.ನಗರ ಎಸಿಎಫ್ ಸಂದೀಪ್, ವಲಯ ಅರಣ್ಯಾಧಿಕಾರಿ ರವಿಕುಮಾರ ಪುರಾಣಿಕಮಠ, ಸಾಮಾಜಿಕ ಅರಣ್ಯ ವಲಯಾಧಿಕಾರಿ ಪ್ರಫುಲ್ಲಾ ಕೆ.ಪಿ , ಬಿ.ಆರ್.ಟಿ ವಲಯ ಅಧಿಕಾರಿ ವಾಸು, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ಆದರ್ಶ ಶಾಲೆಯ ಮುಖ್ಯಶಿಕ್ಷಕಿ ಪ್ರಿಯದರ್ಶಿನಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ತೋಟೇಶ್, ಎಸ್.ಡಿ‌.ಎಂ.ಸಿ ಅಧ್ಯಕ್ಷ ಲಿಂಗರಾಜು, ಉಪಾಧ್ಯಕ್ಷೆ ವನಿತಾ ಮಂಜೇಶ್, ಮಾಜಿ ಅಧ್ಯಕ್ಷ ಪ್ರಕಾಶ್ ಇನ್ನಿತರಿದ್ದರು

-------1ಕೆಜಿಎಲ್ 30ಕೊಳ್ಳೇಗಾಲದ ಆದರ್ಶ ಶಾಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ಅಯೋಜಿಸಲಾಗಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ

ಶಾಸಕ ಎ.ಆರ್. ಕೖಷ್ಣಮೂರ್ತಿ ಮಾತನಾಡಿದರು.

-

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ